
ಆಸ್ಟ್ರೇಲಿಯಾದ ಖ್ಯಾತ ಆಲ್ರೌಂಡರ್ ಶೇನ್ ವ್ಯಾಟ್ಸನ್ ಅಂತಾರಾಷ್ಟ್ರೀಯ ಟೆಸ್ಟ್ ಕ್ರಿಕೆಟ್ ಗೆ ದಿಢೀರನೆ ನಿವೃತ್ತಿ ಘೋಷಿಸಿದ್ದಾರೆ.
34 ವರ್ಷದ ಶೇನ್ ವ್ಯಾಟ್ಸನ್ ಇತ್ತೀಚೆಗೆ ನಡೆದ ಇಂಗ್ಲೆಂಡ್ ವಿರುದ್ಧದ ಆಶ್ಯಸ್ ಸರಣಿಯ ಮೊದಲ ಟೆಸ್ಟ್ ಪಂದ್ಯದಲ್ಲಿ ಕಡೇಯ ಬಾರಿಗೆ ಕಣಕ್ಕೀಳಿದಿದ್ದರು. ಆ ಪಂದ್ಯದಲ್ಲಿ ಇಂಗ್ಲೆಂಡ್ ತಂಡ 169 ರನ್ ಗಳಿಂದ ಗೆಲವು ದಾಖಲಿಸಿತ್ತು.
ಆಲ್ರೌಂಡರ್ ಆಗಿ ಕಣಕ್ಕಿಳಿದಿದ್ದ ವ್ಯಾಟ್ಸನ್ ಮೊದಲ ಇನ್ನಿಂಗ್ಸ್ ನಲ್ಲಿ 30 ಹಾಗೂ ಎರಡನೇ ಇನಿಂಗ್ಸ್ ನಲ್ಲಿ 19 ರನ್ ಗಳಿಸಿದರು. ಬೌಲಿಂಗ್ ನಲ್ಲಿ ವಿಕೆಟ್ ಪಡೆಯಲು ವಿಫಲರಾಗಿದ್ದರು. ನಂತರ ಸರಣಿಯಲ್ಲಿ ತಂಡದಲ್ಲಿ ಸ್ಥಾನ ವಂಚಿತರಾದರು. ಈಗ ಇಂಗ್ಲೆಂಡ್ ವಿರುದ್ಧದ ಎರಡನೇ ಏಕದಿನ ಪಂದ್ಯದ ನಂತರ ವ್ಯಾಟ್ಸನ್ ನಿವೃತ್ತಿ ಘೋಷಿಸಿರುವುದು ಅಚ್ಚರಿ ತಂದಿದೆ. ಪದೇ ಪದೇ ಗಾಯದ ಸಮಸ್ಯೆಗೆ ತುತ್ತಾಗುತ್ತಿದ್ದು ಅವರ ನಿವೃತ್ತಿಯ ನಿರ್ಧಾರದ ಹಿಂದಿನ ಕಾರಣವೆಂದು ಕೆಲ ಮಾಧ್ಯಮಗಳು ವಿಶ್ಲೇಷಿಸಿದೆ.
ಭಾನುವಾರ ಕ್ರಿಕೆಟ್ ಆಸ್ಟ್ರೇಲಿಯಾ ತನ್ನ ವೆಬ್ ಸೈಟ್ ನಲ್ಲಿ ವ್ಯಾಟ್ಸನ್ ಅವರ ನಿವೃತ್ತಿ ವಿಷಯವನ್ನು ಘೋಷಿಸಿದೆ. ಟೆಸ್ಟ್ ಕ್ರಿಕೆಟ್ ಗೆ ತೆರೆ ಎಳೆಯಲು ಇದು ಉತ್ತಮ ಸಮಯ. ಇನ್ನು ಏಕದಿನ ಹಾಗೂ ಟಿ20 ಮಾದರಿಯಲ್ಲಿ ಮತ್ತಷ್ಟು ವರ್ಷಗಳ ಕಾಲ ಆಡುವ ವಿಶ್ವಾಸವಿರುವುದಾಗಿ ವ್ಯಾಟ್ಸನ್ ತಿಳಿಸಿದ್ದಾರೆ.
ವ್ಯಾಟ್ಸನ್ ಟೆಸ್ಟ್ ವೃತ್ತಿ ಜೀವನ
ಪಂದ್ಯ- 59
ರನ್- 3,731
ಸರಾಸರಿ- 35.19
ಗರಿಷ್ಠ - 176
50/100 - 24/4
ವಿಕೆಟ್ - 75
ಶ್ರೇಷ್ಠ - 33ಕ್ಕೆ6
Advertisement