ವಿಶ್ವ ಹೈಜಂಪ್ ಶ್ರೇಯಾಂಕದಲ್ಲಿ 1,2 ಮತ್ತು 3ನೇ ಸ್ಥಾನ ಪಡೆದು ಇತಿಹಾಸ ನಿರ್ಮಿಸಿದ ಭಾರತೀಯ ಅಥ್ಲೀಟ್ಸ್

2016ರ ಒಲಿಂಪಿಕ್ಸ್ ನಡೆದ ರಿಯೋ ನಗರಿಯಲ್ಲಿ ವಿಶ್ವ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟ ಶುರುವಾಗಿದ್ದು ಹೈ ಜಂಪ್ ನಲ್ಲಿ ಶ್ರೇಯಾಂಕದಲ್ಲಿ ಭಾರತದ..
ಭಾರತೀಯ ಅಥ್ಲೀಟ್ಸ್
ಭಾರತೀಯ ಅಥ್ಲೀಟ್ಸ್

ರಿಯೋ ಡಿ ಜನೈರೋ: 2016ರ ಒಲಿಂಪಿಕ್ಸ್ ನಡೆದ ರಿಯೋ ನಗರಿಯಲ್ಲಿ ವಿಶ್ವ ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟ ಶುರುವಾಗಿದ್ದು ಹೈ ಜಂಪ್ ನಲ್ಲಿ ಶ್ರೇಯಾಂಕದಲ್ಲಿ ಭಾರತದ ಮೂವರು ಸ್ಪರ್ಧಿಗಳು ಕ್ರಮವಾಗಿ 1,2 ಮತ್ತು 3ನೇ ಸ್ಥಾನಗಳನ್ನು ಪಡೆಯುವ ಮೂಲಕ ಇತಿಹಾಸ ನಿರ್ಮಿಸಿದ್ದಾರೆ.

ತಮಿಳುನಾಡಿನ ಮರಿಯಪ್ಪನ್ ತಂಗವೇಲು, ಉತ್ತರ ಪ್ರದೇಶದ ವರುಣ್ ಬಾಟಿ ಮತ್ತು ಬಿಹಾರದ ಶರದ್ ಕುಮಾರ್ ಟಿ 42ರ ವಿಭಾಗದಲ್ಲಿ ಹೈ ಜಂಪ್ ನಲ್ಲಿ ಕ್ರಮವಾಗಿ ಮೊದಲ 3 ಸ್ಥಾನ ಪಡೆದಿರುವುದು ವಿಶ್ವ ಪ್ಯಾರಾಥ್ಲೀಟ್ ಶ್ರೇಯಾಂಕದಲ್ಲಿನ ಅಪರೂಪದ ವಿದ್ಯಮಾನವಾಗಿದೆ.

ಸೆಪ್ಟಂಬರ್ 8ರಿಂದ ಆರಂಭವಾಗಲಿರುವ ಪ್ಯಾರಾಲಿಂಪಿಕ್ಸ್ ಸ್ಪರ್ಧೆಗಳಲ್ಲಿ ದಿಟ್ಟ ಪ್ರದರ್ಶನ ನೀಡುವುದರೊಂದಿಗೆ ಪದಕ ಗೆಲ್ಲುವ ಉತ್ಸಾಹದಲ್ಲಿ ಭಾರತೀಯ ಅಥ್ಲೀಟ್ ಗಳಿದ್ದಾರೆ.

ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಇದೇ ಮೊದಲ ಬಾರಿಗೆ 19 ಮಂದಿ ಭಾರತೀಯ ಅಥ್ಲೀಟ್ ಗಳು ಭಾಗವಹಿಸುತ್ತಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com