ಶ್ರೀನಿವಾಸನ್ ಅರ್ಜಿ ತಿರಸ್ಕೃತ

ಸ್ವಹಿತಾಸಕ್ತಿ ಸಂಘರ್ಷಕ್ಕೆ ಸಂಬಂಧಿಸಿ ಈಗಾಗಲೇ ತಾನು ನೀಡಿರುವ ತೀರ್ಪಿನ ಅನ್ವಯ ಮಾಜಿ ಬಿಸಿಸಿಐ ಅಧ್ಯಕ್ಷ ಎನ್. ಶ್ರೀನಿವಾಸನ್ ಭಾರತೀಯ ಕ್ರಿಕೆಟ್ ನಿಯಂತ್ರಣ ...
ಎನ್. ಶ್ರೀನಿವಾಸನ್
ಎನ್. ಶ್ರೀನಿವಾಸನ್
Updated on

ನವದೆಹಲಿ: ಸ್ವಹಿತಾಸಕ್ತಿ ಸಂಘರ್ಷಕ್ಕೆ ಸಂಬಂಧಿಸಿ ಈಗಾಗಲೇ ತಾನು ನೀಡಿರುವ ತೀರ್ಪಿನ ಅನ್ವಯ ಮಾಜಿ ಬಿಸಿಸಿಐ ಅಧ್ಯಕ್ಷ ಎನ್. ಶ್ರೀನಿವಾಸನ್ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ  ಸಭೆಯಲ್ಲಿ  ಪಾಲ್ಗೋಳ್ಳಲು ಅನರ್ಹರು ಎಂದು ಎಂದು ಸರ್ವೋಚ್ಚ ನ್ಯಾಯಾಲಯ ಪುನರುಚ್ಚರಿಸಿದ್ದು, ಇದರಿಂದ ಎರಡನೇ ಅವಧಿಗೆ ಶಶಾಂಕ್ ಮನೋಹರ್ ಬಿಸಿಸಿಐ ಅಧ್ಯಕ್ಷಗಾದಿಗೆ ಏರುವುದು ನಿಚ್ಚಳವಾದಂತಾಗಿದೆ.

ತಮಿಳುನಾಡು ಕ್ರಿಕೆಟ್ ಸಂಸ್ಥೆಯ (ಟಿಎನ್‍ಸಿಎ) ಅಧ್ಯಕ್ಷರಾಗಿ ಬಿಸಿಸಿಐ ಸರ್ವ ಸದ್ಯಸರ ಸಭೆಯಲ್ಲಿ ಶ್ರೀನಿವಾಸನ್ ಭಾಗವಹಿಸಬಹುದೇ ಎಂದು ಸ್ಪಷ್ಟನೆ  ಕೋರಿ  ಬಿಸಿಸಿಐ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ.  ಇದರಿಂದ ಮುಂಬೈನಲ್ಲಿ ಅಕ್ಟೋಬರ್ 4ರಂದು
ಬಿಸಿಸಿಐ ¸ಸರ್ವ ಸದಸ್ಯರ ವಿಶೇಷ ಸಭೆ  ನಡೆಯುವುದು ಖಾತ್ರಿಯಾಗಿದ್ದು, ಸ್ವಚ್ಛ ಆಡಳಿತಾಧಿಕಾರಿ ಎಂದೇ ಬಿಂಬಿತವಾಗಿರುವ  ಶಶಾಂಕ್ ಶರ್ಮಾ  ಅಗಲಿದ ಬಿಸಿಸಿಐ ಅಧ್ಯಕ್ಷ ಜಗಮೋಹನ್ ದಾಲ್ಮಿಯ ಅವರ ಸ್ಥಾನವನ್ನು 2ನೇ ಅವಧಿಗೆ ಅಲಂಕರಿಸುವುದು ಇನ್ನಷ್ಟು
ಸ್ಪುಟವಾಗಿದೆ. ಈ ಮಧ್ಯೆ ಮಾಧ್ಯಮಗಳಿಗೆ ಪ್ರತಿಕ್ರಿಯೆ  ನೀಡಿರುವ ಬಿಸಿಸಿಐ ಕಾರ್ಯದರ್ಶಿ ಅನುರಾಗ್ ಠಾಕೂರ್  ನ್ಯಾಯಾಲಯದ ಈ ತೀರ್ಪಿನ ಹಿನ್ನೆಲೆಯಲ್ಲಿ ಶ್ರೀನಿವಾಸನ್ ಸಭೆಯಲ್ಲಿ  ಭಾಗವಹಿಸಲು ಅನರ್ಹರೆನಿಸಿದರೂ, ಅವರು ತಮ್ಮ ಮತ ಚಲಾಯಿಸಬಹುದಾಗಿದೆ ಎಂದು ತಿಳಿಸಿದ್ದಾರೆ.

ಜಗಮೋಹನ್ ದಾಲ್ಮಿಯಾ ನಿಧನದಿಂದಾಗಿ ಹಂಗಾಮಿ ಅಧ್ಯಕ್ಷರ ಆಯ್ಕೆ ಸಂಬಂಧ ಬಿಸಿಸಿಐ ಸರ್ವಸದಸ್ಯರ ಸಭೆ ಕರೆಯಲು ಮುಂದಾಗಿತ್ತಾದರೂ, ಶ್ರೀನಿವಾಸನ್  ಈ  ಸಭೆಯಲ್ಲಿ  ಭಾಗವಹಿಸಬಹುದೇ ಇಲ್ಲವೇ ಎಂಬುದರ ಕುರಿತು ಸ್ಪಷ್ಟನೆ ನೀಡುವಂತೆ  ಸೆ. 12ರಂದು ಸರ್ವೋಚ್ಚ ನ್ಯಾಯಾಲಯದಲ್ಲಿ ಮನವಿ ಮಾಡಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com