
ಮುಂಬೈ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ಇಂದು ವಿಶೇಷ ಮಹಾಸಭೆ ನಡೆಸಿ ಲೋಧಾ ಸಮಿತಿ ವರದಿ ಜಾರಿ ಸಂಬಂಧಿತ ಹಲವಾರು ಸಮಸ್ಯೆಗಳನ್ನು ಅಫಿಡವಿಟ್ ಮೂಲಕ ಸುಪ್ರೀಂಕೋರ್ಟ್ ಗಮನಕ್ಕೆ ತರಲು ನಿರ್ಧರಿಸಿದೆ.
ಬಿಸಿಸಿಐ ಕಾರ್ಯದರ್ಶಿ ಅನುರಾಗ್ ಠಾಕೂರ್ ಅವರು ಬಿಸಿಸಿಐ ಪರವಾಗಿ ಅಫಿಡವಿಟ್ ಸಲ್ಲಿಕೆಯ ಹೊಣೆಯನ್ನು ಹೊತ್ತಿದ್ದಾರೆ. ಕ್ರಿಕೆಟ್ ಆಡಳಿತ ವೈಖರಿಯಲ್ಲಿ ಹಲವು ಮಹತ್ವದ ಬದಲಾವಣೆಗಳಿಗೆ ಲೋಧಾ ಸಮಿತಿ ಶಿಫಾರಸು ಮಾಡಿದೆ. ಈ ವರದಿ ಬಗ್ಗೆ ಮಂಡಳಿಯ ಸದಸ್ಯ ರಾಜ್ಯ ಸಂಸ್ಥೆಗಳು ವಿರೋಧ ವ್ಯಕ್ತಪಡಿಸಿದ್ದು, ವರದಿ ಜಾರಿ ಮಾಡುವುದು ಕಷ್ಟ ಸಾಧ್ಯ ಹಾಗೂ ಇದರಿಂದ ಬಿಸಿಸಿಐಗೆ ಅಪಾರ ನಷ್ಟವಾಗಲಿದೆ ಎಂದು ಸಭೆಯ ಬಳಿಕ ಅಧಿಕಾರಿಗಳು ತಿಳಿಸಿದ್ದಾರೆ.
ಸಚಿವರು, ಸರ್ಕಾರಿ ನೌಕರರು, ಕ್ರಿಕೆಟ್ ಆಡಳಿತಾಧಿಕಾರಿಗಳಾಗಿರಬಾರದು. ಒಂದು ರಾಜ್ಯಕ್ಕೆ ಒಂದೇ ಮತ, ಉಪಹಾರ ವಿರಾಮ ಅಥವಾ ಚಹಾ ವಿರಾಮ ಇದ್ದಾಗ ಒಮ್ಮೆ ಮಾತ್ರ ಜಾಹೀರಾತು ಪ್ರದರ್ಶಿಸ ಬೇಕೆಂದು ತಿಳಿಸಿತ್ತು, ಇದರಿಂದಾಗಿ ಬಿಸಿಸಿಐಗೆ ಬರೋಬ್ಬರಿ 1500 ಕೋಟಿ ರು. ನಷ್ಟವಾಗುತ್ತಿತ್ತು. ಈ ಎಲ್ಲಾ ಕಾರಣದಿಂದ ಬಿಸಿಸಿಐ ವರದಿ ಜಾರಿ ಮಾಡಲು ಹಿಂದೇಟು ಹಾಕಿದೆ. ಈ ವರದಿಯ ಜಾರಿ ಕುರಿತು ಬಿಸಿಸಿಐ ಉತ್ತರಕ್ಕಾಗಿ ಸುಪ್ರಿಂ ಕೋರ್ಟ್ ಮಾರ್ಚ್ 3ರವರೆಗೆ ಕಾಲಾವಕಾಶ ನೀಡಿತ್ತು.
Advertisement