ಸಿಂಗಾಪುರ ಓಪನ್: ಕ್ವಾರ್ಟರ್ ಫೈನಲ್ ಪ್ರವೇಶಿಸಿದ ಭಾರತ ಶಟ್ಲರ್ ಶ್ರೀಕಾಂತ್!

ಮಲೇಷ್ಯಾದ ಸಿಂಗಾಪುರದಲ್ಲಿ ನಡೆಯುತ್ತಿರುವ ಸಿಂಗಾಪುರ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಪುರುಷರ ವಿಭಾಗದ ಸಿಂಗಲ್ಸ್ ಪಂದ್ಯದಲ್ಲಿ ಭಾರತದ ಕಿಡಾಂಬಿ ಶ್ರೀಕಾಂತ್ ಶುಕ್ರವಾರ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಸಿಂಗಾಪುರ: ಮಲೇಷ್ಯಾದ ಸಿಂಗಾಪುರದಲ್ಲಿ ನಡೆಯುತ್ತಿರುವ ಸಿಂಗಾಪುರ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಪುರುಷರ ವಿಭಾಗದ ಸಿಂಗಲ್ಸ್ ಪಂದ್ಯದಲ್ಲಿ ಭಾರತದ ಕಿಡಾಂಬಿ ಶ್ರೀಕಾಂತ್ ಶುಕ್ರವಾರ ಕ್ವಾರ್ಟರ್ ಫೈನಲ್  ಪ್ರವೇಶಿಸಿದ್ದಾರೆ.

ಇಂಡೋನೇಷ್ಯಾದ ಇಹ್ಸನ ಮೌಲಾನಾ ಮುಸ್ತೋಫಾ ವಿರುದ್ಧ ನಡೆದ ಪಂದ್ಯದಲ್ಲಿ ಕಿಡಾಂಬಿ ಶ್ರೀಕಾಂತ್ 18-21, 21-19, 22-20 ನೇರ ಸೆಟ್ ಗಳ ಗೆಲುವು ಸಾಧಿಸಿದ್ದಾರೆ. ಆ ಮೂಲಕ ಶ್ರೀಕಾಂತ್ ಟೂರ್ನಿಯ ಕ್ವಾರ್ಟರ್ ಫೈನಲ್  ಪ್ರವೇಶ ಮಾಡಿದ್ದಾರೆ. ಪ್ರೀ ಕ್ವಾರ್ಟರ್ ಪಂದ್ಯ ಮೊದಲ ಸೆಟ್ ನಲ್ಲಿ 18-21 ಹಿನ್ನಡೆ ಅನುಭವಿಸಿದ ಶ್ರೀಕಾಂತ್ ಬಳಿಕ ಪುಟಿದೆದ್ದು ಮುಂದಿನ ಎರಡೂ ಸೆಟ್ ಗಳನ್ನು 21-19, 22-20 ಅಂಕಗಳ ಅಂತರದಲ್ಲಿ ಗೆದ್ದರು.

ತೀವ್ರ ಕುತೂಹಲ ಕೆರಳಿಸಿದ್ದ ಈ ಪಂದ್ಯ ಒಂದು ಗಂಟೆ 21 ನಿಮಿಷಗಳ ಕಾಲ ನಡೆಯುವುದರೊಂದಿಗೆ ಪ್ರೇಕ್ಷಕರನ್ನು ತುದಿಗಾಲಲ್ಲಿ ನಿಲ್ಲಿಸಿತ್ತು. ಅಂತಿಮವಾಗಿ ಈ ಪಂದ್ಯ ಗೆದ್ದ ಶ್ರೀಕಾಂತ್ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ.

ಕ್ವಾರ್ಟರ್ ಫೈನಲ್ ನಲ್ಲಿ ಶ್ರೀಕಾಂತ್ ಚೀನಾದ ಷೀಯುಖಿ ಅವರನ್ನು ಎದುರಿಸಲಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com