64ನೇ ರಾಷ್ಟ್ರೀಯ ವಾಲಿಬಾಲ್ ಟೂರ್ನಿ: ಭಾರತೀಯ ರೈಲ್ವೇಸ್ ಗೆ ಡಬಲ್ ಪ್ರಶಸ್ತಿ

ಭಾನುವಾರ ಮುಕ್ತಾಯಗೊಂಡ 64ನೇ ಹಿರಿಯರ ರಾಷ್ಟ್ರೀಯ ವಾಲಿಬಾಲ್ ಟೂರ್ನಿಯಲ್ಲಿ, ಪುರುಷರ ಹಾಗೂ ಮಹಿಳೆಯರ ವಿಭಾಗಗಳಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿತು.
ಭಾರತೀಯ ರೈಲ್ವೇಸ್ ಗೆ ಡಬಲ್ ಪ್ರಶಸ್ತಿ
ಭಾರತೀಯ ರೈಲ್ವೇಸ್ ಗೆ ಡಬಲ್ ಪ್ರಶಸ್ತಿ

ಬೆಂಗಳೂರು: ರಾಷ್ಟ್ರೀಯ ವಾಲಿಬಾಲ್ ಇತಿಹಾಸದಲ್ಲಿ ತನ್ನದೇ ಆದ ಪ್ರಾಬಲ್ಯ ಮೆರೆದ ದಾಖಲೆ ಹೊಂದಿರುವ ರೈಲ್ವೇಸ್,  ಭಾನುವಾರ ಮುಕ್ತಾಯಗೊಂಡ 64ನೇ ಹಿರಿಯರ ರಾಷ್ಟ್ರೀಯ ವಾಲಿಬಾಲ್ ಟೂರ್ನಿಯಲ್ಲಿ, ಪುರುಷರ ಹಾಗೂ ಮಹಿಳೆಯರ ವಿಭಾಗಗಳಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿತು.

ಈ ಎರಡೂ ವಿಭಾಗಗಳಲ್ಲಿ ರೈಲ್ವೇಸ್‍ಗೆ ಕೇರಳ ತಂಡವೇ ಎದುರಾಳಿಯಾಗಿದ್ದು ವಿಶೇಷ. ಮೊದಲು ನಡೆದ ಮಹಿಳೆಯರ ಫೈನಲ್ ಪಂದ್ಯದಲ್ಲಿ ರೈಲ್ವೇಸ್ ತಂಡ, 3-1 ಸೆಟ್ ಗಳ ಅಂತರದಲ್ಲಿ ಜಯ ಸಾಧಿಸಿದರೆ, ಆನಂತರ ನಡೆದ ಪುರುಷರ ವಿಭಾಗದ ಫೈನಲ್ ನಲ್ಲಿ 3-೨ ಅಂತರದಲ್ಲಿ ಗೆಲವು ಪಡೆದ ರೈಲ್ವೇಸ್ ಚಿನ್ನದ ಪದಕಕ್ಕೆ ಭಾಜನವಾಯಿತು.

ಕಂಠೀರವ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯಗಳಲ್ಲಿ ಮೊದಲು ನಡೆದ ಹಣಾಹಣಿಯಲ್ಲಿ ಕೇರಳ ಮಹಿಳೆಯರ ವಿರುದ್ಧ ಸೆಣಸಿದ ರೈಲ್ವೇಸ್ ತಂಡ, ಪಂದ್ಯದ ಆರಂಭದಿಂದಲೇ ಪಾರಮ್ಯ ಮೆರೆಯಿತು. ಆರಂಭಿಕ ಸೆಟ್ ನಲ್ಲೇ 19-25 ಅಂಕಗಳ ವ್ಯತ್ಯಾಸದಲ್ಲಿ ಸೋಲು ಕಂಡ ರೈಲ್ವೇಸ್, ದ್ವಿತೀಯ ಸೆಟ್ ನಲ್ಲಿ 25-16 ಅಂಕಗಳ ಗೆಲವು ದಾಖಲಿಸುವ ಮೂಲಕ ಆತ್ಮವಿಶ್ವಾಸ ವೃದ್ಧಿಸಿಕೊಂಡ ರೈಲ್ವೇಸ್, ನಂತರ ತಿರುಗಿ ನೋಡಲೇ ಇಲ್ಲ. ಮೂರನೇ ಸೆಟ್ ನಲ್ಲಿ 25-20 ಅಂಕ-ಗಳ ಮೂಲಕ ಗೆಲವು ಪಡೆದ ರೈಲ್ವೇಸ್ ನಾಲ್ಕನೇ ಸೆಟ್-ನಲ್ಲೂ 25-21 ಅಂತರದಲ್ಲಿ ಗೆಲವು ಸಾಧಿಸುವ ಮೂಲಕ 3-1 ಸೆಟ್ ಗಳ ಅಂತರದಲ್ಲಿ ಜಯಿಸಿ ಚಿನ್ನದ ಪದಕ ಗೌರವಕ್ಕೆ ಭಾಜನವಾಯಿತು.

ತಮಿಳುನಾಡು ತಂಡಗಳಿಗೆ ಕಂಚು: ಪುರುಷರ ಹಾಗೂ ಮಹಿಳೆಯರ ವಿಭಾಗಗಳಲ್ಲಿ ನಡೆದ ಕಂಚಿನ ಪದಕ ಸುತ್ತಿನ ಪಂದ್ಯ-ಗ-ಳಲ್ಲಿ ತಮಿ-ಳು-ನಾಡು ಆಟಗಾರರು ಗೆಲವು ಸಾಧಿಸಿದರು. ಪುರುಷರ ವಿಭಾಗದಲ್ಲಿ ನಡೆದ ಪಂದ್ಯದಲ್ಲಿ ತಮಿಳುನಾಡು ತಂಡ, ಪಂಜಾಬ್ ತಂಡವನ್ನು 3-1 ಸೆಟ್ ಗಳ ಅಂತರದಿಂದ ಮಣಿಸಿತು. ಮೊದಲ ಸೆಟ್ ನಲ್ಲಿ 25-15  ಅಂಕಗಳ ಅಂತರದಲ್ಲಿ ಜಯ ಸಾಧಿಸಿದ ತಮಿಳುನಾಡು, ಆನಂತರದ ಸೆಟ್ ನಲ್ಲೂ 25-16 ಅಂತರದ ಜಯ ಕಂಡಿತು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com