ಕಾಕಿನಾಡ: ಪೂರ್ವ ಗೋದಾವರಿ ಜಿಲ್ಲಾ ಅಥ್ಲೆಟಿಕ್ಸ್ ಸಂಸ್ಥೆ ಹಾಗೂ ಆಂಧ್ರಪ್ರದೇಶ ಅಥ್ಲೆಟಿಕ್ಸ್ ಸಂಸ್ಥೆ ಜಂಟಿಯಾಗಿ ಆಯೋಜಿಸಿರುವ 27ನೇ ದಕ್ಷಿಣ ವಲಯ ಕಿರಿಯರ ರಾಷ್ಟ್ರೀಯ ಅಥ್ಲೆಟಿಕ್ಸ್ ಕ್ರೀಡಾಕೂಟದ ಮೊದಲ ದಿನವಾದ ಗುರುವಾರ ರಾಜ್ಯಕ್ಕೆ ಒಂದು ಬೆಳ್ಳಿ ಪದಕ ಲಭ್ಯವಾಗಿದೆ.
5 ಸಾವಿರ ಮೀಟರ್ ಓಟದ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ರಾಜ್ಯದ ಅಕ್ಷತಾ ನಿಗದಿತ ದೂರವನ್ನು 19: 52.6 ಸೆಕೆಂಡ್‍ಗಳಲ್ಲಿ ಮುಟ್ಟಿ ಬೆಳ್ಳಿ ಪದಕ ಗೆದ್ದುಕೊಂಡರು. ಇದೇ ವಿಭಾಗದಲ್ಲಿ ಸ್ಪರ್ಧಿಸಿದ್ದ ತಮಿಳುನಾಡಿನ ಜ್ಯೋತಿ ಆರ್. (18:50.6 ಸೆ.) ಹಾಗೂ ಕೇರಳದ ವರ್ಷಾ ಎಂ.ವಿ. (20: 52.6 ಸೆ.) ಕ್ರಮವಾಗಿ ಚಿನ್ನ ಹಾಗೂ ಕಂಚಿನ ಗೌರವ ಪಡೆದರು.
Advertisement