
ಮುಂಬೈ: ಫಿಫಾ 2018ರ ವಿಶ್ವಕಪ್ ಟೂರ್ನಿಯ ಅರ್ಹತಾ ಸುತ್ತಿನಲ್ಲಿ ಭಾರತ ಎದುರಿಸಲಿರುವ ತುಕ್ರ್ ಮೆನಿಸ್ತಾನ್ ವಿರುದ್ಧದ ಪಂದ್ಯ ಅತ್ಯಂತ ಮಹತ್ವನೀಯವಾಗಿದೆ ಎಂದು ಭಾರತ ಫುಟ್ಬಾಲ್ ತಂಡದ ನಾಯಕ ಸುನೀಲ್ ಛೆಟ್ರಿ ಅಭಿಪ್ರಾಯಪಟ್ಟಿದ್ದಾರೆ.
ಭಾರತ ಈಗಾಗಲೇ ಒಮನ್ ವಿರುದ್ಧ 1-2, ಗುಹಾಮ್ ವಿರುದ್ಧ 1-2, ಇರಾನ್ ವಿರುದ್ಧ 0-3 ಗೋಲುಗಳ ಅಂತರದಲ್ಲಿ ಸೋತಿದೆ.
ಆರಂಭಿಕ ಮೂರು ಪಂದ್ಯಗಳಲ್ಲಿ ಸೋತಿರುವುದು ಭಾರತಕ್ಕೆ ನಿರಾಸೆ ತರಿಸಿದೆ. ತುಕ್ರ್ ಮೆನಿಸ್ತಾನ ವಿರುದ್ಧದ ಮುಂದಿನ ಪಂದ್ಯದಲ್ಲಿ ಗೆಲುವು ಸಾಧಿಸಲು ತಂಡ ದಿಟ್ಟ ಹೋರಾಟ ನಡೆಸಲಿದೆ ಎಂದು ಛೆಟ್ರಿ ಹೇಳಿದ್ದಾರೆ.
Advertisement