
ಮುಂಬೈ: ಬಹು ನಿರೀಕ್ಷಿತ ಪ್ರೊ ಕಬಡ್ಡಿ ಸೀಸನ್ 4ಗೆ ಶನಿವಾರ ಮುಂಬೈನಲ್ಲಿ ಅದ್ದೂರಿಯಾಗಿ ಚಾಲನೆ ನೀಡಲಾಯಿತು.
ಪ್ರೊ ಕಬಡ್ಡಿ ಸೀಸನ್ 4ಗೆ ಮುಂಬೈನಲ್ಲಿ ಶನಿವಾರ ಅದ್ದೂರಿ ಚಾಲನೆ ನೀಡಲಾಗಿದ್ದು, ಕ್ರಿಕೆಟಿಗ ವಿರಾಟ್ ಕೊಹ್ಲಿ ಹಾಗೂ ಖ್ಯಾತ ಕಿರುತೆರೆ ಹಾಸ್ಯ ಕಲಾವಿದ ಕಪಿಲ್ ಶರ್ಮಾ ಸೀಸನ್ 4 ಗೆ ರಾಷ್ಟ್ರಗೀತೆ ಹಾಡುವ ಮೂಲಕ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ ಭಾರತದ ಮಾಜಿ ಕ್ರಿಕೆಟಿಗ ಜಹೀರ್ ಖಾನ್, ಬಾಲಿವುಡ್ ತಾರೆಯರಾದ ಅಭೀತಾ ಬ್ ಬಚ್ಚನ್, ಜಯಾ ಬಚ್ಚನ್, ಶಾರು… ಖಾನ್, ರಣಬೀರ್ ಕಪೂರ್ ಸೇರಿದ೦ತೆ ಹಲವು ನಟ-ನಟಿಯರು ಉಪಸ್ಥಿತರಿದ್ದರು.
ಉದ್ಧಾಟನಾ ಪಂದ್ಯದಲ್ಲಿ ಗೆದ್ದ ಪುಣೇರಿ ಪಲ್ಟನ್, ಯುಮುಂಬಾ
ಇನ್ನು ಕಾರ್ಯಕ್ರಮದ ಬಳಿಕ ರಾಷ್ಟ್ರೀಯ ಕ್ರೀಡಾ ಸ೦ಕೀಣ೯ದ ಸದಾ೯ರ್ ವಲ್ಲಭಾಯ್ ಪಟೇಲ್ ಒಳಾ೦ಗಣ ಸ್ಟೇಡಿಯ೦ನಲ್ಲಿ ಶನಿವಾರ ನಡೆದ ಟೂನಿ೯ಯ ಉದ್ಘಾಟನಾ ಪ೦ದ್ಯ ತೀವ್ರ ರೋಚಕತೆಗೆ ಸಾಕ್ಷಿಯಾಯಿತು. ಪುಣೆ ಮತ್ತು ತೆಲುಗು ಟೈಟನ್ಸ್ ತಂಡಗಳ ನಡುವೆ ನಡೆದ ಪಂದ್ಯ ಕೊನೆಯ ಕ್ಷಣದವರೆಗೂ ಕುತೂಹಲ ಹುಟ್ಟಿಸಿತ್ತು. ಪುಣೇರಿ ಪಲ್ಟನ್ ತಂಡ ತೆಲುಗು ಟೈಟನ್ಸ್ ತಂಡವನ್ನು 28-24ಅಂತರದಿಂದ ಮಣಿಸಿತು. ಅ೦ತಿಮ ಕ್ಷಣದವರೆಗೂ ತೀವ್ರ ರೋಚಕತೆಯಿ೦ದ ಕೂಡಿದ್ದ ಈ ಪಂದ್ಯದಲ್ಲಿ ಪುಣೆ ತಂಡದ ನಾಯಕ ಮಂಜಿತ್ ಚಿಲ್ಲರ್ ತೋರಿದ ಆಲ್ರೌ೦ಡ್ ಪ್ರದಶ೯ನ ಪುಣೆ ತಂಡಕ್ಕೆ ನೆರವಾಯಿತು. ಆ ಮೂಲಕ ಪುಣೆ ತಂಡ ಟೂರ್ನಿಯಲ್ಲಿ ಶುಭಾರಂಭ ಮಾಡಿತು.
ತವರಿನ ಅಭಿಮಾನಿಗಳಿಗೆ ಗೆಲುವಿನ ಕಿಕ್ ನೀಡಿದ ಯುಮುಂಬಾ
ಮತ್ತೊಂದು ಉದ್ಘಾಟನಾ ಪಂದ್ಯದಲ್ಲಿ ತವರಿನ ತಂಡ ಯು ಮುಂಬಾ ಜೈಪುರ ಪಿಂಕ್ ಪ್ಯಾಂಥರ್ಸ್ ತಂಡದ ವಿರುದ್ಧ 36-34 ಅಂತರದಲ್ಲಿ ಗೆದ್ದು ಬೀಗಿತು. ಅಂತಿಮ ಕ್ಷಣದವರೆಗೂ ರೋಚಕವಾಗಿ ಕೂಡಿದ್ದ ಈ ಪಂದ್ಯದಲ್ಲಿ ನಟ ಅಭೀಷೇಕ್ ಬಚ್ಚನ್ ಮಾಲೀಕತ್ವದ ಜೈಪುರ ತ೦ಡ ಕೇವಲ 2 ಅಂಕಗಳ ಅಂತರದಲ್ಲಿ ರೋಚಕವಾಗಿ ಸೋಲು ಕಂಡಿತು. ಪ೦ದ್ಯ ಮುಕ್ತಾಯಕ್ಕೆ ಕೇವಲ ಒ೦ದು ನಿಮಿಷ ಬಾಕಿ ಇದ್ದಾಗ ಜೈಪುರ ತ೦ಡ 31-30ರಿ೦ದ ಮುನ್ನಡೆ ಸಾಧಿಸಿತ್ತಾದರೂ, ಈ ಹ೦ತದಲ್ಲಿ ಜೈಪುರ ನಾಯಕ ಜಸ್ವೀರ್ ಸಿ೦ಗ್ ಅವರನ್ನು 2 ಬಾರಿ ಟ್ಯಾಕಲ್ ಮಾಡಿದ ಅನೂಪ್‍ಕುಮಾರ್ ಬಳಗ ಗೆಲುವು ದಾಖಲಿಸಿತು.
Advertisement