ನಿವೃತ್ತಿ ನಿರ್ಧಾರ ಬದಲಿಸಿದ ಲಿಯೋನಲ್ ಮೆಸ್ಸಿ, ಶೀಘ್ರದಲ್ಲೇ ತಂಡಕ್ಕೆ ಸೇರ್ಪಡೆ

ಕೋಪಾ ಅಮೆರಿಕಾ ಫೈನಲ್ ಪಂದ್ಯದಲ್ಲಿ ಅರ್ಜೆಂಟೀನಾ ತಂಡ ಸೋಲು ಅನುಭವಿಸಿದ ಹಿನ್ನಲೆಯಲ್ಲಿ ಅಂತಾರಾಷ್ಟ್ರೀಯ ಫುಟ್ ಬಾಲ್ ಗೆ ದಿಢೀರ್ ನಿವೃತ್ತಿ ಘೋಷಿಸಿದ್ದ ಫುಟ್ ಬಾಲ್ ತಾರೆ ಲಿಯೋನಲ್ ಮೆಸ್ಸಿ ತಮ್ಮ ನಿರ್ಧಾರವನ್ನು ವಾಪಸ್ ಪಡೆದಿದ್ದಾರೆ.
ಲಿಯೋನಲ್ ಮೆಸ್ಸಿ (ಸಂಗ್ರಹ ಚಿತ್ರ)
ಲಿಯೋನಲ್ ಮೆಸ್ಸಿ (ಸಂಗ್ರಹ ಚಿತ್ರ)

ನ್ಯೂಜೆರ್ಸಿ: ಕೋಪಾ ಅಮೆರಿಕಾ ಫೈನಲ್ ಪಂದ್ಯದಲ್ಲಿ ಅರ್ಜೆಂಟೀನಾ ತಂಡ ಸೋಲು ಅನುಭವಿಸಿದ ಹಿನ್ನಲೆಯಲ್ಲಿ ಅಂತಾರಾಷ್ಟ್ರೀಯ ಫುಟ್ ಬಾಲ್ ಗೆ ದಿಢೀರ್ ನಿವೃತ್ತಿ ಘೋಷಿಸಿದ್ದ ಫುಟ್  ಬಾಲ್ ತಾರೆ ಲಿಯೋನಲ್ ಮೆಸ್ಸಿ ತಮ್ಮ ನಿರ್ಧಾರವನ್ನು ವಾಪಸ್ ಪಡೆದಿದ್ದಾರೆ.

ಅರ್ಜೆಂಟೀನಾ ಪ್ರಧಾನಿ  ಕ್ರಿಸ್ಟಿನಾ ಫರ್ನಾಂಡಿಸ್ ಡಿ ಕಿಚ್ನರ್, ಖ್ಯಾತ ಫುಟ್ ಬಾಲ್ ದಂತಕಥೆ ಡಿಯಾಗೋ ಮರಡೋನಾ ಸೇರಿದಂತೆ ಹಲವು ಗಣ್ಯರು ಮೆಸ್ಸಿ ನಿರ್ಧಾರವನ್ನು ವಿರೋಧಿಸಿದ್ದರು.  ಅಲ್ಲದೆ ಮೆಸ್ಸಿ ಅವರ ಆಟದ ಅವಶ್ಯಕತೆ ಅರ್ಜೆಂಟೀನಾ ತಂಡಕ್ಕೆ ಇನ್ನೂ ಇದೆ. ಹೀಗಾಗಿ ಮೆಸ್ಸಿ ತಮ್ಮ ನಿರ್ಧಾರವನ್ನು ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದ್ದರು. ಈ ಹಿನ್ನಲೆಯಲ್ಲಿ ಇಂದು  ಲಿಯೋನಲ್ ಮೆಸ್ಸಿ ತಮ್ಮ ನಿವೃತ್ತಿ ನಿರ್ಧಾರವನ್ನು ವಾಪಸ್ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ. ಅಲ್ಲದೆ ಶೀಘ್ರದಲ್ಲಿಯೇ ಮೆಸ್ಸಿ ಅಂತಾರಾಷ್ಟ್ರೀಯ ಫುಟ್ ಬಾಲ್ ಗೆ ಮರಳಿ ತಮ್ಮ ರಾಷ್ಟ್ಕೀಯ  ತಂಡ ಅರ್ಜೆಂಟೀನಾವನ್ನು ಪ್ರತಿನಿಧಿಸಲಿದ್ದಾರೆ ಎಂದು ತಿಳಿದುಬಂದಿದೆ.

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಮೆಸ್ಸಿ, "ಅರ್ಜೆಂಟೀನಾ ನನಗೆ ಎಲ್ಲವನ್ನು ಕೊಟ್ಟಿದೆ. ಈಗ ನಾನು ವಾಪಸ್ ನೀಡಬೇಕು. ಅರ್ಜೆಂಟೀನಾ ತಂಡದಲ್ಲಿ ಈಗಾಗಲೇ ಸಾಕಷ್ಟು ಸಮಸ್ಯೆಯಿದೆ.  ನನ್ನಿಂದ ಇನ್ನಷ್ಟು ಸಮಸ್ಯೆ ಹೆಚ್ಚಾಗುವುದು ಬೇಡ" ಎಂದು ಹೇಳಿದ್ದಾರೆ.

ಕೋಪಾ ಅಮೆರಿಕಾದಲ್ಲಿ ಪೆನಾಲ್ಟಿ ಕಿಕ್ ಮಿಸ್ ಮಾಡಿಕೊಂಡು ಗೆಲುವು ಕೈತಪ್ಪಿದ್ದಕ್ಕೆ ಅಸಮಾಧಾನಗೊಂಡಿದ್ದ ಮೆಸ್ಸಿ ಪಂದ್ಯ ಮುಕ್ತಾಯದ ಬಳಿಕ ಅಂತಾರಾಷ್ಟ್ರೀಯ ಫುಟ್ಬಾಲ್ ಗೆ ನಿವೃತ್ತಿ  ಘೋಷಿಸಿದ್ದರು. ಅಂದಿನ ಟೂರ್ನಿಯ ಫೈನಲ್ ಪಂದ್ಯದಲ್ಲಿ ಚಿಲಿ ದೇಶದ ವಿರುದ್ದ ಅಂರ್ಜೆಟೀನಾದ ತಂಡ ೪-೨ ಗೋಲುಗಳಿಂದ ಪೆನಾಲ್ಟಿ ಶೂಟೌಟ್‌ನಲ್ಲಿ ಸೋಲು ಅನುಭಸಿತ್ತು. ಸೋಲಿನ  ನೈತಿಕ ಹೊಣೆ ಹೊತ್ತು ಅಂತಾರಾಷ್ಟ್ರೀಯ ಫುಟ್ಬಾಲ್‌ನಿಂದಲೇ ಮೆಸ್ಸಿ ನಿವೃತ್ತಿ ಘೋಷಿಸಿದ್ದರು. ಹಾಗೂ 29 ವರ್ಷದ ಪುಟ್ಬಾಲ್ ಆಟಗಾರ ಮೆಸ್ಸಿ ರಾಷ್ಟ್ರೀಯ ತಂಡದ ಪರವಾಗಿ ಆಡುವ  ಸಮಯದಲ್ಲಿ ನನ್ನ ಸಮಯ ಮುಗೀತು, ಎಲ್ಲಾ ಸಮಯದಲ್ಲಿಯೂ ನಾನು ಚೆನ್ನಾಗಿಯೇ ಆಡಿದ್ದೇನೆ. ಆದರೆ ಚಾಂಪಿಯನ್ ಆಗಿಲ್ಲ ಎನ್ನುವುದಕ್ಕೆ ನನಗೆ ನೋವುಂಟು ಮಾಡಿದೆ ಎಂದು ಬೇಸರ  ವ್ಯಕ್ತಪಡಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com