
ರಿಯೋ ಡಿ ಜನೈರೋ: ರಿಯೋ ಒಲಿಂಪಿಕ್ಸ್ ನಲ್ಲಿ ಭಾರತ ಪುರುಷರ ಹಾಕಿ ತಂಡ ಶುಭಾರಂಭ ಮಾಡಿದೆ.
ಒಲಿಂಪಿಕ್ಸ್ ಹಾಕಿ ಸೆಂಟರ್ ನಲ್ಲಿ ನಡೆದ ಪಂದ್ಯದಲ್ಲಿ ರೂಪಿಂದರ್ ಪಾಲ್ ಸಿಂಗ್(27. 49ನೇ ನಿಮಿಷ) ಎರಡು ಗೋಲು ಹಾಗೂ ಕನ್ನಡಿಗ ವಿಆರ್ ರಘುನಾಥ್ ಸಿಡಿಸಿದ ಏಕೈಕ ಗೋಲಿನ ನೆರವಿನಿಂದ ಭಾರತ ತಂಡ 3-2 ಅಂತರದಿಂದ ಐರ್ಲೆಂಡ್ ತಂಡವನ್ನು ಮಣಿಸಿದೆ.
ಭಾರತ ಹಾಕಿ ತಂಡ 12 ವರ್ಷಗಳ ಬಳಿಕ ಒಲಿಂಪಿಕ್ಸ್ ನಲ್ಲಿ ಮೊದಲ ಪಂದ್ಯ ಗೆದ್ದ ಸಾಧನೆ ಮಾಡಿದೆ. 2004ರ ಸಿಡ್ನಿ ಒಲಿಂಪಿಕ್ಸ್ ನಲ್ಲಿ ಕೊನೆಯದಾಗಿ ಭಾರತ ಹಾಕಿ ತಂಡ ಶುಭಾರಂಭ ಕಂಡಿತ್ತು.
Advertisement