ದಾಂಪತ್ಯ ಜೀವನಕ್ಕೆ ಕಾಲಿಟ್ಟ ರಾಬಿನ್ ಉತ್ತಪ್ಪ

ಭಾರತೀಯ ಕ್ರಿಕೆಟಿಗರ ವೈವಾಹಿಕ ಜೀವನ ಸರಣಿ ಮುಂದುವರೆದಿದ್ದು, ಕರ್ನಾಟಕ ಮೂಲದ ಕ್ರಿಕೆಟಿಗ ರಾಬಿನ್...
Image courtsey: Twitter - @iam_juhi (Juhi Chawla)
Image courtsey: Twitter - @iam_juhi (Juhi Chawla)
Updated on
ಬೆಂಗಳೂರು: ಭಾರತೀಯ ಕ್ರಿಕೆಟಿಗರ ವೈವಾಹಿಕ ಜೀವನ ಸರಣಿ ಮುಂದುವರೆದಿದ್ದು, ಕರ್ನಾಟಕ ಮೂಲದ ಕ್ರಿಕೆಟಿಗ ರಾಬಿನ್ ಉತ್ತಪ್ಪ ಅವರು ಗರುವಾರ ತಮ್ಮ ದೀರ್ಘಕಾಲದ ಗೆಳತಿ ಶೀತಲ್ ಗೌತಮ್ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ಇಂದು ನಗರದ ಖಾಸಗಿ ಹೋಟೆಲ್​ನಲ್ಲಿ ಅದ್ಧೂರಿ ಸಮಾರಂಭದಲ್ಲಿ ಉತ್ತಪ್ಪ ಶೀತಲ್ ಅವರೊಂದಿಗೆ ಹಸೆಮಣೆ ಏರಿದರು. ಮಾರ್ಚ್ 13ರಂದು ಮಡಿಕೇರಿಯಲ್ಲಿ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
30 ವರ್ಷದ ಉತ್ತಪ್ಪ, ಮಾಜಿ ಟೆನಿಸ್ ಆಟಗಾರ್ತಿ ಶೀತಲ್‌ರನ್ನು ಈ ವರ್ಷವೇ ವರಿಸುವುದಾಗಿ ಜನವರಿಯಲ್ಲೇ ಹೇಳಿದ್ದರು. ಈ ಬಾರಿಯ ರಣಜಿ ಟ್ರೋಫಿಯಲ್ಲಿ ಹ್ಯಾಟ್ರಿಕ್ ಶತಕ ಸಿಡಿಸಿ ಮಿಂಚಿದ್ದ  ರಾಬಿನ್ ಉತ್ತಪ್ಪ ಮುಂದಿನ ಐಪಿಎಲ್ ಸರಣಿಗೂ ಮುನ್ನವೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. 
ಉತ್ತಪ್ಪ- ಶೀತಲ್ ನಿಶ್ಚಿತಾರ್ಥ ಕಳೆದ ವರ್ಷಾಂತ್ಯದಲ್ಲಿ ಮಾರಿಷಸ್‌ನಲ್ಲಿ ನಡೆದಿತ್ತು. ಈ ಬಗ್ಗೆ ಉತ್ತಪ್ಪ ಟ್ವಿಟರ್‌ನಲ್ಲಿ ಪ್ರಕಟಿಸಿದ್ದರು. 2008ರಿಂದಲೂ ಅವರಿಬ್ಬರು ಜತೆಯಾಗಿ ಸುತ್ತಾಡಿದ್ದರು.
ಕಾಲೇಜಿನಲ್ಲಿ ರಾಬಿನ್ ಉತ್ತಪ್ಪ ಸೀನಿಯರ್ ಆಗಿದ್ದ ಶೀತಲ್ ಗೌತಮ್ ಆಗಲೇ ರಾಷ್ಟ್ರೀಯ ಮಟ್ಟದ ಟೆನಿಸ್​ನಲ್ಲಿ ಆಡಿದ್ದರು. ಕಾಮನ್ ಫ್ರೆಂಡ್ ಸಹಾಯದಿಂದ ಶೀತಲ್​ರನ್ನು ಭೇಟಿಯಾಗಿದ್ದ ಉತ್ತಪ್ಪ 6 ವರ್ಷ ಸ್ನೇಹಿತರಾಗಿ ತಿರುಗಾಡಿದ್ದರು. 2013ರಲ್ಲಿ ಇವರ ಸ್ನೇಹ ಪ್ರೀತಿಗೆ ತಿರುಗಿತ್ತು. ಕಳೆದ ನವೆಂಬರ್​ನಲ್ಲಿ ನೀಡಿದ ಸಂದರ್ಶನದಲ್ಲಿ ಮಾರ್ಚ್ ವೇಳೆಗೆ ಶೀತಲ್​ರನ್ನು ವಿವಾಹವಾಗುವುದಾಗಿ ಹೇಳಿದ್ದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com