ಪಿಸಿಬಿ ಭಾವನಾತ್ಮಕ ಗಾಳ!

ಅಂತಾರಾಷ್ಟ್ರೀ ಕ್ರಿಕೆಟ್ ಮಂಡಳಿ(ಐಸಿಸಿ)ಯಲ್ಲಿ ಬಿಗ್ ಟ್ರೀ ಆಡಳಿತ ವ್ಯವಸ್ಥೆ ಜಾರಿಗೆ ತರುವ ಬಿಸಿಸಿಐನ ಮಹತ್ವಾಕಾಂಕ್ಷೆಗೆ ಬೆಂಬಲ ನೀಡದ್ದಕ್ಕೆ ಪ್ರತಿಯಾಗಿ...
ಶಹರ್ಯಾರ್ ಖಾನ್
ಶಹರ್ಯಾರ್ ಖಾನ್
Updated on

ಕರಾಚಿ: ಅಂತಾರಾಷ್ಟ್ರೀ ಕ್ರಿಕೆಟ್ ಮಂಡಳಿ(ಐಸಿಸಿ)ಯಲ್ಲಿ ಬಿಗ್ ಟ್ರೀ ಆಡಳಿತ ವ್ಯವಸ್ಥೆ ಜಾರಿಗೆ ತರುವ ಬಿಸಿಸಿಐನ ಮಹತ್ವಾಕಾಂಕ್ಷೆಗೆ ಬೆಂಬಲ ನೀಡದ್ದಕ್ಕೆ ಪ್ರತಿಯಾಗಿ, ಪಾಕಿಸ್ತಾನ ಕ್ರಿಕೆಟ್ ಮಂಡಳಿ(ಪಿಸಿಬಿ)ಗೆ ಬಿಸಿಸಿಐ, ಭಾರತ-ಪಾಕಿಸ್ತಾನ ಕ್ರಿಕೆಟ್ ಸರಣಿಗೆ ಅಸ್ತು ಎನ್ನುವ ಮೂಲಕ ಋಣ ತೀರಬೇಕೆಂದು ಪಿಸಿಬಿ ಅಧ್ಯಕ್ಷ ಶಹರ್ಯಾರ್ ಖಾನ್ ಅಭಿಪ್ರಾಯಪಟ್ಟಿದ್ದಾರೆ.

ಬಿಗ್ ಟ್ರೀ ವಿಚಾರದಲ್ಲಿ ತನ್ನನ್ನು ಬೆಂಬಲಿಸಿದರೆ, ಭಾರತ-ಪಾಕಿಸ್ತಾನ ಕ್ರಿಕೆಟ್ ಸರಣಿಗೆ ಪುನಃ ಚಾಲನೆ ನೀಡುವುದಾಗಿ ಬಿಸಿಸಿಐ ಆಶ್ವಾಸನೆ ನೀಡಿತ್ತು.

ಅದರಂತೆ, ಪಿಸಿಬಿ, ಬಿಸಿಸಿಐಯನ್ನು ಬೆಂಬಲಿಸಿತ್ತು. ಇದೀಗ, ಕೊಟ್ಟ ಮಾತಿನಂತೆ ಬಿಸಿಸಿಐ, ಭಾರತ-ಪಾಕ್ ಕ್ರಿಕೆಟ್ ಸರಣಿಯನ್ನು ಪುನರಾರಂಭಿಸಬೇಕು ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com