ನವದೆಹಲಿ: 19 ವಯೋಮಿತಿಯೊಳಗಿನ ಸುಲ್ತಾನ್ ಜೊಹಾರ್ ಕಪ್ ಹಾಕಿ ಟೂರ್ನಿ ಮಲೇಷ್ಯಾದಲ್ಲಿ ನಡೆಯಲಿದ್ದು ಇದರಲ್ಲಿ ಪಾಕಿಸ್ತಾನ ಪಾಲ್ಗೊಳ್ಳುವುದರಿಂದ ಭಾರತ ಹಿಂದೆ ಸರಿದಿದೆ.
2014ರಲ್ಲಿ ಭಾರತದಲ್ಲಿ ನಡೆದ ಚಾಂಪಿಯನ್ಸ್ ಟ್ರೋಫಿ ಹಾಕಿ ಸೆಮಿಫೈನಲ್ ನಲ್ಲಿ ಭಾರತ ವಿರುದ್ಧ ಗೆದ್ದ ನಂತರ ಪಾಕಿಸ್ತಾನ ಆಟಗಾರರು ಅಸಭ್ಯ ವರ್ತನೆ ಮಾಡಿದ್ದರು. ಆ ಕುರಿತು ಪಾಕಿಸ್ತಾನ ಹಾಕಿ ಮಂಡಳಿ ಬೇಷರತ್ ಕ್ಷಮೆ ಕೇಳುವವರೆಗೆ ನಮ್ಮ ಪ್ರತಿಭಟನೆ ನಡೆಯಲಿದೆ ಎಂದು ಹಾಕಿ ಇಂಡಿಯಾ ಸ್ಫಷ್ಟಪಡಿಸಿದೆ.
ಸುಲ್ತಾನ್ ಜೊಹಾರ್ ಒಂದು ಆಹ್ವಾನಿತ ಕೂಟ ಮಾತ್ರ. ಇದು ವಿಶ್ವ ಹಾಕಿ ಸಂಸ್ಥೆ ವ್ಯಾಪ್ತಿಯಲ್ಲಿ ಬರುವ ಕೂಟವಾಗಿರುವುದರಿಂದ ಭಾರತಕ್ಕೆ ಭಾಗವಹಿಸದಿರುವ ಅವಕಾಶವಿದೆ ಎಂದು ಹಾಕಿ ಇಂಡಿಯಾ ಹೇಳಿದೆ.