ಮತ್ತೆ ದಾಖಲೆ ಬರೆದ ಉಸೇನ್ ಬೋಲ್ಟ್!

ಖ್ಯಾತ ಮಿಂಚಿನ ಓಟಗಾರ ಜಮೈಕಾದ ಉಸೇನ್ ಬೋಲ್ಟ್ ಮತ್ತೆ ದಾಖಲೆಯೊಂದನ್ನು ಬರೆದಿದ್ದು, ಭಾನುವಾರ ಜಮೈಕಾದಲ್ಲಿ ನಡೆದ ನ್ಯಾಷನಲ್ ರೇಸರ್ಸ್ ಗ್ರಾಂಡ್ ಪ್ರೀಕ್ಸ್ ಅಥ್ಲೆಟಿಕ್ಸ್ ಕೂಟದ 100 ಮೀಟರ್ ಓಟದಲ್ಲಿ ಗೆಲುವು ದಾಖಲಿಸಿದ್ದಾರೆ...
ಜಮೈಕಾ ನ್ಯಾಷನಲ್ ರೇಸರ್ಸ್ ಗ್ರಾಂಡ್ ಪ್ರಿಕ್ಸ್ ನಲ್ಲಿ ಉಸೇನ್ ಬೋಲ್ಟ್
ಜಮೈಕಾ ನ್ಯಾಷನಲ್ ರೇಸರ್ಸ್ ಗ್ರಾಂಡ್ ಪ್ರಿಕ್ಸ್ ನಲ್ಲಿ ಉಸೇನ್ ಬೋಲ್ಟ್

ಜಮೈಕಾ: ಖ್ಯಾತ ಮಿಂಚಿನ ಓಟಗಾರ ಜಮೈಕಾದ ಉಸೇನ್ ಬೋಲ್ಟ್ ಮತ್ತೆ ದಾಖಲೆಯೊಂದನ್ನು ಬರೆದಿದ್ದು, ಭಾನುವಾರ ಜಮೈಕಾದಲ್ಲಿ ನಡೆದ ನ್ಯಾಷನಲ್ ರೇಸರ್ಸ್ ಗ್ರಾಂಡ್ ಪ್ರೀಕ್ಸ್  ಅಥ್ಲೆಟಿಕ್ಸ್ ಕೂಟದ 100 ಮೀಟರ್ ಓಟದಲ್ಲಿ ಗೆಲುವು ದಾಖಲಿಸಿದ್ದಾರೆ.

ಸುಮಾರು 30 ಸಾವಿರ ಪ್ರೇಕ್ಷಕರ ಎದುರು ನಡೆದ ಸ್ಪರ್ಧೆಯಲ್ಲಿ ಜಮೈಕಾದ ಓಟಗಾರ ಬೋಲ್ಟ್ ಕೆಟ್ಟ ಆರಂಭ ಪಡೆದರಾದರೂ, ಬಳಿಕ ಚೇತರಿಸಿಕೊಂಡು ಕೇವಲ 9.88 ಸೆಕೆಂಡ್‌ಗಳಲ್ಲಿ ಗುರಿ  ಮುಟ್ಟಿ ದಾಖಲೆ ನಿರ್ಮಿಸಿದ್ದಾರೆ. ಆ ಮೂಲಕ ಅತಿ ಕಡಿಮೆ ಅವಧಿಯಲ್ಲಿ ಸ್ಪರ್ಧೆ ಮುಗಿಸಿ ವರ್ಷದ 2ನೇ ಅತಿವೇಗದ ಟೈಮಿಂಗ್ ದಾಖಲೆ ಬರೆದಿದ್ದಾರೆ. ಕಳೆದ ತಿಂಗಳು ಓಸ್ಟ್ರಾವದಲ್ಲಿ ನಡೆದ  ಸ್ಪರ್ಧೆಯಲ್ಲಿ 9.98 ಸೆಕೆಂಡ್‌ಗಳಲ್ಲಿ ಓಡಿದ್ದ ಬೋಲ್ಟ್ ತಮ್ಮ ಈ ವರ್ಷದ ಶ್ರೇಷ್ಠ ನಿರ್ವಹಣೆಯನ್ನು ಸುಧಾರಿಸಿಕೊಂಡಿದ್ದಾರೆ.

ಬೋಲ್ಟ್ ನಂತರದ ಸ್ಥಾನದಲ್ಲಿ ನಿಕೆಲ್ ಆಶ್ಮೆಡ್ (9.94) ಮತ್ತು ಅಸಫ್ ಪಾವೆಲ್ (9.98) ಕ್ರಮವಾಗಿ 2 ಮತ್ತು 3ನೇ ಸ್ಥಾನ ಪಡೆದರು. ಸುಮಾರು 2 ವರ್ಷಗಳ ಬಳಿಕ ತವರು ಅಭಿಮಾನಿಗಳ  ಎದುರು ಓಡಿದ ಬೋಲ್ಟ್, ಸ್ಪರ್ಧೆ ಜಯಿಸಿದ್ದಕ್ಕೆ ಖುಷಿಯಾಗಿ ಎಂದು ಹೇಳಿದ್ದಾರೆ. ಅಂತೆಯೇ "ಇದು ಪರಿಪೂರ್ಣ ರೇಸ್ ಆಗಿರಲಿಲ್ಲ ಎಂದು ಅಭಿಪ್ರಾಯಪಟ್ಟಿರುವ ಬೋಲ್ಟ್, ಮುಂದಿನ  ಪಂದ್ಯಗಳಲ್ಲಿ ಮತ್ತಷ್ಟು ಕಠಿಣ ತಾಲೀಮು ನಡೆಸುವುದಾಗಿ ಹೇಳಿದ್ದಾರೆ.

ಇತ್ತೀಚೆಗೆ ಮಾಂಟ್ರಿಯಲ್‌ನಲ್ಲಿ ನಡೆದ 100 ಮೀ. ಓಟದಲ್ಲಿ ಫ್ರಾನ್ಸ್ ನ ಜಿಮ್ಮಿ ವಿಕೌಟ್ 9.86 ಸೆಕೆಂಡ್‌ಗಳಲ್ಲಿ ಓಡಿರುವುದು ಈ ವರ್ಷದ ಶ್ರೇಷ್ಠ ನಿರ್ವಹಣೆಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com