ಚಾಂಪಿಯನ್ನರಿಗೆ ಶಾಕ್ ನೀಡಿದ ಶಿವಮೊಗ್ಗ

ಹಾಲಿ ಚಾಂಪಿಯನ್ ಆಗಿ ಕಣಕ್ಕಿಳಿದಿರುವ ಮೈಸೂರು ವಾರಿಯರ್ಸ್ ತಂಡ ಪ್ರಸಕ್ತ ಕೆಪಿಎಲ್ ಟೂರ್ನಿಯ ಆರಂಭದಲ್ಲೇ ಆಘಾತ ಅನುಭವಿಸಿದೆ...
ಕೆಪಿಎಲ್ ಪಂದ್ಯದ ರೋಚಕ ಕ್ಷಣ
ಕೆಪಿಎಲ್ ಪಂದ್ಯದ ರೋಚಕ ಕ್ಷಣ

ಹುಬ್ಬಳ್ಳಿ: ಹಾಲಿ ಚಾಂಪಿಯನ್ ಆಗಿ ಕಣಕ್ಕಿಳಿದಿರುವ ಮೈಸೂರು ವಾರಿಯರ್ಸ್ ತಂಡ ಪ್ರಸಕ್ತ ಕೆಪಿಎಲ್ ಟೂರ್ನಿಯ ಆರಂಭದಲ್ಲೇ ಆಘಾತ ಅನುಭವಿಸಿದೆ.

ಇದೇ ಮೊದಲ ಬಾರಿಗೆ ಟೂರ್ನಿಗೆ ಕಾಲಿಟ್ಟಿರುವ ನಮ್ಮ ಶಿವಮೊಗ್ಗ ತಂಡ ಉತ್ತಮ ಪ್ರದರ್ಶನ ನೀಡುವ ಮೂಲಕ ವಾರಿಯಸ್ರ್ ಗೆ ಶಾಕ್ ನೀಡಿದೆ. ಟಾಸ್ ಗೆದ್ದ ನಮ್ಮ ಶಿವಮೊಗ್ಗ ಫೀಲ್ಡಿಂಗ್ ಆಯ್ಕೆ  ಮಾಡಿಕೊಂಡಿತು. ನಂತರ ಮೈಸೂರು ತಂಡ 20 ಓವರ್ ಗಳಲ್ಲಿ 6 ವಿಕೆಟ್‍ಗೆ 160 ರನ್ ದಾಖಲಿಸಿತು. ಈ ಮೊತ್ತವನ್ನು ಬೆನ್ನಟ್ಟಿದ ಶಿವಮೊಗ್ಗ ತಂಡ 19.2 ಓವರ್‍ಗಳಲ್ಲಿ 4 ವಿಕೆಟ್ ನಷ್ಟಕ್ಕೆ 161  ರನ್ ದಾಖಲಿಸುವ ಮೂಲಕ ಜಯಭೇರಿ ಬಾರಿಸಿತು. ಸ್ಪರ್ಧಾತ್ಮಕ ಮೊತ್ತವನ್ನು ಬೆನ್ನಟಿ್ಟ0ದ ನಮ್ಮ ಶಿವಮೊಗ್ಗ ತಂಡಕ್ಕೆ ಆರಂಭಿಕರಾದ ಸಾದಿಕ್ ಕಿರ್ಮಾನಿ (29) ಮತ್ತು ಅಬ್ರಾರ್ ಖಾಜಿ (21)  ಅವರಿಂದ ಉತ್ತಮ ಆರಂಭ ಸಿಕ್ಕಿತು.

ನಂತರ ಬಂದ ಶ್ರೇಯಸ್ ಗೋಪಾಲ್ 30 ಎಶೆತಗಳಲ್ಲಿ 7 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ ಅಜೇಯ 49 ರನ್ ದಾಖಲಿಸಿ ಗೆಲುವಿನಲ್ಲಿ ಬಹುಮುಖ್ಯ ಪಾತ್ರವಹಿಸಿ   ಪಂದ್ಯಶ್ರೇಷ್ಠರೆನಿಸಿದರು. ಮೈಸೂರು ಪರ ಶಾಂತರಾಜು 2, ಅಕ್ಷಯ್ 1 ವಿಕೆಟ್ ಪಡೆದರು. ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ ಮೈಸೂರು ವಾರಿಯರ್ಸ್ ಪರ ಅರ್ಜುನ್ ಹೊಯ್ಸಳ (44)  ಮತ್ತು ಮಂಜೇಶ್ ರೆಡ್ಡಿ (45) ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದರು. ಬೌಲಿಂಗ್‍ನಲ್ಲಿ ಶಿವಮೊಗ್ಗ ಪರ ಅಬ್ದುಲ್ ಖಾದೆರ್ 2, ಖಾಜಿ, ಆದಿತ್ಯ, ಬಾವೇಶ್ ತಲಾ 1 ವಿಕೆಟ್  ಪಡೆದರು.

ಸಂಕ್ಷಿಪ್ತ ಸ್ಕೋರ್: ಮೈಸೂರು 20 ಓವರ್‍ಗಳಲ್ಲಿ 6 ವಿಕೆಟ್ ಗೆ 160 (ಹೊಯ್ಸಳ 44, ಮಂಜೇಶ್ ರೆಡ್ಡಿ 45, ಅಬ್ದುಲ್ 35ಕ್ಕೆ 2); ಶಿವಮೊಗ್ಗ 19.2 ಓವರ್‍ಗಳಲ್ಲಿ 4 ವಿಕೆಟ್‍ಗೆ 161 (ಸಾದಿಕ್ 29, ಅಬ್ಬಾಸ್ 26, ಶಾಂತರಾಜು 35ಕ್ಕೆ 2).

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com