ಪಂದ್ಯದ ಬಳಿಕ ನಿರಾಶೆಯಿಂದ ಪೆವಿಲಿಯನ್ ಸೇರಿದ ಅಮೆರಿಕ ಆಟಗಾರರು
ಪಂದ್ಯದ ಬಳಿಕ ನಿರಾಶೆಯಿಂದ ಪೆವಿಲಿಯನ್ ಸೇರಿದ ಅಮೆರಿಕ ಆಟಗಾರರು

ಚಿನ್ನಕ್ಕೆ ಗುರಿ ಇಟ್ಟಿದ್ದ ಅಮೆರಿಕ ಕಂಚಿನ ಪದಕ ಕೂಡ ಗಳಿಸಲಿಲ್ಲ!

ಹಾಲಿ ಒಲಿಂಪಿಕ್ಸ್ ನ ಓಟದ ಸ್ಪರ್ಧೆಯಲ್ಲಿ ಜಮೈಕಾಗೆ ಪ್ರಬಲ ಸ್ಪರ್ಧಿ ಎಂದೇ ಖ್ಯಾತಿ ಗಳಿಸಿದ್ದ ಅಮೆರಿಕ 400 ಮೀಟರ್ ರಿಲೇ ಫೈನಲ್ ಪಂದ್ಯದಲ್ಲಿ ನಿಜಕ್ಕೂ ಆಘಾತ ಎದುರಿಸಿದೆ.

ರಿಯೋ ಡಿ ಜನೈರೋ: ಹಾಲಿ ಒಲಿಂಪಿಕ್ಸ್ ನ ಓಟದ ಸ್ಪರ್ಧೆಯಲ್ಲಿ ಜಮೈಕಾಗೆ ಪ್ರಬಲ ಸ್ಪರ್ಧಿ ಎಂದೇ ಖ್ಯಾತಿ ಗಳಿಸಿದ್ದ ಅಮೆರಿಕ 400 ಮೀಟರ್ ರಿಲೇ ಫೈನಲ್ ಪಂದ್ಯದಲ್ಲಿ ನಿಜಕ್ಕೂ ಆಘಾತ  ಎದುರಿಸಿದೆ.

ಜಮೈಕಾದ ತಾರೆ ಉಸೇನ್ ಬೋಲ್ಟ್ ಎಂಬ ಪ್ರಬಲ ಸ್ಪರ್ಧಿಗಳ ನಡುವೆಯೂ ಚಿನ್ನಕ್ಕೆ ಗುರಿಇಟ್ಟಿದ್ದ ಅಮೆರಿಕ ಸ್ಪರ್ಧಿಗಳು ಫೈನಲ್ ನಲ್ಲಿ ಯಾವುದೇ ಪದಕಗಳಿಸದೇ ಅಚ್ಚರಿ ಮೂಡಿಸಿದ್ದಾರೆ.  ಫೈನಲ್ ಪಂದ್ಯದ ವೇಳೆ ಅಮೆರಿಕ ಆಟಗಾರರು ಮಾಡಿಕೊಂಡ ಸ್ವಯಂಕೃತ ಅಪರಾಧ ಅವರನ್ನು ಈ ಸ್ಥಾನಕ್ಕೆ ತಂದು ನಿಲ್ಲಿಸಿದ್ದು, ಲೈನ್ ಕ್ರಾಸ್ ಮಾಡುವ ಮೂಲಕ ಪಂದ್ಯದಿಂದಲೇ  ಅನರ್ಹಗೊಂಡಿದ್ದಾರೆ.

ಆ ಮೂಲಕ ಚಿನ್ನದ ಪದಕದ ಪ್ರಬಲ ಆಕಾಂಕ್ಷಿಗಳಾಗಿದ್ದ ಜಸ್ಟಿನ್ ಗಟ್ಲಿನ್ ಸೇರಿದಂತೆ ಅಮೆರಿಕತಂಡದ ಆಟಗಾರರು ಚಿನ್ನದ ಪದಕವಿರಲಿ ಕನಿಷ್ಠ ಕಂಚಿನ ಪದಕ ಕೂಡ ಗಳಿಸದೇ  ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದ್ದಾರೆ.

ಕಂಚಿನ ಪದಕ ಗೆದ್ದೆವೆಂದು ಸಂಭ್ರಮಿಸಿದ್ದ ಆಟಗಾರರು
ಇನ್ನು ಫೈನಲ್ ಪಂದ್ಯ ಮುಗಿದ ಬಳಿಕ 3ನೇ ಸ್ಥಾನ ಪಡೆದೆವೆಂಬ ಸಂಭ್ರಮದಲ್ಲಿದ್ದ ಅಮೆರಿಕ ಆಟಗಾರರಿಗೆ ತೀರ್ಪುಗಾರರ ಶಾಕ್ ಕಾದಿತ್ತು. ಪಂದ್ಯ ಮುಕ್ತಾಯದ ಬಳಿಕ 2 ಮತ್ತು 3ನೇ ಸ್ಥಾನ  ಘೋಷಣೆಯನ್ನು ತಡ ಮಾಡಿದ ತೀರ್ಪುಗಾರರು ಟಿವಿ ರೀಪ್ಲೆ ನೋಡಿ ಅಮೆರಿಕ ಆಟಗಾರರು ಲೈನ್ ಕ್ರಾಸ್ ಮಾಡುವ ಮೂಲಕ ನಿಯಮ 170.7ಅನ್ನು ಉಲ್ಲಂಘಿಸಿದ್ದಾರೆ ಎಂಬ ಅಂಶವನ್ನು  ಮನಗಂಡಿದ್ದಾರೆ. ಬಳಿಕ ಚರ್ಚಿಸಿ ಅಮೆರಿಕ ಆಟಗಾರರನ್ನು ಅನರ್ಹಗೊಳಿಸಿದ್ದಾರೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿರುವ ಅಮೆರಿಕದ ಖ್ಯಾತ ಓಟಗಾರ ಜಸ್ಟಿನ್ ಗಟ್ಲಿನ್, ತೀರ್ಪುಗಾರರ ತೀರ್ಪು ನಿಜ್ಕಕೂ ಆಘಾತ ತಂದಿದೆ. ಇದೊಂದು ತಂಡಕ್ಕೆ ಈ ತೀರ್ಪು  ದುಃಸ್ವಪ್ನವಾಗಿದ್ದು, ಸಾಕಷ್ಟು ಪರಿಶ್ರಮದ ಹೊರತಾಗಿಯೂ ಸೋಲು ಕಂಡಿರುವುದು ನಿಜಕ್ಕೂ ಆಘಾತವನ್ನುಂಟು ಮಾಡಿದೆ ಎಂದು ಹೇಳಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com