ಫೆಲ್ಪ್ಗೆ ಕಂಚಿನ ಪದಕವಿಲ್ಲ

ಅಂತಾರಾಷ್ಟ್ರೀಯ ಈಜು ರಂಗದಲ್ಲಿ ಚಿನ್ನದ ಸರದಾರನೆಂದೇ ಖ್ಯಾತರಾಗಿರುವ, ಒಲಿಂಪಿಕ್ಸ್ ಸೂಪರ್ ಸ್ಟಾರ್, ಅಮೆರಿಕದ ಮೈಕಲ್ಫೆಲ್ಫ್, ಅಂತಾರಾಷ್ಟ್ರೀಯ ಈಜು ಸ್ಪರ್ಧೆಯಲ್ಲಿ ಯಾವುದೇ ಪದಕ ಗೆಲ್ಲದೆ ನಿರಾಸೆಪಟ್ಟಿದ್ದಾರೆ...
ಅಮೆರಿಕದ ಮೈಕೆಲ್ ಫೆಲ್ಪ್ಸ್ (ಸಂಗ್ರಹ ಚಿತ್ರ)
ಅಮೆರಿಕದ ಮೈಕೆಲ್ ಫೆಲ್ಪ್ಸ್ (ಸಂಗ್ರಹ ಚಿತ್ರ)

ಲಾಸ್ ಏಂಜಲೀಸ್: ಅಂತಾರಾಷ್ಟ್ರೀಯ ಈಜು ರಂಗದಲ್ಲಿ ಚಿನ್ನದ ಸರದಾರನೆಂದೇ ಖ್ಯಾತರಾಗಿರುವ, ಒಲಿಂಪಿಕ್ಸ್ ಸೂಪರ್ ಸ್ಟಾರ್, ಅಮೆರಿಕದ ಮೈಕಲ್ಫೆಲ್ಫ್, ಅಂತಾರಾಷ್ಟ್ರೀಯ ಈಜು  ಸ್ಪರ್ಧೆಯಲ್ಲಿ ಯಾವುದೇ ಪದಕ ಗೆಲ್ಲದೆ ನಿರಾಸೆಪಟ್ಟಿದ್ದಾರೆ.

ಟೆಕ್ಸಾಸ್‍ನ ಆಸ್ಟಿನ್ನಲ್ಲಿ ನಡೆದಿದ್ದ ಪ್ರೊ ಸ್ವಿಮ್ಮಿಂಗ್ ಸ್ಪರ್ಧೆಯ ಅಂಗವಾಗಿ ಭಾನುವಾರ ನಡೆದ 200 ಮೀ. ಫ್ರೀ ಸ್ಟೈಲ್ನಲ್ಲಿ ಸ್ಪರ್ಧಿಸಿದ್ದ ಫೆಲ್ಫ್, 1:48.87 ನಿಮಿಷದಲ್ಲಿ ಗುರಿ ಮುಟ್ಟಿ ನಾಲ್ಕನೇ  ಸ್ಥಾನಕ್ಕೆ ತೃಪ್ತಿಪಟ್ಟರು. ಈ ವಿಭಾಗದಲ್ಲಿ ಸ್ಪರ್ಧಿಸಿದ್ದ ಫ್ರಾನ್ಸ್ ನ ಜೆರೆಮಿ ಸ್ಟ್ರಾವಿಯಸ್ 47.56 ಸೆಕೆಂಡ್ಗಳಲ್ಲಿ ಗುರಿಮುಟ್ಟಿ ಚಿನ್ನದ ಪದಕ ಪಡೆದರೆ, ಅಮೆರಿಕದ ಟೌನ್‍ಲೇ ಹಾಸ್ (1:48.35) ಬೆಳ್ಳಿ  ಹಾಗೂ ಫ್ರಾನ್ಸ್ ನ ಜೋರ್ಡನ್ ಪೊಥಿನ್ (1:48.62) ಕಂಚಿನ ಗೌರವ ಪಡೆದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com