ಭಾರತ- ಆಸ್ಟ್ರೇಲಿಯಾ 4 ನೇ ಏಕದಿನ ಪಂದ್ಯ: ಭಾರತಕ್ಕೆ 349 ರನ್ ಗಳ ಗುರಿ

ಭಾರತ- ಆಸ್ಟ್ರೇಲಿಯಾ ವಿರುದ್ಧದ 4 ನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಆಸ್ಟ್ರೇಲಿಯಾ ನಿಗದಿತ 50 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 348 ರಂ ಪೇರಿಸಿದ್ದು ಭಾರತಕ್ಕೆ 349 ರನ್ ಗಳ ಗುರಿ ನೀಡಿದೆ.
ಭಾರತಕ್ಕೆ  349 ರನ್ ಗಳ ಗುರಿ
ಭಾರತಕ್ಕೆ 349 ರನ್ ಗಳ ಗುರಿ

ಕ್ಯಾನ್ ಬೇರಾ: ಭಾರತ- ಆಸ್ಟ್ರೇಲಿಯಾ ವಿರುದ್ಧದ 4 ನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಆಸ್ಟ್ರೇಲಿಯಾ ನಿಗದಿತ 50 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 348 ರಂ ಪೇರಿಸಿದ್ದು ಭಾರತಕ್ಕೆ 349 ರನ್ ಗಳ ಗುರಿ ನೀಡಿದೆ.

ಆಡಿದ ಮೂರೂ ಪಂದ್ಯಗಳಲ್ಲಿ ಎದುರಾಗಿರುವ ಸೋಲಿನಿಂದ ಈಗಾಗಲೇ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯನ್ನು ಕಳೆದುಕೊಂಡಿರುವ ಪ್ರವಾಸಿ ಭಾರತ ತಂಡ, ಆಸ್ಟ್ರೇಲಿಯಾದ ವಿರುದ್ಧ ಕ್ಲೀನ್ ಸ್ವೀಪ್ ನಿಂದ ತಪ್ಪಿಸಿಕೊಳ್ಳಲು  ಗೆಲ್ಲಲೇ ಬೇಕಾದ ಅನಿವಾರ್ಯತೆ ಇದೆ.

ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ಅತಿ ವೇಗವಾಗಿ ಅರ್ಧಶತಕ, ಅರೋನ್ ಫಿಂಚ್
ನ ಶತಕ
ದ ಮೂಲಕ ತಂಡ 348 ರನ್ ಗಳ ಮೊತ್ತ ಪೇರಿಸಲು ನೆರವಾದರು. 45 ನೇ ಓವರ್ ನಲ್ಲಿ ಇಶಾಂತ್ ಶರ್ಮಾ ಸ್ಟೀವ್ ಸ್ಮಿತ್ ವಿಕೆಟ್ ಪಡೆದು ಆಸ್ಟ್ರೇಲಿಯಾದ ವೇಗಕ್ಕೆ ಬ್ರೇಕ್ ಹಾಕಿದರು. 

ನಂತರ 48 ನೇ ಓವರ್ ನಲ್ಲಿ ಸರಣಿ ವಿಕೆಟ್ ಪತನಗೊಂಡಿದ್ದರಿಂದ ಆಸ್ಟ್ರೇಲಿಯಾವನ್ನು 350 ಕ್ಕೂ ಹೆಚ್ಚು ರನ್ ಗಳಿಸುವುದರಿಂದ ಕಟ್ಟಿಹಾಕುವುದರಲ್ಲಿ ಭಾರತ ಸಫಲವಾಯಿತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com