ಫೆಡರರ್, ಮರ್ರೆಗೆ ಸುಲಭ ಜಯ

ಆಕ್ರಮಣಕಾರಿ ಆಟ ಪ್ರದರ್ಶಿಸಿದ ಮಾಜಿ ಚಾಂಪಿಯನ್ ಸ್ವಿಜರ್ಲೆಂಡ್‍ನ ರೋಜರ್ ಫೆಡರರ್, ವರ್ಷದ ಕಡೆಯ ಗ್ರಾಂಡ್ ಸ್ಲಾಂ ಟೂರ್ನಿಯಾಗಿರುವ ಯುಎಸ್ ಓಪನ್‍ನಲ್ಲಿ ಶುಭಾರಂಭ ಮಾಡಿದ್ದಾರೆ...
ಫೆಡರರ್ ಮತ್ತು ಮರ್ರೆ (ಸಂಗ್ರಹ ಚಿತ್ರ)
ಫೆಡರರ್ ಮತ್ತು ಮರ್ರೆ (ಸಂಗ್ರಹ ಚಿತ್ರ)

ನ್ಯೂಯಾರ್ಕ್: ಆಕ್ರಮಣಕಾರಿ ಆಟ ಪ್ರದರ್ಶಿಸಿದ ಮಾಜಿ ಚಾಂಪಿಯನ್ ಸ್ವಿಜರ್ಲೆಂಡ್‍ನ ರೋಜರ್ ಫೆಡರರ್, ವರ್ಷದ ಕಡೆಯ ಗ್ರಾಂಡ್ ಸ್ಲಾಂ ಟೂರ್ನಿಯಾಗಿರುವ ಯುಎಸ್ ಓಪನ್‍ನಲ್ಲಿ   ಶುಭಾರಂಭ ಮಾಡಿದ್ದಾರೆ.

ಮಂಗಳವಾರ ತಡರಾತ್ರಿ ಆರಂಭವಾದ ಪುರುಷರ ಸಿಂಗಲ್ಸ್ ವಿಭಾಗದ ಮೊದಲ ಸುತ್ತಿನ ಪಂದ್ಯದಲ್ಲಿ ರೋಜರ್ ಫೆಡರರ್, ತಮ್ಮ ಪ್ರತಿಸ್ಪರ್ಧಿ ಅರ್ಜೆಂಟೀನಾದ ಲಿಯೋನಾರ್ಡೊ ಮೇಯರ್ ವಿರುದ್ಧ 61, 62, 62 ನೇರ ಸೆಟ್‍ಗಳ ಸುಲಭ ಗೆಲುವು ಸಾಧಿಸಿದರು. 77 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ರೋಜರ್ ಫೆಡರರ್ ಸಂಪೂರ್ಣ ಪ್ರಾಬಲ್ಯ ಮೆರೆದರು. ಪಂದ್ಯದ ಆರಂಭಿಕ  ಹಂತದಿಂದ ಅಂತ್ಯದವರೆಗೂ ಅರ್ಜೆಂಟೀನಾ ಆಟಗಾರನನ್ನು ಕಾಡಿದ ಮಾಜಿ ಚಾಂಪಿಯನ್, ಯಾವುದೇ ಹಂತದಲ್ಲೂ ಪ್ರತಿಸ್ಪರ್ಧಿಯಿಂದ ಪ್ರತಿರೋಧ ಎದುರಿಸಲಿಲ್ಲ. ಪಂದ್ಯದಲ್ಲಿ ಒಟ್ಟು 12 ಏಸಸ್‍ಗಳನ್ನು ಸಿಡಿಸಿದ ಫೆಡರರ್ ಉತ್ತಮ ಲಯದಲ್ಲಿರುವುದನ್ನು ಸಾಬೀತುಪಡಿಸಿದರು. ತಮ್ಮ ಸರ್ವ್‍ನ ಶೇ.84ರಷ್ಟು ಮೇಲುಗೈ ಸಾಧಿಸಿ ಮಿಂಚು ಹರಿಸಿದರು. ಇನ್ನು ಪುರುಷರ  ವಿಭಾಗದ ಮತ್ತೊಂದು ಪಂದ್ಯದಲ್ಲಿ ಮೂರನೇ ಶ್ರೇಯಾಂಕಿತ ಆಟಗಾರ ಬ್ರಿಟನ್‍ನ ಆ್ಯಂಡಿ ಮರ್ರೆ ತಮ್ಮ ಪ್ರತಿಸ್ಪರ್ಧಿ ಆಸ್ಟ್ರೇಲಿಯಾದ ನಿಕ್ ಕಿರ್ಗಿಯೋಸ್ ಅವರನ್ನು 75, 63, 46, 61  ಸೆಟ್‍ಗಳ ಅಂತರದಲ್ಲಿ ಮಣಿಸಿದರು.

2 ಗಂಟೆ 43 ನಿಮಿಷಗಳ ಕಾಲ ನಡೆದ ಜಿದ್ದಾಜಿದ್ದಿನ ಹೋರಾಟದಲ್ಲಿ ಮರ್ರೆ ಅಂತಿಮ ನಗೆಬೀರಿದರು. ಇನ್ನು ಸ್ಟಾನಿಸ್ಲಾಸ್ ವಾವ್ರಿಂಕಾ ತಮ್ಮ ಪ್ರತಿಸ್ಪರ್ಧಿ ಆಲ್ಬರ್ಟ್ ರಾಮೊಸ್ ವಿರುದ್ಧ 75, 64, 76 (86) ಸೆಟ್‍ಗಳ ಅಂತರದಲ್ಲಿ ಜಯಿಸಿ ಮುಂದಿನ ಸುತ್ತಿಗೆ ಧಾವಿಸಿದರು. ಗೆದ್ದ ಫೆರರ್ ಬುಧವಾರ ನಡೆದ ಪುರುಷರ ಸಿಂಗಲ್ಸ್‍ನ ಎರಡನೇ ಸುತ್ತಿನ ಪಂದ್ಯದಲ್ಲಿ 7ನೇ ಶ್ರೇಯಾಂಕಿತ ಡೇವಿಡ್  ಫೆರರ್ ಗೆಲವು ದಾಖಲಿಸಿ ಮುಂದಿನ ಸುತ್ತಿಗೆ ಪ್ರವೇಶಿಸಿದ್ದಾರೆ. 2 ಗಂಟೆ 22 ನಿಮಿಷಗಳ ಕಾಲ ನಡೆದ ಪಂದ್ಯದಲ್ಲಿ ಡೇವಿಡ್ ಫೆರರ್, ತಮ್ಮ ಪ್ರತಿಸ್ಪರ್ಧಿ ಸರ್ಬಿಯಾದ ಫೆಲಿಪ್ ಕ್ರಾಂಜಿನೊವಿಚ್ ವಿರುದ್ಧ 75, 75, 76(74) ಸೆಟ್‍ಗಳಿಂದ ಮಣಿಸಿದರು.

ವೋಜ್ನಿಯಾಕಿಗೆ ಜಯ
ಇತ್ತ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ನಾಲ್ಕನೇ ಶ್ರೇಯಾಂಕಿತ ಆಟಗಾರ್ತಿ, ಡೆನ್ಮಾರ್ಕ್‍ನ ಕ್ಯಾರೋಲಿನಾ ವೊಜ್ನಿಯಾಕಿ ದ್ವಿತೀಯ ಸುತ್ತಿಗೆ ಲಗ್ಗೆ ಇಟ್ಟಿದ್ದಾರೆ. ವೊಜ್ನಿಯಾಕಿ ತಮ್ಮ ಪ್ರತಿಸ್ಪರ್ಧಿ  ಅಮೆರಿಕದ ಜ್ಯಾಮಿ ಲೆಬ್ ವಿರುದ್ಧ 62, 60 ನೇರ ಸೆಟ್‍ಗಳ ಸುಲಭ ಗೆಲುವು ದಾಖಲಿಸಿದರು. ಇನ್ನು 14ನೇ ಶ್ರೇಯಾಂಕ ಪಡೆದಿದ್ದ ಟಿಮಿಯಾ ಬಾಸಿಂಸ್ಕಿ ತಮ್ಮ ಎದುರಾಳಿ ಜೆಕ್ ಗಣರಾಜ್ಯದ ಬಾರ್ಬೊರ ಸ್ಟ್ರೇಕೋವಾ ವಿರುದ್ಧ 57, 06 ನೇರ ಸೆಟ್‍ಗಳ ಅಂತರದಲ್ಲಿ ಸೋಲನುಭವಿಸಿದರೆ, ಜೆಕ್ ರಿಪಬ್ಲಿಕ್‍ನ ಪೆಟ್ರಾ ಕ್ವಿಟೋವಾ ಜರ್ಮನಿಯ ಲೌರಾ ಸಿಗೆಮುಂಡ್ ವಿರುದ್ಧ ವಿರುದ್ಧ 61,  61ರ ಎರಡು ನೇರ ಸೆಟ್‍ಗಳಲ್ಲಿ ವಿಜೃಂಭಿಸಿದರು. ಐದನೇ ಶ್ರೇಯಾಂಕಿತೆ ಕ್ವಿಟೋವಾ ಆಕ್ರಮಣಕಾರಿ ಆಟ ಹೇಗಿತ್ತೆಂದರೆ ಎರಡೂ ಸೆಟ್‍ಗಳಲ್ಲಿ ಕೇವಲ ಒಂದೊಂದೇ ಗೇಮ್ ಗಳನ್ನಷ್ಟೇ  ಜರ್ಮನ್ ಆಟಗಾರ್ತಿ ಗೆಲ್ಲಲು ಸಾಧ್ಯವಾಯಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com