
ವಿಶ್ವ ಬ್ಯಾಡ್ಮಿಂಟನ್ ರ್ಯಾಂಕಿಂಗ್‍ನಲ್ಲಿ ಅಗ್ರಸ್ಥಾನಕ್ಕೆ ಏರಿಕೆಯಾದ ನಂತರ ಜಾಹೀರಾತು ಕ್ಷೇತ್ರದಲ್ಲಿ ಸೈನಾ ನೆಹ್ವಾಲ್ ಮಾರುಕಟ್ಟೆ ಗಣನೀಯವಾಗಿ ಹೆಚ್ಚಿದ್ದು, ಕ್ರಿಕೆಟ್ ತಾರೆಯಾರಾದ ಮಹೇಂದ್ರ ಸಿಂಗ್ ಧೋನಿ ಹಾಗೂ ವಿರಾಟ್ ಕೊಹ್ಲಿ ಸಮೀಪಕ್ಕೆ ಸಾಗಿದ್ದಾರೆ.
ಸೈನಾ ನೆಹ್ವಾಲ್ ವಿಶ್ವ ಚಾಂಪಿಯನ್ ಶಿಪ್ ಮುಕ್ತಾಯವಾದ ನಂತರ ಅಗ್ರಸ್ಥಾನಕ್ಕೇರಿ ದರು. ಈ ಹದಿನೈದು ದಿನಗಳ ಅವಧಿ ಯಲ್ಲಿ ಸೈನಾ ನೆಹ್ವಾಲ್, ಫೈನಾನ್ಸಿಯಲ್ ಸರ್ವೀಸಸ್ ಗ್ರೂಪ್ ಎಡೆಲ್ ವೈಸ್ ಜತೆ 3 ವರ್ಷಗಳ ಅವಧಿಗೆ ರೂ. 12 ಕೋಟಿ ಮೊತ್ತದ ಒಪ್ಪಂದ ಮಾಡಿಕೊಂಡಿದ್ದಾರೆ. ಈ ಒಪ್ಪಂದದ ಮೂಲಕ ಸೈನಾ ನೆಹ್ವಾಲ್ ಪ್ರತಿ ವರ್ಷ ರೂ. 4 ಕೋಟಿ ರಾಯಭಾರಿ ಸಂಭಾವನೆ ಪಡೆಯಲಿದ್ದಾರೆ.
ಈ ಮೂಲಕ ಕ್ರಿಕೆಟ್ ತಾರೆಯರಾ ದ ಮಹೇಂದ್ರ ಸಿಂಗ್ ಧೋನಿ ಹಾಗೂ ವಿರಾಟ್ ಕೊಹ್ಲಿ ನಂತರ ಅತಿ ಹೆಚ್ಚು ಸಂಭಾವನೆ ಪಡೆಯುತ್ತಿರುವ ಕ್ರೀಡಾಪಟು ಎನಿಸಿದ್ದಾರೆ. ಧೋನಿ ವರ್ಷವೊಂ ದರಲ್ಲಿ ಜಾಹೀರಾತು ಒಂದರಿಂದ 8ರಿಂದ 10 ಕೋಟಿ ಪಡೆದರೆ, ಕೊಹ್ಲಿ 6ರಿಂದ 7 ಕೋಟಿ ಆದಾಯ ಹೊಂದಿದ್ದಾರೆ. ಇನ್ನು ಮುಂದೆ ದೇಶಿಯ ಹಾಗೂ ಅಂತಾರಾಷ್ಟ್ರೀಯ ಟೂರ್ನಿಗಳಲ್ಲಿ ಸೈನಾ ತಮ್ಮ ಜರ್ಸಿಯ ಮೇಲೆ ಎಡೆಲ್‍ವೈಸ್ ಕಂಪನಿಯ ಲೋಗೊ ಧರಿಸಲಿದ್ದು. ರಾಯಭಾರಿಯಾಗಿಯೂ ಕಾರ್ಯ ನಿರ್ವಹಿಸಲಿದ್ದಾರೆ. ಈವರೆಗೂ ಸೈನಾ
ಪ್ರತಿ ವರ್ಷ ಹರ್ಬಲೈಫ್ , ಸ್ಟಾರ್ಸ್ ಸ್ಪೋರ್ಟ್ಸ್, ಗೊಡ್ರೆಜ್ ನೊ ಮಾರ್ಕ್ಸ್, ಇಮಾಮಿ, ಇಂಡಿಯನ್ ಒವರ್‍ಸೀಸ್ ಬ್ಯಾಂಕ್, ಐಯೋಡೆಕ್ಸ್ ಮತ್ತು ಕಮ್ಯೂನ್ ಬಿಲ್ಡರ್ ಜತೆಗೆ ಒಪ್ಪಂದ ಮಾಡಿಕೊಂಡು 5-7 ಕೋಟಿ ಪಡೆಯುತ್ತಿದ್ದರು. ಸೈನಾ ಇತ್ತೀಚೆಗಷ್ಟೇ ಐಒಎಸ್ ಸ್ಪೋರ್ಟ್ಸ್ ಮತ್ತು ಎಂಟರ್‍ಟೇನ್‍ಮೆಂಟ್ ಜತೆಗೆ ಒಪ್ಪಂಧ ಮಾಡಿಕೊಂಡಿದ್ದರು. ಈ ಒಪ್ಪಂದಲ್ಲಿ ಮುಂದಿನ 2 ವರ್ಷಗಳಲ್ಲಿ ಸುಮಾರು ರೂ. 25 ಕೋಟಿ ಗಳಿಕೆ
ಹೊಂದಿದ್ದಲಿದ್ದಾರೆ.
Advertisement