
ಬೆಂಗಳೂರು: ಏಷ್ಯನ್ ಫುಟ್ ಬಾಲ್(ಎಎಫ್ಸಿ) ಕಪ್ ನಲ್ಲಿ ಫೈನಲ್ ತಲುಪಿದ ಭಾರತದ ಮೊಟ್ಟಮೊದಲ ಕ್ಲಬ್ ಎಂಬ ಹಿರಿಮೆಗೆ ಬೆಂಗಳೂರು ಫುಟ್ ಬಾಲ್ ಕ್ಲಬ್(ಬಿಎಫ್‌ಸಿ) ಪಾತ್ರವಾಗಿದೆ.
ಬೆಂಗಳೂರಿನ ಕಂಠೀರವ ಸ್ಟೇಡಿಯಂನಲ್ಲಿ ಬುಧವಾರ ನಡೆದ ಎಎಫ್‌ಸಿ ಕಪ್ ಸೆಮಿಫೈನಲ್ ನ 2ನೇ ಪಂದ್ಯದಲ್ಲಿ ಬಿಎಫ್‌ಸಿ 3-1 ಗೋಲುಗಳಿಂದ ಹಾಲಿ ಚಾಂಪಿಯನ್ ಮಲೇಷ್ಯಾದ ಜೋಹರ್ ದಾರುಲ್ ತಜೀಮ್(ಜೆಡಿಟಿ) ತಂಡವನ್ನು ಸೋಲಿಸಿದೆ.
ಸೆಪ್ಟೆಂಬಲ್ 28ರಂದು ಮಲೇಷ್ಯಾದಲ್ಲಿ ನಡೆದಿದ್ದ ಸೆಮಿಫೈನಲ್ ನ ಮೊದಲ ಪಂದ್ಯದಲ್ಲಿ ಬಿಎಫ್‌ಸಿ 1-1 ಗೋಲುಗಳಿಂದ ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು.
ಎಎಫ್‌ಸಿ ಕಪ್ ಫೈನಲ್ ಪಂದ್ಯ ನವೆಂಬರ್ 5 ರಂದು ನಡೆಯಲಿದ್ದು ಬಿಎಫ್‌ಸಿ ತಂಡ ಇರಾಕ್ ನ ಅಲ್ ಕ್ಯುವಾ ಅಲ್ ಜಾವಿಯಾ ತಂಡವನ್ನು ಎದುರಿಸಲಿದೆ.
Advertisement