ರಕ್ತಕ್ಕೆ ರಕ್ತ: ಗಾಯಗೊಂಡ ರೆಸ್ಲರ್ "ಗ್ರೇಟ್ ಖಲಿ" ಸೇಡಿನ ಎಚ್ಚರಿಕೆ

ರೆಸ್ಲಿಂಗ್ ವೇಳೆ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ್ದ ಭಾರತದ ಗ್ರೇಟ್ ಖಲಿ ಸೇಡು ತೀರಿಸಿಕೊಳ್ಳುವ ಎಚ್ಚರಿಕೆ ನೀಡಿದ್ದಾರೆ...
ರೆಸ್ಲರ್ ದಿ ಗ್ರೇಟ್ ಖಲಿ (ಸಂಗ್ರಹ ಚಿತ್ರ)
ರೆಸ್ಲರ್ ದಿ ಗ್ರೇಟ್ ಖಲಿ (ಸಂಗ್ರಹ ಚಿತ್ರ)

ಡೆಹ್ರಾಡೂನ್: ರೆಸ್ಲಿಂಗ್ ವೇಳೆ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ್ದ ಭಾರತದ ಗ್ರೇಟ್ ಖಲಿ ಸೇಡು ತೀರಿಸಿಕೊಳ್ಳುವ ಎಚ್ಚರಿಕೆ ನೀಡಿದ್ದಾರೆ.

ಕಾಂಟಿನೆಂಟಲ್ ರೆಸ್ಲಿಂಗ್ ಎಂಟರ್‌ಟೇನ್‌ಮೆಂಟ್ ಶೋ ವೇಳೆ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಡಬ್ಲ್ಯುಡಬ್ಲ್ಯುಇನ ರೆಸ್ಲರ್ ‘ದಿ ಗ್ರೇಟ್ ಖಲಿ’ ಚೇತರಿಸಿಕೊಂಡಿದ್ದು ಶುಕ್ರವಾರ ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ. ಈ ಮೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ತಮ್ಮ ಎದುರಾಳಿ ವಿರುದ್ಧ ಸೇಡು ತೀರಿಸಿಕೊಳ್ಳುವುದಾಗಿ ಹೇಳಿದರು.

ಡೆಹ್ರಾಡೂನ್ ನಲ್ಲಿ ಇಂದು ನಡೆಯುವ ಪಂದ್ಯದಲ್ಲಿ ತಾವು ಖಂಡಿತ ಕಮ್ ಬ್ಯಾಕ್ ಮಾಡಲಿದ್ದು, ತಮ್ಮ ಎದುರಾಳಿ ವಿರುದ್ಧ ಖಂಡಿತ ಸೇಡು ತೀರಿಸಿಕೊಳ್ಳುತ್ತೇನೆ. ರಕ್ತಕ್ಕೆ ರಕ್ತ, ಕುರ್ಚಿಗೆ ಕುರ್ಚಿ ಎಂದು ಹೇಳುವ ಮೂಲಕ ರೆಸ್ಲರ್ ಗ್ರೇಟ್ ಖಲಿ ಸೇಡಿನ ಸೂಚನೆ ನೀಡಿದರು.

ಕಳೆದ ಬುಧವಾರ ರಾತ್ರಿ ಉತ್ತರಾಖಂಡ್‌ನ ಹಲ್‌ದ್ವಾನಿಯಲ್ಲಿ ನಡೆದ ಟೂರ್ನಿಯಲ್ಲಿ ವಿದೇಶಿ ರೆಸ್ಲರ್‌ಗಳಾದ ಮೈಕ್ ನಾಕ್ಸ್ ಹಾಗೂ ಬ್ರಾಡಿ ಸ್ಟೀಲ್ ಜತೆ ಸ್ಪದಿ೯ಸುವ ವೇಳೆ ದಿ ಗ್ರೇಟ್  ಖಲಿ ಗಂಭೀರವಾಗಿ ಗಾಯಗೊಂಡಿದ್ದರು. ಅವರ ತಲೆ ಮತ್ತು ಎದೆ ಭಾಗಕ್ಕೆ ಗಂಭೀರ ಗಾಯಗಳಾಗಿದ್ದವು. ಕೂಡಲೇ ಅವರನ್ನು ಹಲ್‌ದ್ವಾನಿಯಲ್ಲಿನ ಆಸ್ಪತ್ರೆಯಿಂದ ಡೆಹ್ರಾಡೂನ್ ಆಸ್ಪತ್ರೆಗೆ ಏರ್‌ಲಿಫ್ಟ್ ಮಾಡಲಾಗಿತ್ತು. 2007 ರಲ್ಲಿ ಚೊಚ್ಚಲ ಬಾರಿ ವರ್ಲ್ಡ್ ಹೆವಿವೇಟ್ ಚಾಂಪಿಯನ್ ಆದ ನಂತರ ಹಲವು ಸಿನಿಮಾಗಳಲ್ಲಿ ಗ್ರೇಟ್ ಖಲಿ ನಟಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com