ಪುಣೆ ವರ್ಸಸ್ ಜೈಪುರ ನಡುವಿನ ಪಂದ್ಯ (ಸಂಗ್ರಹ ಚಿತ್ರ)
ಪುಣೆ ವರ್ಸಸ್ ಜೈಪುರ ನಡುವಿನ ಪಂದ್ಯ (ಸಂಗ್ರಹ ಚಿತ್ರ)

ಪ್ರೊ.ಕಬಡ್ಡಿ: ಪುಣೆ-ಜೈಪುರ ಪ೦ದ್ಯ ರೋಚಕ ಡ್ರಾದಲ್ಲಿ ಅಂತ್ಯ

ಪ್ರೊ.ಕಬಡ್ಡಿ ಸರಣಿಯ ಶುಕ್ರವಾರ ನಡೆದ ಪುಣೇರಿ ಪಲ್ಟನ್ ಮತ್ತು ಜೈಪುರ ಪಿಂಕ್ ಪ್ಯಾಂಥರ್ಸ್ ನಡುವಿನ ಪಂದ್ಯ ರೋಚಕ ಡ್ರಾದಲ್ಲಿ ಅಂತ್ಯವಾಯಿತು...
Published on

ಪುಣೆ: ಪ್ರೊ.ಕಬಡ್ಡಿ ಸರಣಿಯ ಶುಕ್ರವಾರ ನಡೆದ ಪುಣೇರಿ ಪಲ್ಟನ್ ಮತ್ತು ಜೈಪುರ ಪಿಂಕ್ ಪ್ಯಾಂಥರ್ಸ್ ನಡುವಿನ ಪಂದ್ಯ ರೋಚಕ ಡ್ರಾದಲ್ಲಿ ಅಂತ್ಯವಾಯಿತು.

ಅ೦ತಿಮ ಕ್ಷಣದವರೆಗೂ ರೋಚಕತೆಯಿ೦ದ ಕೂಡಿದ್ದ ಈ ಪಂದ್ಯದಲ್ಲಿ ಉಭಯ ತಂಡಗಳು ತಲಾ 32 ಅಂಕಗಳನ್ನು ಗಳಿಸು ಮೂಲಕ ಡ್ರಾಗೆ ತೃಪ್ತಿ ಪಟ್ಟುಕೊಳ್ಳಬೇಕಾಯಿತು. ಆರಂಭದಿಂದಲೂ ಮುನ್ನಡೆ  ಕಾಯ್ದುಕೊಂಡಿದ್ದ ಜೈಪುರ ಪಿಂಕ್ ಪ್ಯಾಂಥರ್ಸ್ ತಂಡ ಮೊದಲಾರ್ಧದ ವೇಳೆ 21-18 ಅಂಕಗಳೊಂದಿಗೆ ಮುಂದಿತ್ತು. ಆದರೆ ದ್ವಿತೀಯಾರ್ಧದಲ್ಲಿ ಪುಣೇರಿ ಪಲ್ಟನ್ ತಂಡದ ಸ್ಟಾರ್ ಆಟಗಾರರಾದ  ಅಜಯ್ ಠಾಕೂರ್ ಹಾಗೂ ಮಂಜಿತ್ ಚಿಲ್ಲರ್ ಅವರ ಆಲ್ ರೌಂಡ್ ಆಟದ ನೆರವಿನಿಂದ ಪುಣೇರಿ ಪಲ್ಟನ್ ತಂಡ ಸಮಬಲ ಸಾಧಿಸಿತು.

ಮ೦ಜಿತ್ ಚಿಲ್ಲರ್ (13ಅ೦ಕ) ಹಾಗೂ ಅಜಯ್ ಠಾಕೂರ್ (9) ಅವರ ಉತ್ತಮ ರೈಡಿ೦ಗ್ ಪುಣೆ ತಂಡಕ್ಕೆ ನೆರವಾಯಿತು. ಆದರೆ ಮೊದಲಾರ್ಧದಲ್ಲಿ ದೊರೆತ ಮುನ್ನಡೆಯನ್ನು ಕಾಯ್ದುಕೊಳ್ಳವಲ್ಲಿ  ವಿಫಲವಾದ ಜೈಪುರ ತಂಡ ದ್ವಿತೀಯಾರ್ಧದಲ್ಲಿ ನೀರಸ ಪ್ರದರ್ಶನ ತೋರಿತು. ಪಂದ್ಯ ಅಂತಿಮ ಸಮಯ ತಲುಪುತ್ತಿದ್ದಂತೆಯೇ ಎಚ್ಚೆತ್ತ ಜೈಪುರ ತಂಡ ಎದಿರೇಟು ನೀಡುವ ಪ್ರಯತ್ನ ಮಾಡಿತಾದರೂ  ಗೆಲುವು ಧಕ್ಕಿಸಿಕೊಳ್ಳುವಲ್ಲಿ ವಿಫಲವಾಯಿತು. ದ್ವಿತೀಯಾಧ೯ದಲ್ಲಿ ಏಟಿಗೆ ಎದಿರೇಟು ನೀಡಿದ ಉಭಯ ತ೦ಡಗಳು ಸಮಬಲದ ಹೋರಾಟ ಪ್ರದಶಿ೯ಸಿದವು.ಅಂತಿಮವಾಗಿ ಉಭಯ ತಂಡಗಳು 32-32  ಅಂಕಗಳೊಂದಿಗೆ ಡ್ರಾಗೆ ತೃಪ್ತಿಪಟ್ಟುಕೊಂಡವು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com