ಗಡಿ ತಂಟೆಗೆ ಬರಬೇಡಿ: ಚೀನಾಗೆ ಬಾಕ್ಸರ್ ವಿಜೇಂದರ್ ಸಿಂಗ್

ಚಾಂಪಿಯನ್ ಟೈಟಲ್ ನ್ನು ಜುಲ್ಫಿಕರ್ ಗೆ ವಾಪಸ್ ನೀಡಲು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ.
ವಿಜೇಂದರ್ ಸಿಂಗ್
ವಿಜೇಂದರ್ ಸಿಂಗ್
Updated on: 
ನವದೆಹಲಿ: ಭಾರತದ ಸ್ಟಾರ್ ಬಾಕ್ಸರ್ ವಿಜೇಂದರ್ ಸಿಂಗ್ ಚೀನಾದ ಬಾಕ್ಸರ್ ಜುಲ್ಫಿಕರ್ ಮೈಮಯ್ತ್ ಅಲಿಯನ್ನು ಸೋಲಿಸಿ ವೃತ್ತಿಪರ ಬಾಕ್ಸಿಂಗ್ ನಲ್ಲಿ ಸತತ 9ನೇ ಗೆಲುವು ಪಡೆದು ಭಾರತೀಯರ ಮನಗೆದ್ದಿದ್ದಾರೆ, ಇದಕ್ಕಿಂತಲೂ ಮತ್ತೊಂದು ವಿಶೇಷ ಸುದ್ದಿ ಇದ್ದು, ಚಾಂಪಿಯನ್ ಟೈಟಲ್ ನ್ನು ಜುಲ್ಫಿಕರ್ ಗೆ ವಾಪಸ್ ನೀಡಲು ನಿರ್ಧರಿಸಿದ್ದಾರೆ ಎಂದು ತಿಳಿದುಬಂದಿದೆ. 
ಭಾರತ ಹಾಗೂ ಚೀನಾ ನಡುವೆ ಶಾಂತಿ ನೆಲೆಸುವುದು ಮುಖ್ಯ, ನಾನು ಚಾಂಪಿಯನ್ ಟೈಟಲ್ ನ್ನು ಜುಲ್ಫಿಕರ್ ಗೆ ವಾಪಸ್ ನೀಡಲಿದ್ದೇನೆ ಎಂದು ಹೇಳಿದ್ದಾರೆ. ಇದೇ ವೇಳೆ ಭಾರತ-ಚೀನಾ ಗಡಿ ವಿಷಯದ ಬಗ್ಗೆ ಮಾತನಾಡಿರುವ ವಿಜೇಂದರ್ ಸಿಂಗ್, ಭಾರತದ ಗಡಿ ತಂಟೆಗೆ ಬರಬೇಡಿ ಎಂದು ಚೀನಾಗೆ ಮನವಿ ಮಾಡಿದ್ದಾರೆ. ಭಾರತ- ಚೀನಾ ನಡುವೆ ಶಾಂತಿ ನೆಲೆಸುವುದು ಮುಖ್ಯವಾಗಿದ್ದು, ಟೈಟಲ್ ನ್ನು ಜುಲ್ಫೀಕರ್ ಗೆ ವಾಪಸ್ ನೀಡುತ್ತೇನೆ, ಇದು ಶಾಂತಿಯ ಸಂದೇಶವಾಗಬೇಕು ಎಂದು ವಿಜೇಂದರ್ ಸಿಂಗ್ ತಿಳಿಸಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com