ಉದ್ಘಾಟನಾ ಸಮಾರಂಭಕ್ಕೆ ನೀಡಿದ್ದ ಭಾರತೀಯ ಅಧಿಕೃತ ಜೆರ್ಸಿಯಲ್ಲಿ ಭಾರತದ ತ್ರಿವರ್ಣ ಧ್ವಜದ ಬಿಳಿ ಬಣ್ಣ ಇರಲಿಲ್ಲ. ಅಲ್ಲದೆ ಟ್ರ್ಯಾಕ್ ಸೂಟ್ ನಲ್ಲಿ ರಾಷ್ಟ್ರ ಧ್ವಜ ಲಾಂಛನ ಸರಿಯಾದ ಜಾಗದಲ್ಲಿ ನಿಗದಿಪಡಿಸಿರಲಿಲ್ಲ. ಜತೆಗೆ ಸಮವಸ್ತ್ರದ ಹಿಂದಿನ ಭಾಗದಲ್ಲಿ ಭಾರತ ಎಂದು ಹೆಸರು ಮುದ್ರಣಗೊಂಡಿರಲಿಲ್ಲ. ಹೀಗಾಗಿ ಭಾರತೀಯ ಅಥ್ಲೀಟ್ ಗಳಿಗೆ ಪಥಸಂಚಲನದಲ್ಲಿ ಭಾಗವಹಿಸಲು ಅಂತರಾಷ್ಟ್ರೀಯ ಪ್ಯಾರಾಲಿಂಪಿಕ್ಸ್ ಸಮಿತಿ ಅವಕಾಶ ನಿರಾಕರಿಸಿತು.