ವಿಶ್ವಕಪ್ ಕಬ್ಬಡ್ಡಿ: ಕಾಂಗರೂಗಳ ವಿರುದ್ಧ ಬಾಂಗ್ಲಾದೇಶಕ್ಕೆ ವಿಶ್ವ ದಾಖಲೆ ಜಯ

ಭಾರತದಲ್ಲಿ ನಡೆಯುತ್ತಿರುವ ವಿಶ್ವಕಪ್ ಕಬ್ಬಡ್ಡಿ 2016ರಲ್ಲಿ ಬಾಂಗ್ಲಾದೇಶದ ಪಾರಮ್ಯ ಮುಂದುವರೆದಿದ್ದು, ಸೋಮವಾರ ಬಲಾಢ್ಯ ಆಸ್ಟ್ರೇಲಿಯಾ ತಂಡದ ವಿರುದ್ಧ ನಡೆದ ಪಂದ್ಯದಲ್ಲಿ ಬರೊಬ್ಬರಿ 80-8 ಅಂಕಗಳ ಅಂತರದ ವಿಶ್ವದಾಖಲೆ ಜಯ ಸಾಧಿಸಿದೆ.
ಬಾಂಗ್ಲಾದೇಶ ಹಾಗೂ ಆಸ್ಟ್ರೇಲಿಯಾ ನಡುವಿನ ಪಂದ್ಯ
ಬಾಂಗ್ಲಾದೇಶ ಹಾಗೂ ಆಸ್ಟ್ರೇಲಿಯಾ ನಡುವಿನ ಪಂದ್ಯ

ಅಹ್ಮದಾಬಾದ್: ಭಾರತದಲ್ಲಿ ನಡೆಯುತ್ತಿರುವ ವಿಶ್ವಕಪ್ ಕಬ್ಬಡ್ಡಿ 2016ರಲ್ಲಿ ಬಾಂಗ್ಲಾದೇಶದ ಪಾರಮ್ಯ ಮುಂದುವರೆದಿದ್ದು, ಸೋಮವಾರ ಬಲಾಢ್ಯ ಆಸ್ಟ್ರೇಲಿಯಾ ತಂಡದ ವಿರುದ್ಧ ನಡೆದ  ಪಂದ್ಯದಲ್ಲಿ ಬರೊಬ್ಬರಿ 80-8 ಅಂಕಗಳ ಅಂತರದ ವಿಶ್ವದಾಖಲೆ ಜಯ ಸಾಧಿಸಿದೆ.

ಅಹ್ಮದಾಬಾದ್ ನ ಟ್ರಾನ್ಸ್ ಸ್ಟೇಡಿಯಾದಲ್ಲಿ ಸೋಮವಾರ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಸವಾರಿ ಮಾಡಿದ ಬಾಂಗ್ಲಾದೇಶ ಆಟಗಾರರು ವಿಶ್ವದಾಖಲೆಯ 80-8 ಅಂಕಗಳ  ಅಂತರದಿಂದ ಗೆಲುವು ಸಾಧಿಸಿದರು. ಅಂತಾರಾಷ್ಟ್ರೀಯ ಕಬ್ಬಡ್ಡಿ ಇತಿಹಾಸದಲ್ಲಿಯೇ ತಂಡವೊಂದು ಗಳಿಸಿದ ಗರಿಷ್ಟ ಅಂಕಗಳಿದಾಗಿದ್ದು, ಈ ಪೈಕಿ 42 ಅಂಕಗಳು ರೈಡಿಂಗ್ ನಿಂದ ಬಂದ  ಅಂಕಗಳಾಗಿದ್ದು, 18 ಅಂಕಗಳು ಟ್ಯಾಕಲ್ ನಿಂದ ಬಂದದ್ದಾಗಿದೆ. ಉಳಿದ 20 ಅಂಕಗಳು ಇತರೆ ವಿಭಾಗದಿಂದ ಬಂದಿದೆ.

ಆರಂಭದಿಂದಲೂ ಆಸ್ಟ್ರೇಲಿಯಾ ಮೇಲೆ ಮುಗಿ ಬಿದ್ದ ಬಾಂಗ್ಲಾದೇಶ ಆಟಗಾರರು ಪಂದ್ಯ ಆರಂಭವಾದ ಕೇವಲ ಮೂರೇ ನಿಮಿಷದಲ್ಲಿ ಆಸಿಸ್ ಆಟಗಾರರನ್ನು ಆಲ್ ಔಟ್ ಮಾಡುವ ಮೂಲಕ  ಮೊದಲ ಯಶಸ್ಸು ಸಾಧಿಸಿದರು. ಬಳಿಕ ರೈಡಿಂಗ್ ಹಾಗೂ ಬಲಿಷ್ಟ ಟ್ಯಾಕಲ್ ಗಳಿಂದ ಅಂಕಗಳನ್ನು ಸಂಪಾದಿಸುತ್ತಲೇ ಹೋದ ಬಾಂಗ್ಲಾದೇಶದ ಎದುರು ಆಸ್ಟ್ರೇಲಿಯಾ ಒಂದೊಂದು  ಅಂಕಗಳಿಕೆಗೂ ಪರದಾಡುವಂತೆ ಮಾಡಿತ್ತು. ಇಡೀ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಬರೊಬ್ಬರಿ 7 ಬಾರಿ ಆಲ್ ಔಟ್ ಆಯಿತು ಎಂದರೆ ಬಾಂಗ್ಲಾದೇಶದ ದಾಳಿ ಹೇಗಿತ್ತು ಎಂಬುದನ್ನು  ಊಹಿಸಿಕೊಳ್ಳಬಹುದು.

ವಿಶ್ವಕಪ್ ಟೂರ್ನಿ ಆರಂಭಕ್ಕೂ ಮೊದಲು ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿದ್ದ ಆಸ್ಟ್ರೇಲಿಯಾ ತನ್ನ ಹೀನಾಯ ಪ್ರದರ್ಶನದ ಮೂಲಕ ಇದೀಗ ಟೂರ್ನಿಯಿಂದ ಹೊರಬಿದ್ದಿದೆ. ಪ್ರಮುಖವಾಗಿ  ಸೋಮವಾರ ಬಾಂಗ್ಲಾ ವಿರುದ್ಧದ ಪಂದ್ಯವನ್ನು ಗೆದ್ದು ಟೂರ್ನಿಗೆ ಗೌರವಯುತ ವಿದಾಯ ಹೇಳುವ ವಿಶ್ವಾಸದಲ್ಲಿದ್ದ ಆಸ್ಟ್ರೇಲಿಯಾಗೆ ಬಾಂಗ್ಲಾದೇಶದ ಆಟಗಾರರು ಈ ಭರ್ಜರಿ ಗೆಲುವಿನ ಮೂಲಕ  ಗಾಯದ ಬರೆ ಎಳೆದಿದ್ದಾರೆ.

ಈ ಭರ್ಜರಿ ಗೆಲುವಿನ ಮೂಲಕ ಅಂಕಪಟ್ಟಿಯಲ್ಲಿ ಬಾಂಗ್ಲಾದೇಶ 3ನೇ ಸ್ಥಾನಕ್ಕೆ ಜಿಗಿದಿದೆ. ಎ ವಿಭಾಗದ ಪಟ್ಟಿಯಲ್ಲಿ ಪ್ರಸ್ತುತ 25 ಅಂಕ ಗಳಿಸಿರುವ ಕೊರಿಯಾ ಮೊದಲ ಸ್ಥಾನದಲ್ಲಿದ್ದು, 16  ಅಂಕಗಳಿಸಿರುವ ಭಾರತ ಎರಡನೇ ಸ್ಥಾನದಲ್ಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com