
ಸಿಡ್ನಿ: ಸಿಡ್ನಿಯಲ್ಲಿ ನಡೆಯುತ್ತಿರುವ ಪ್ರತಿಷ್ಠಿತ ಆಸ್ಟ್ರೇಲಿಯನ್ ಓಪನ್ ಬ್ಯಾಡ್ಮಿಂಟನ್ ಸೂಪರ್ ಸಿರೀಸ್ ಮಹಿಳಾ ಸಿಂಗಲ್ಸ್ ಪ್ರಶಸ್ತಿ ಭಾರತದ ಸ್ಟಾರ್ ಆಟಗಾರ್ತಿ ಸೈನಾ ನೆಹ್ವಾಲ್ ಅವರ ಮುಡಿಗೇರಿದೆ.
ಸಿಡ್ನಿಯಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಚೀನಾ ಆಟಗಾರ್ತಿ ಸನ್ ಯೂ ಅವರನ್ನು 11-21, 21-14, 21-19 ನೇರ ಸೆಟ್ ಗಳ ಅಂತರದಲ್ಲಿ ಸೇನಾ ಮಣಿಸಿದರು. ಮೊದಲ ಸೆಟ್ ನಲ್ಲಿ ಚೀನಾದ ಆಟಗಾರ್ತಿಯಿಂದ ಪ್ರಬಲ ಹೋರಾಟ ಎದುರಿಸಿದ ಸೈನಾ 11-21ರ ಅಂತರದಲ್ಲಿ ಹಿನ್ನಡೆ ಆನುಭವಿಸಿದರು. ಆದರೆ ಬಳಿಕ ತಿರುಗಿ ಬಿದ್ದು, ತಮ್ಮ ಪ್ರಬಲ ರಿವರ್ಸ್ ಗಳ ಮೂಲಕ ತಿರುಗೇಟು ನೀಡಿದ ಸೈನಾ 2 ಮತ್ತು 3ನೇ ಸೆಟ್ ಅನ್ನು 21-14, 21-19 ಅಂತರದಲ್ಲಿ ಜಯಿಸಿ ಪ್ರಶಸ್ತಿಗೆ ಮುತ್ತಿಟ್ಟಿರು.
ಆ ಮೂಲಕ ಸೈನಾ 2ನೇ ಬಾರಿಗೆ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿ ಪಡೆದ ಕೀರ್ತಿಗೆ ಭಾಜನರಾದರು. ಇದಕ್ಕೂ ಮೊದಲು 2014ರಲ್ಲಿ ಮೊದಲ ಬಾರಿಗೆ ಆಸ್ಟ್ರೇಲಿಯನ್ ಓಪನ್ ಜಯಿಸಿದ್ದರು.
Advertisement