ಮರಿಯಮ್ಮ ಕೋಶಿ
ಕ್ರೀಡೆ
ಹಾಕಿ ಇಂಡಿಯಾ ನೂತನ ಅಧ್ಯಕ್ಷೆ ಮಹಿಯಮ್ಮ ಕೋಶಿ
ಹಾಕಿ ಇಂಡಿಯಾದ(ಎಚ್ಐ) ನೂತನ ಅಧ್ಯಕ್ಷರಾಗಿ ಕೇರಳದ ಮರಿಯಮ್ಮ ಕೋಶಿ ನೇಮಕಗೊಂಡಿದ್ದಾರೆ...
ನವದೆಹಲಿ: ಹಾಕಿ ಇಂಡಿಯಾದ(ಎಚ್ಐ) ನೂತನ ಅಧ್ಯಕ್ಷರಾಗಿ ಕೇರಳದ ಮರಿಯಮ್ಮ ಕೋಶಿ ನೇಮಕಗೊಂಡಿದ್ದಾರೆ.
ಶುಕ್ರವಾರ ನಡೆದ ಹಾಕಿ ಇಂಡಿಯಾದ 41ನೇ ಕಾರ್ಯಕಾರಿ ಮಂಡಳಿ ಸಭೆಯಲ್ಲಿ ಕೋಶಿ ಅವರನ್ನು ಅಧ್ಯಕ್ಷರನ್ನಾಗಿ ನೇಮಕಗೊಳಿಸಲಾಗಿದ್ದು ಹಾಕಿ ಇಂಡಿಯಾ ಲೀಗ್ ಆಡಳಿತ ಮಂಡಳಿಯ ಅಧ್ಯಕ್ಷ ಹುದ್ದೆಗೆ ಪ್ರಧಾನ ಕಾರ್ಯದರ್ಶಿ ಮುಸ್ತಾಖಿ ಅಹ್ಮದ್ ನೇಮಕಗೊಂಡಿದ್ದಾರೆ.
ಅಂತಾರಾಷ್ಟ್ರೀಯ ಹಾಕಿ ಒಕ್ಕೂಟದ(ಎಫ್ಐಎಚ್) ನೂತನ ಅಧ್ಯಕ್ಷ ನರೀಂದರ್ ಬಾತ್ರಾ ಹಾಕಿ ಇಂಡಿಯಾ ಅಧ್ಯಕ್ಷ ಹುದ್ದೆಯನ್ನು ತ್ಯಜಿಸಿದ ಹಿನ್ನೆಲೆಯಲ್ಲಿ ಮರಿಯಮ್ಮ ಆ ಸ್ಥಾನವನ್ನು ನೇಮಕಗೊಂಡಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ