ಮತ್ತೆ ಕಣಕ್ಕಿಳಿಯಲಿದ್ದಾರೆ ನಿಷೇಧಿತ ಟೆನ್ನಿಸ್ ಆಟಗಾರ್ತಿ ಮರಿಯಾ ಶರಪೋವಾ!

ಉದ್ದೀಪನ ಮದ್ದು ಸೇವಿಸಿ ಸಿಕ್ಕಿಬಿದ್ದು ನಿಷೇಧಕ್ಕೊಳಗಾರಿರುವ ರಷ್ಯಾದ ಖ್ಯಾತ ಟೆನ್ನಿಸ್ ಆಟಗಾರ್ತಿ ಮರಿಯಾ ಶರಪೋವಾ ಮತ್ತೆ ಕಣಕ್ಕಿಳಿಯುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.
ನಿಷೇಧಕ್ಕೊಳಗಾಗಿರುವ ಮರಿಯಾ ಶರಪೋವಾ (ಸಂಗ್ರಹ ಚಿತ್ರ)
ನಿಷೇಧಕ್ಕೊಳಗಾಗಿರುವ ಮರಿಯಾ ಶರಪೋವಾ (ಸಂಗ್ರಹ ಚಿತ್ರ)

ಮಾಸ್ಕೋ: ಉದ್ದೀಪನ ಮದ್ದು ಸೇವಿಸಿ ಸಿಕ್ಕಿಬಿದ್ದು ನಿಷೇಧಕ್ಕೊಳಗಾರಿರುವ ರಷ್ಯಾದ ಖ್ಯಾತ ಟೆನ್ನಿಸ್ ಆಟಗಾರ್ತಿ ಮರಿಯಾ ಶರಪೋವಾ ಮತ್ತೆ ಕಣಕ್ಕಿಳಿಯುವ ಸಾಧ್ಯತೆಗಳಿವೆ ಎಂದು  ಮೂಲಗಳು ತಿಳಿಸಿವೆ.

ರಷ್ಯಾ ಟೆನ್ನಿಸ್ ಸಂಸ್ಥೆ ನೀಡಿರುವ ಮಾಹಿತಿಯಂತೆ ಮುಂಬರುವ ಜನವರಿ ತಿಂಗಳಿನಿಂದ ಮರಿಯಾ ಶರಪೋವಾ ಅವರು ಕಣಕ್ಕಿಳಿಯಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಮಾಧ್ಯಮಗಳಿಗೆ  ಮಾಹಿತಿ ನೀಡಿರುವ ರಷ್ಯಾ ಟೆನ್ನಿಸ್ ಮುಖ್ಯಸ್ಥ ಶಮಿ ಟರ್ಪಿಶ್ಚೆವ್ ಅವರು, "ಖಚಿತವಾಗಿ ಹೇಳಲು ಕಷ್ಟವಾದರೂ ಮರಿಯಾ ಶರಪೋವಾ ಮುಂಬರುವ ಜನವರಿಯಿಂದ ಕಣಕ್ಕಿಳಿಯುವ ಸಾಧ್ಯತೆ  ಇದೆ. ಈ ಬಗ್ಗೆ ಟೆನ್ನಿಸ್ ಮುಖ್ಯಸ್ಥರು ಚರ್ಚೆ ನಡೆಸುತ್ತಿದ್ದು, ಸೆಪ್ಟೆಂಬರ್ ನಲ್ಲಿ ಈ ಬಗ್ಗೆ ಅಧಿಕೃತ ನಿರ್ಣಯ ತಿಳಿಸಲಾಗುತ್ತದೆ" ಎಂದು ಹೇಳಿದ್ದಾರೆ.

5 ಬಾರಿ ಗ್ರಾಂಡ್ ಸ್ಲಾಮ್ ಚಾಂಪಿಯನ್ ಆಗಿರುವ 29 ವರ್ಷದ ನಂಬರ್ ಒನ್ ಆಟಗಾರ್ತಿ ಮರಿಯಾ ಶರಪೋವಾ ಅವರು, ಕಳೆದ ಜೂನ್ ತಿಂಗಳಲ್ಲಿ ನಡೆದ ಉದ್ದೀಪನ ಮದ್ದು ಪರೀಕ್ಷೆಯಲ್ಲಿ  ವಿಫಲರಾಗಿದ್ದರು. ಅವರು ನಿಷೇಧಿತ ಮೆಲ್ಡೋನಿಯಂ ಎಂಬ ನಿಷೇಧಿತ ಔಷದವನ್ನು ಸೇವಿಸಿರುವುದು ಸಾಬೀತಾಗಿತ್ತು. ಈ ಹಿನ್ನಲೆಯಲ್ಲಿ ಶರಪೋವಾ ಅವರನ್ನು ಆಸ್ಟ್ರೇಲಿಯಾ ಓಪನ್ ನಿಂದಲೂ  ಕೈ ಬಿಡಲಾಗಿತ್ತು. ಬಳಿಕ ನಡೆದ ಸಭೆಯಲ್ಲಿ ಮರಿಯಾ ಶರಪೋವಾ ಅವರನ್ನು ರಷ್ಯಾ ಟೆನ್ನಿಸ್ ಸಂಸ್ಥೆ 2 ವರ್ಷಗಳ ಟೆನ್ನಿಸ್ ನಿಂದ ನಿಷೇಧ ಹೇರಿತ್ತು.

ಇನ್ನು ಮರಿಯಾ ಶರಪೋವಾ ಉದ್ದೀಪನ ಮದ್ದು ಪ್ರಕರಣವನ್ನು ವಿಚಾರಣೆ ನಡೆಸುತ್ತಿರುವ ಕೋರ್ಟ್ ಆಫ್ ಆರ್ಬಿಟ್ರೇಷನ್ ಫಾರ್ ಸ್ಪೋರ್ಟ್ (ಸಿಎಎಸ್) ಸಂಸ್ಥೆ ಇದೇ ಸೆಪ್ಟೆಂಬರ್ ವೇಳೆ ತನ್ನ  ವಿಚಾರಣೆ ಮುಕ್ತಾಯಗೊಳಿಸಲಿದ್ದು, ಸೆಪ್ಟೆಂಬರ್ 19ರಂದು ತನ್ನ ತೀರ್ಪನ್ನು ನೀಡುವ ಸಾಧ್ಯತೆ ಇದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com