ಭಾರಿ ಚರ್ಚೆಗೆ ಕಾರಣವಾದ ಶರಪೋವಾ ನಿವೃತ್ತಿ ಊಹಾಪೋಹ

ಮಂಗಳವಾರ ದಿಢೀರ್ ಪತ್ರಿಕಾಗೋಷ್ಠಿ ಕರೆದಿದ್ದ ರಷ್ಯಾದ ಟೆನ್ನಿಸ್ ಆಟಗಾರ್ತಿ ಮರಿಯಾ ಶರಪೋವಾ ಅವರು ತಮ್ಮ ನಿವೃತ್ತಿ ಘೋಷಣೆ ಮಾಡಲಿದ್ದಾರೆ ಎಂದು ಎಣಿಸಿ ಟ್ವಿಟರ್ ಮತ್ತು ಫೇಸ್ ಬುಕ್ ಗಳಲ್ಲಿ ಭಾರಿ ಚರ್ಚೆ ನಡೆದಿದ್ದವು.
ರಷ್ಯಾದ ಆಟಗಾರ್ತಿ ಮರಿಯಾ ಶರಪೋವಾ (ಸಂಗ್ರಹ ಚಿತ್ರ)
ರಷ್ಯಾದ ಆಟಗಾರ್ತಿ ಮರಿಯಾ ಶರಪೋವಾ (ಸಂಗ್ರಹ ಚಿತ್ರ)

ಆಸ್ಟ್ರೇಲಿಯಾ: ಮಂಗಳವಾರ ದಿಢೀರ್ ಪತ್ರಿಕಾಗೋಷ್ಠಿ ಕರೆದಿದ್ದ ರಷ್ಯಾದ ಟೆನ್ನಿಸ್ ಆಟಗಾರ್ತಿ ಮರಿಯಾ ಶರಪೋವಾ ಅವರು ತಮ್ಮ ನಿವೃತ್ತಿ ಘೋಷಣೆ ಮಾಡಲಿದ್ದಾರೆ ಎಂದು ಎಣಿಸಿ ಟ್ವಿಟರ್  ಮತ್ತು ಫೇಸ್ ಬುಕ್ ಗಳಲ್ಲಿ ಭಾರಿ ಚರ್ಚೆ ನಡೆದಿದ್ದವು.

ಸತತ ಗಾಯದ ಸಮಸ್ಯೆಯಿಂದ ಬಳಲುತ್ತಿರುವ ವಿಶ್ವದ ಮಾಜಿ ನಂಬರ್ 1 ಟೆನ್ನಿಸ್ ಆಟಗಾರ್ತಿ ಮರಿಯಾ ಶರಪೋವಾ ಅವರು ನಿವೃತ್ತಿ ತೆಗೆದುಕೊಳ್ಳಲು ಬಯಸಿದ್ದಾರೆ ಮತ್ತು ಇದೇ ಕಾರಣಕ್ಕೆ  ಅವರು ಸುದ್ದಿಗೋಷ್ಟಿ ಕರೆದಿದ್ದಾರೆ ಎಂದೇ ಎಣಿಸಲಾಗಿತ್ತು. ತಮ್ಮ ಎಡಗೈ ಭುಜದಲ್ಲಿನ ನೋವಾ ಶರಪೋವಾ ಅವರ ನಿವೃತ್ತಿಗೆ ಕಾರಣ ಎಂಬ ವಾದಗಳೂ ಕೂಡ ಕೇಳಿಬಂದಿತ್ತು. ಈ ಹಿಂದೆ  ಅಮೆರಿಕದ ಸೆರೆನಾ ವಿಲಿಯಮ್ಸ್ ಜೊತೆಗಿನ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಗಾಯಗೊಂಡಿದ್ದ ಶರಪೋವಾ ಆ ಬಳಿಕ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಕಾಣಿಸಿಕೊಂಡಿರಲಿಲ್ಲ.

ಇದೂ ಕೂಡ ನಿವೃತ್ತಿ ಊಹಾಪೋಹಗಳಿಗೆ ಕಾರಣವಾಗಿತ್ತು. ಆದರೆ ಈ ಊಹಾಪೋಹಗಳನ್ನು ಸುಳ್ಳು ಮಾಡಿದ ಶರಪೋವಾ ತಾವು ಮಾದಕ ದ್ರವ್ಯ ಪರೀಕ್ಷೆಯಲ್ಲಿ ವಿಫಲರಾಗಿರುವುದಾಗಿ ಹೇಳಿ  ಎಲ್ಲ ಅಂತೆಕಂತೆಗಳಿಗೆ ತೆರೆ ಎಳೆದರು. ಇಂದು ಆಸ್ಟ್ರೇಲಿಯಾದಲ್ಲಿ ಸುದ್ದಿಗೋಷ್ಠಿ ನಡೆಸಿದ ಶರಪೋವಾ ಮಾದಕ ದ್ರವ್ಯ ಪರೀಕ್ಷೆಯಲ್ಲಿ ತಾವು ವಿಫಲರಾಗಿರುವುದಾಗಿ ಹೇಳಿದ್ದಾರೆ. ಪ್ರಸ್ತುತ  ಶರಪೋವಾ ಅವರನ್ನು ಐಟಿಎಫ್ ಅಮಾನತು ಮಾಡಿದ್ದು, ಇದೇ ಮಾರ್ಚ್ 12ರಂದು ಅಂತಿಮ ನಿರ್ಧಾರ ತೆಗೆದುಕೊಳ್ಳಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com