ಬಹುಮಾನಕ್ಕಾಗಿ ನಕಲಿ ಪ್ರಮಾಣ ಪತ್ರ ಸಲ್ಲಿಸಿದ್ದ ಮಂಜಿತ್ ಚಿಲ್ಲರ್?

ಪ್ರೊ.ಕಬ್ಬಡ್ಡಿ ಮೂಲಕ ತಮ್ಮನ್ನು ಗುರ್ತಿಸಿಕೊಳ್ಳುತ್ತಿರುವ ಕಬ್ಬಡ್ಡಿ ಆಟಗಾರರಾದ ಮಂಜಿತ್ ಚಿಲ್ಲರ್ ಹಾಗೂ ರಾಕೇಶ್ ಕುಮಾರ್ ವಿರುದ್ಧ ಇದೀಗ ಗಂಭೀರ ಆರೋಪವೊಂದು ಕೇಳಿಬಂದಿದ್ದು, ಬಹುಮಾನ ಪಡೆಯುವ ಸಲುವಾಗಿ ನಕಲಿ ಪ್ರಮಾಣಪತ್ರವೊಂದನ್ನು ಇಬ್ಬರು...
Pro.kabaddi players Manjith chillar, Rakesh submits Fake certificates?
Pro.kabaddi players Manjith chillar, Rakesh submits Fake certificates?

ಚಂಡೀಗಢ: ಪ್ರೊ.ಕಬ್ಬಡ್ಡಿ ಮೂಲಕ ತಮ್ಮನ್ನು ಗುರ್ತಿಸಿಕೊಳ್ಳುತ್ತಿರುವ ಕಬ್ಬಡ್ಡಿ ಆಟಗಾರರಾದ ಮಂಜಿತ್ ಚಿಲ್ಲರ್ ಹಾಗೂ ರಾಕೇಶ್ ಕುಮಾರ್ ವಿರುದ್ಧ ಇದೀಗ ಗಂಭೀರ ಆರೋಪವೊಂದು ಕೇಳಿಬಂದಿದ್ದು, ಬಹುಮಾನ ಪಡೆಯುವ ಸಲುವಾಗಿ ನಕಲಿ ಪ್ರಮಾಣಪತ್ರವೊಂದನ್ನು ಇಬ್ಬರು ಆಟಗಾರರು ಸರ್ಕಾರಕ್ಕೆ ಸಲ್ಲಿಸಿದ್ದರು ಎಂದು ಹೇಳಲಾಗುತ್ತಿದೆ. 

ಇದೀಗ ಕೇಳಿಬರುತ್ತಿರುವ ಆರೋಪಗಳ ಪ್ರಕಾರ 2014ರಲ್ಲಿ ಮಂಜಿತ್ ಚಿಲ್ಲರ್ ಹಾಗೂ ರಾಕೇಶ್ ಕುಮಾರ್ ಅವರಿಗೆ ಬಹುಮಾನವನ್ನು ರಾಜ್ಯ ಸರ್ಕಾರ ನೀಡಿತ್ತು. ಸರ್ಕಾರ ನೀಡುವ ಬಹುಮಾನ ಪಡೆಯುವ ಸಲುವಾಗಿ ಇಬ್ಬರೂ ಆಟಗಾರರು ದೆಹಲಿಯೇ ತಮ್ಮ ಖಾಯಂ ವಿಳಾಸ ಹಾಗೂ ನಾವು ಇಲ್ಲಿಯ ನಿವಾಸಿಗಳೇ ಎಂದು ಪ್ರಮಾಣ ಪತ್ರವೊಂದನ್ನು ಸಲ್ಲಿಸಿದ್ದರು. ಆದರೆ, ಇಬ್ಬರೂ ಇಲ್ಲಿಯ ನಿವಾಸಿಗಳಲ್ಲ ಎಂದು ಹೇಳಲಾಗುತ್ತಿದ್ದು, ಈ ಬಗ್ಗೆ ದೂರು ದಾಖಲಾಗಿದೆ. 
ದೆಹಲಿಯಲ್ಲಿ ನೀಡಲಾಗಿದ್ದ ಅರ್ಜುನ ಪ್ರಶಸ್ತಿ ವೇಳೆ ಮಂಜಿತ್ ಚಿಲ್ಲರ್ ಅವರು ದೆಹಲಿ ನಿವಾಸಿಯೇ ಎಂದು ಪ್ರಮಾಣ ಪತ್ರವನ್ನು ಸಲ್ಲಿಸಿದ್ದರು. ನಂತರ ಹರಿಯಾಣದಲ್ಲಿ ನೀಡಿದ 2 ಕೋಟಿ ನಗದು ಬಹುಮಾನದಲ್ಲಿ ಹರಿಯಾಣ ನಿವಾಸಿಯೆಂದು ಪ್ರಮಾಣ ಪತ್ರ ಸಲ್ಲಿಸಿದ್ದರು. ಇದರಂತೆ ರಾಕೇಶ್ ಕುಮಾರ್ ಅವರ ಪ್ರಕರಣದಲ್ಲೂ ಇದೇ ರೀತಿ ಆಗಿದೆ ಎಂದು ಕ್ರೀಡಾ ಸಚಿವರು ಹೇಳಿದ್ದಾರೆ. 
 ಹರಿಯಾಣ ಸರ್ಕಾರ ನಗದು ಬಹುಮಾನ ನೀಡುವುದು ಇಲ್ಲಿನ ನಿವಾಸಿಗಳಿಗೆ ಮಾತ್ರ. ಇದೀಗ ಇಬ್ಬರು ಆಟಗಾರರು ನಕಲಿ ಪ್ರಮಾಣ ಸಲ್ಲಿಸಿರುವುದಾಗಿ ತಿಳಿದುಬಂದಿದೆ. ಆಟಗಾರರಿಗೆ ನೀಡಿದ ನಗದು ಬಹುಮಾನವನ್ನು ಸರ್ಕಾರ ಶೀಘ್ರದಲ್ಲೇ ಹಿಂಪಡೆಯಲಿದೆ ಮತ್ತು ಇಬ್ಬರು ಆಟಗಾರರ ವಿರುದ್ಧ ತನಿಖೆ ನಡೆಯಲಾಗುತ್ತದೆ ಎಂದು ಹೇಳಿದ್ದಾರೆ.
ಆಟಗಾರರ ವಿರುದ್ಧ ಕೇಳಿಬಂದಿರುವ ಆರೋಪಗಳನ್ನು ಗಂಭೀರವಾಗಿ ಪರಿಗಣಿಸಿರುವ ಹರಿಯಾಣ ಸರ್ಕಾರ ಇದೀಗ ತನ್ನ ಡಿಜಿಟಲ್ ವ್ಯವಸ್ಥೆಯನ್ನು ಜಾರಿ ಮಾಡಿದ್ದು, ಅದರಲ್ಲಿ ನೋಂದಾಯಿಸಿಕೊಂಡು ಅಲ್ಲಿಂದ ಪ್ರಮಾಣಪತ್ರ ಪಡೆದವರಿಗೆ ಮುಂದೆ ನಗದು ಬಹುಮಾನ ನೀಡಲಾಗುತ್ತದೆ ಎಂದು ಹೇಳಿದೆ. 
ಮಂಜಿತ್ ಚಿಲ್ಲರೆ ಕಳೆದೆರಡು ವರ್ಷ ಬೆಂಗಳೂರು ಬುಲ್ಸ್ ತಂಡದ ನಾಯಕರಾಗಿ ಆಟವಾಡಿದ್ದರು. ಪ್ರಸ್ತು ಪ್ರೊ ಕಬ್ಬಡ್ಡಿ ಲೀಗ್ ನಲ್ಲಿ ಪುಣೆ ತಂಡದ ನಾಯಕರಾಗಿ ಆಟವಾಡುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com