ಬ್ಯಾಸ್ಕೆಟ್‍ಬಾಲ್: ಭಾರತದ ಐತಿಹಾಸಿಕ ಕ್ವಾರ್ಟರ್ ಸಾಧನೆ

ಬಲಿಷ್ಠ ಫಿಲಿಫ್ಪೈನ್ಸ್ ವಿರುದ್ದ 65-99 ಅಂತರದಲ್ಲಿ ಸೋಲು ಕಂಡರೂ, 28ನೇ ಫೀಬಾ ಏಷ್ಯನ್ ಬ್ಯಾಸ್ಕೆಟ್‍ಬಾಲ್ ಪಂದ್ಯಾವಳಿಯಲ್ಲಿ ದಶಕದ ನಂತರ ....
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಹುನಾನ್: ಬಲಿಷ್ಠ ಫಿಲಿಫ್ಪೈನ್ಸ್ ವಿರುದ್ದ 65-99 ಅಂತರದಲ್ಲಿ ಸೋಲು ಕಂಡರೂ, 28ನೇ ಫೀಬಾ ಏಷ್ಯನ್ ಬ್ಯಾಸ್ಕೆಟ್‍ಬಾಲ್ ಪಂದ್ಯಾವಳಿಯಲ್ಲಿ ದಶಕದ ನಂತರ ಭಾರತ ಕ್ವಾರ್ಟರ್ ಫೈನಲ್ ತಲುಪುವುದರೊಂದಿಗೆ ಐತಿಹಾಸಿಕ ಸಾಧನೆ ಮಾಡಿದೆ.

ಮಂಗಳವಾರ ನಡೆದ 8ರ ಘಟ್ಟಕ್ಕೆ ಕಾಲಿಡುವ `ಇ' ಗುಂಪಿನ ಪಂದ್ಯದಲ್ಲಿ ಭಾರತಕ್ಕೆ ತೀವ್ರ ಸ್ಪರ್ಧೆಯೊಡ್ಡಿದ ಫಿಲಿಪ್ಪೈನ್ಸ್ ಎದುರು ಜಯ ಸಾಧಿಸಲು ಸಾಕಷ್ಟು ಪರಿಶ್ರಮಿಸಿದರೂ, ಭಾರತಕ್ಕೆ ಸಾಧ್ಯವಾಗಲಿಲ್ಲ. ಇತ್ತ ಪ್ಯಾಲೆಸ್ತೀನ್ ತಂಡವನ್ನು ಮಂಗಳವಾರ ನಡೆದ ಮತ್ತೊಂದು ಲೀಗ್ ಪಂದ್ಯದಲ್ಲಿ ಇರಾನ್ ತಂಡ 48-98 ಅಂತರದಲ್ಲಿ ಸೋಲಿಸಿತು. ಹೀಗಾಗಿ, ಭಾರತಕ್ಕೆ 8ರ ಘಟ್ಟದ ಪ್ರವೇಶ ಸುಗಮವಾಯಿತು. ಜತೆಗೆ ಲೀಗ್ ಹಂತದ ಮೂರು ಪಂದ್ಯಗಳಲ್ಲಿ 2ರಲ್ಲಿ ಗೆಲುವು ಸಾಧಿಸಿದ ಭಾರತ, 2003ರ ನಂತರ ಅಂತಿಮ ಎಂಟರ ಹಂತಕ್ಕೆ ಪ್ರವೇಶಿಸುವಂತಾಯಿತು

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com