ಅನುರಾಗ್ ಠಾಕೂರ್ ವಿರುದ್ಧ ಸುಪ್ರೀಂಗೆ ಶ್ರೀನಿವಾಸನ್

ತನ್ನ ವಿರುದ್ಧ ಷಡ್ಯಂತ್ರ ಹೆಣೆದಿರು ವುದಲ್ಲದೆ, ಸುಳ್ಳು ಸಾಕ್ಷ್ಯ ಹೇಳಿಕೆಗಳ ಮೂಲಕ ದಿಕ್ಕು ತಪ್ಪಿಸುತ್ತಿರುವ ಬಿಸಿಸಿಐ ಕಾರ್ಯದರ್ಶಿ ಅನುರಾಗ್ ಠಾಕೂರ್ ವಿರುದ್ಧ...
ಶ್ರೀನಿವಾಸನ್
ಶ್ರೀನಿವಾಸನ್
ನವದೆಹಲಿ: ತನ್ನ ವಿರುದ್ಧ ಷಡ್ಯಂತ್ರ ಹೆಣೆದಿರು ವುದಲ್ಲದೆ, ಸುಳ್ಳು ಸಾಕ್ಷ್ಯ ಹೇಳಿಕೆಗಳ ಮೂಲಕ ದಿಕ್ಕು ತಪ್ಪಿಸುತ್ತಿರುವ ಬಿಸಿಸಿಐ ಕಾರ್ಯದರ್ಶಿ ಅನುರಾಗ್ ಠಾಕೂರ್ ವಿರುದ್ಧ ಕಾನೂನುರೀತ್ಯಾ ಕ್ರಮ ಕೈಗೊಳ್ಳ ಬೇಕೆಂದು ಐಸಿಸಿ ಅಧ್ಯಕ್ಷ ಎನ್. ಶ್ರೀನಿವಾಸನ್ ಬುಧವಾರ ಸುಪ್ರೀಂ ಕೋರ್ಟ್‍ನಲ್ಲಿ ಅರ್ಜಿ ದಾಖಲಿಸಿದ್ದಾರೆ ಎಂದು ಖಾಸಗಿ ಪತ್ರಿಕೆಯೊಂದು ವರದಿ ಮಾಡಿದೆ.
ಭಾರತೀಯ ದಂಡಸಂಹಿತೆಯ 193 ಮತ್ತು 209ರ ಕಲಂ ಅನ್ವಯ ಶ್ರೀನಿವಾಸನ್ ನ್ಯಾಯಾಲಯದಲ್ಲಿ ಠಾಕೂರ್ ವಿರುದ್ಧ ಅರ್ಜಿ ಸಲ್ಲಿಸಿದ್ದಾರೆ. 'ಆಗಸ್ಟ್ 28ರಂದು ಕೋಲ್ಕತಾದಲ್ಲಿ ನಡೆದ ಬಿಸಿಸಿಐ ಕಾರ್ಯಕಾರಿ ಸಭೆಯಲ್ಲಿ ಶ್ರೀನಿವಾಸನ್ ಪಾಲ್ಗೊಳ್ಳಲು ಬಯಸಿದ್ದಾರೆ. ಆದರೆ ಹಿತಾಸಕ್ತಿ ಸಂಘರ್ಷದಲ್ಲಿ ಸಿಲುಕಿರುವ ಅವರು ಈ ಸಭೆಯಲ್ಲಿ ಭಾಗವಹಿಸಬಹುದೇ ಎಂದು ಬಿಸಿಸಿಐ ಕಾರ್ಯ ದರ್ಶಿ ಅನುರಾಗ್ ಠಾಕೂರ್ ಸುಪ್ರೀಂಗೆ ಸಲ್ಲಿಸಿದ್ದ ಅರ್ಜಿಯಲ್ಲಿ ಸ್ಪಷ್ಟನೆ ಕೋರಿದ್ದರು. 
ಅಂತೆಯೇ ಈ ಅರ್ಜಿಯಲ್ಲಿ ಶ್ರೀನಿವಾಸನ್ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ ಮಾಲೀಕರಾಗಿದ್ದು, ಇದು ಅವರು ಹಿತಾಸಕ್ತಿ ಸಂಘರ್ಷದಲ್ಲಿ ಸಿಲುಕಿದ್ದಾರೆ ಎಂಬುದನ್ನು ಸ್ಪಷ್ಟೀಕರಿಸುತ್ತಿದೆ ಎಂದೂ ಹೇಳಲಾಗಿತ್ತು'' ಎಂಬ ಠಾಕೂರ್ ಅರ್ಜಿಯನ್ನು ತಾವು ಸಲ್ಲಿಸಿರುವ ಅರ್ಜಿ ಯಲ್ಲಿ ಉಲ್ಲೇಖಿಸಿರುವ ಶ್ರೀನಿ, ಠಾಕೂರ್ ಅವರ ಹೇಳಿಕೆ ಹಾಗೂ ವರದಿಯಲ್ಲವೂ 'ಸಂಪೂರ್ಣವಾಗಿ ಆಧಾರರಹಿತ'ವಾಗಿದೆ ಎಂದು ವಾದಿಸಿದ್ದಾರೆ. ಜತೆಗೆ, ಬಿಸಿಸಿಐ ಖಜಾಂಚಿ ಅನಿರುದ್ಧ್ ಚೌಧರಿ, ಬಿಸಿಸಿಐ ಉಪಾಧ್ಯಕ್ಷ ಟಿ.ಸಿ. ಮ್ಯಾಥ್ಯೂ ಹಾಗೂ ಕೇರಳ ಕ್ರಿಕೆಟ್ ಸಂಸ್ಥೆ ಜಂಟಿ ಕಾರ್ಯದರ್ಶಿ ಜಯೇಶ್ ಜಾರ್ಜ್ ಅವರ ಅಫಿಡ ವಿಟ್ ಗಳನ್ನೂ ನ್ಯಾಯಾಲಯಕ್ಕೆ ನೀಡಿದ್ದಾರೆ. ಈ ಅಫಿಡವಿಟ್‍ಗಳು 'ಶ್ರೀನಿವಾಸನ್ ಬಿಸಿಸಿಐ ನಡೆಸುವ ಎಲ್ಲ ಸಭೆಗಳಲ್ಲಿಯೂ ಭಾಗವಹಿಸುತ್ತಿದ್ದರಲ್ಲದೆ, ಅವರ ಉಪಸ್ಥಿತಿ ಯನ್ನು ಯಾರೊಬ್ಬರೂ ಪ್ರಶ್ನಿಸುತ್ತಿರಲಿಲ್ಲ. ಅಂತೆಯೇ ಈ ಸಭೆಯನ್ನೇನೂ ವಿಡಿಯೇ ಚಿತ್ರೀಕರಿಸಿರಲಿಲ್ಲ'' ಎಂದು ತಿಳಿಸಿದ್ದಾರೆ.
ಶಶಾಂಕ್ ಪಟ್ಟಕ್ಕೆ ರಹಸ್ಯ ಮಾತುಕತೆ 
ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕೆ ಶಶಾಂಕ್ ಮನೋಹರ್ ಅವರನ್ನು ಮತ್ತೊಮ್ಮೆ ಕೂರಿಸುವ ಸಂಬಂಧ ಭಾನುವಾರ ಕೇಂದ್ರ ವಿತ್ತಸಚಿವ ಅರುಣ್ ಜೇಟ್ಲಿ ಮತ್ತು ಬಿಸಿಸಿಐ ಕಾರ್ಯದರ್ಶಿ ಅನುರಾಗ್ ಠಾಕೂರ್ ರಹಸ್ಯ ಮಾತುಕತೆ ನಡೆಸಿದ್ದರೆಂದು ಮುಂಬೈ ಮಿರರ್ ವರದಿ ಮಾಡಿದೆ. ವಾಸ್ತವವಾಗಿ ಭಾನುವಾರ ಮುಂಬೈ ಗಣೇಶ ವಿಸರ್ಜನೆ ಹಿನ್ನೆಲೆಯಲ್ಲಿ ಬ್ಯುಸಿಯಾಗಿದ್ದರೆ, ಬಿಸಿಸಿಐ ಅಧ್ಯಕ್ಷ ಸ್ಥಾನಕ್ಕಾಗಿ ಜೇಟ್ಲಿ ಮತ್ತು ಠಾಕೂರ್ ಅಲ್ಲದೆ, ಬಿಸಿಸಿಐನ ಪ್ರಮುಖರು ಸಭೆ ಸೇರಿ ಶಶಾಂಕ್ ಆಯ್ಕೆ ಸಂಬಂಧ ಗಂಭೀರ ಮತುಕತೆ ನಡೆಸಿದರೆನ್ನಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com