ರಿಯೋ: ಮಹಿಳಾ ಗಾಲ್ಫ್ ಅಂತಿಮ ಸುತ್ತಿನಲ್ಲಿ ಬೆಂಗಳೂರಿನ ಅದಿತಿ ಅಶೋಕ್

ಬ್ಯಾಡ್ಮಿಂಟನ್ ವಿಭಾಗದಲ್ಲಿ ಸಿಂಧು, ಕುಸ್ತಿ ವಿಭಾಗದಲ್ಲಿ ಸಾಕ್ಷಿ ಮಲಿಕ್ ಪದಕ ಗೆದ್ದ ನಂತರ ಭಾರತದ ಅದರಲ್ಲೂ ಕರ್ನಾಟಕದ ಗಾಲ್ಫ್ ಕ್ರೀಡಾಪಟು ರಿಯೋ ಒಲಂಪಿಕ್ಸ್ ನಲ್ಲಿ ಫೈನಲ್ ಪ್ರವೇಶಿಸಿದ್ದಾರೆ.
ಅದಿತಿ ಅಶೋಕ್
ಅದಿತಿ ಅಶೋಕ್

ರಿಯೋ ಡಿ ಜನೈರೋ: ಬ್ಯಾಡ್ಮಿಂಟನ್ ವಿಭಾಗದಲ್ಲಿ ಸಿಂಧು, ಕುಸ್ತಿ ವಿಭಾಗದಲ್ಲಿ ಸಾಕ್ಷಿ ಮಲಿಕ್ ಪದಕ ಗೆದ್ದ ನಂತರ ಭಾರತದ ಅದರಲ್ಲೂ ಕರ್ನಾಟಕದ ಗಾಲ್ಫ್ ಕ್ರೀಡಾಪಟು ರಿಯೋ ಒಲಂಪಿಕ್ಸ್ ನಲ್ಲಿ ಫೈನಲ್ ಪ್ರವೇಶಿಸಿದ್ದಾರೆ.

ಬೆಂಗಳೂರಿನ ಅದಿತಿ ಅಶೋಕ್ ಗಾಲ್ಫ್ ನ ಫೈನಲ್ ಪಂದ್ಯಕ್ಕೆ ಪ್ರವೇಶಿಸಿದ್ದು, ನಿರ್ಣಾಯಕ ಪಂದ್ಯ ಆ.20 ರಂದು ಮಧ್ಯಾಹ್ನ 3:30 ಗೆ ನಡೆಯಲಿದೆ. ಇದನ್ನು ಮುನ್ನ ನಡೆದ ಪಂದ್ಯದಲ್ಲಿ ಅದಿತಿ ಅಶೋಕ್ 23 ನೇ ಸ್ಥಾನದಿಂದ 31 ನೇ ಸ್ಥಾನಕ್ಕೆ ಕುಸಿದಿದ್ದರು.      

ಅದಿತಿ ಅಶೋಕ್ ಗಾಲ್ಫ್ ಫೈನಲ್ ಪಂದ್ಯಕ್ಕೆ ಪ್ರವೇಶಿಸಿದ್ದು, ಭಾರತ ಮತ್ತೊಂದು ಪದಕ ಪಡೆಯುವ ಸಾಧ್ಯತೆ ಇದೆ. ಫ್ರಾಂಕ್ ಅಂಥೋನಿ ಶಾಲೆಯಲ್ಲಿ ಓದುತ್ತಿರುವ 18 ವರ್ಷದ ಅದಿತಿ ಅಶೋಕ್ ಬೆಂಗಳೂರು ಮೂಲದವರಾಗಿದ್ದು  5 ವರೆ ವರ್ಷದಿಂದಲೇ ಗಾಲ್ಫ್ ಕ್ರೀಡೆಯನ್ನು ಅಭ್ಯಾಸ ಮಾಡುತ್ತಿದ್ದು, ರಿಯೋ ಒಲಂಪಿಕ್ಸ್ ಗಾಲ್ಫ್ ಕ್ರೀಡೆಯಲ್ಲಿ ಸ್ಪರ್ಧಿಸಿದ ಅತಿ ಕಿರಿಯ ಕ್ರೀಡಾಪಟುವಾಗಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com