ಡೋಪಿಂಗ್ ಟೆಸ್ಟ್ ನಲ್ಲಿ ಶರಪೋವಾ ವಿಫಲ: ಒಪ್ಪಂದ ರದ್ದುಗೊಳಿಸಿದ ನೈಕ್

ಡೋಪಿಂಗ್ ಪರೀಕ್ಷೆಯಲ್ಲಿ ರಷ್ಯಾದ ಮರಿಯಾ ಶರಪೋವಾ ಅವರು ವಿಫಲರಾದ ಹಿನ್ನಲೆಯಲ್ಲಿ ಖ್ಯಾತ ಕ್ರೀಡಾ ಸಾಮಗ್ರಿಗಳ ಸಂಸ್ಥೆ ನೈಕ್ ಶರಪೋವಾರೊಂದಿಗೆನ ತನ್ನ ಒಪ್ಪಂದವನ್ನು ಅಮಾನತು ಮಾಡಿದೆ...
ನೈಕ್ ಜಾಹಿರಾತಿನಲ್ಲಿ ಮರಿಯಾ ಶರಪೋವಾ (ಸಂಗ್ರಹ ಚಿತ್ರ)
ನೈಕ್ ಜಾಹಿರಾತಿನಲ್ಲಿ ಮರಿಯಾ ಶರಪೋವಾ (ಸಂಗ್ರಹ ಚಿತ್ರ)

ಮೆಲ್ಬೋರ್ನ್: ಅಂತಾರಾಷ್ಟ್ರೀಯ ಟೆನ್ನಿಸ್ ಸಂಸ್ಥೆ ನಡೆಸಿದ ಡೋಪಿಂಗ್ ಪರೀಕ್ಷೆಯಲ್ಲಿ ಖ್ಯಾತ ಟೆನ್ನಿಸ್ ಆಟಗಾರ್ತಿ ರಷ್ಯಾದ ಮರಿಯಾ ಶರಪೋವಾ ಅವರು ವಿಫಲರಾದ ಹಿನ್ನಲೆಯಲ್ಲಿ ಖ್ಯಾತ  ಕ್ರೀಡಾ ಸಾಮಗ್ರಿಗಳ ಸಂಸ್ಥೆ ನೈಕ್ ಶರಪೋವಾರೊಂದಿಗೆನ ತನ್ನ ಒಪ್ಪಂದವನ್ನು ಅಮಾನತು ಮಾಡಿದೆ.

ವಿಶ್ವದ ಮಾಜಿ ನಂಬರ್ 1 ಟೆನ್ನಿಸ್ ಆಟಗಾರ್ತಿ ರಷ್ಯಾದ ಮರಿಯಾ ಶರಪೋವಾಗೆ ಶಾಕ್ ಮೇಲೆ ಶಾಕಿಂಗ್ ಸುದ್ದಿಗಳು ಕೇಳುತ್ತಿದ್ದು, ನಿನ್ನೆಯಷ್ಟೇ ಅಂತಾರಾಷ್ಟ್ರೀಯ ಟೆನ್ನಿಸ್ ಸಂಸ್ಥೆ ಡೋಪಿಂಗ್  ಟೆಸ್ಟ್ ನಲ್ಲಿ ಶರಪೋವಾ ವಿಫಲರಾಗಿವುದನ್ನು ತಿಳಿಸಿತ್ತು. ಈ ವಿಚಾರವನ್ನು ಇಂದು ಅವರು ಬಹಿರಂಗಗೊಳಿಸಿದ ಬೆನ್ನಲ್ಲೇ ನೈಕ್ ಸಂಸ್ಥೆ ಶರಪೋವಾರೊಂದಿಗೆ ಮಾಡಿಕೊಂಡಿದ್ದ ಹಲವು  ಒಪ್ಪಂದಗಳನ್ನು ಅಮಾನತು ಮಾಡಿದೆ.

ಮೂಲಗಳ ಪ್ರಕಾರ ಶರಪೋವಾ ಅವರು ಖ್ಯಾತ ಕ್ರೀಡಾ ಸಾಮಗ್ರಿಗಳ ತಯಾರಿಕಾ ಸಂಸ್ಥೆ ನೈಕ್ ನೊಂದಿಗೆ ಸುಮಾರು 30 ಮಿಲಿಯನ್ ಡಾಲರ್ ಒಪ್ಪಂದ ಮಾಡಿಕೊಂಡಿದ್ದರು ಎಂದು  ತಿಳಿದುಬಂದಿದೆ. ಇದೀಗ ಅವರು ಡೋಪಿಂಗ್ ಟೆಸ್ಟ್ ನಲ್ಲಿ ಸಿಕ್ಕಿಬಿದ್ದ ಪರಿಣಾಮ ನೈಕ್ ಸಂಸ್ಥೆ ಅವರೊಂದಿಗಿನ ಎಲ್ಲಾ ಒಪ್ಪಂದಗಳನ್ನು ಅಮಾನತು ಮಾಡಿದೆ.

ಈ ಬಗ್ಗೆ ತನ್ನ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿರುವ ನೈಕ್ ಸಂಸ್ಥೆ, ಮರಿಯಾ ಶರಪೋವಾ ಕುರಿತು ಸುದ್ದಿಗಳನ್ನು ಕೇಳಿ ನಮಗೆ ನಿಜಕ್ಕೂ ಆಘಾತವಾಯಿತು. ಪ್ರಕರಣದ ತನಿಖೆ  ನಡೆಯುತ್ತಿರುವುದರಿಂದ ನಾವು ಶರಪೋವಾ ಅವರೊಂದಿಗಿನ ಒಪ್ಪಂದಗಳನ್ನು ಅಮಾನತು ಮಾಡುವ ನಿರ್ಧಾರಕ್ಕೆ ಬಂದಿದ್ದೇವೆ ಎಂದು ಹೇಳಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com