ಭಾರತ ಜೂನಿಯರ್‌ ಪುರುಷರ ಹಾಕಿ ತಂಡಕ್ಕೆ ಕನ್ನಡಿಗ ಫೆಲಿಕ್ಸ್ ಕೋಚ್

ಕರ್ನಾಟಕದ ಹಿರಿಯ ಹಾಕಿ ಪಟು ಜೂಡ್‌ ಫೆಲಿಕ್ಸ್‌ ಸೆಬಾಸ್ಟಿಯನ್‌ ಭಾರತ ಜೂನಿಯರ್‌ ಪುರುಷರ ಹಾಕಿ ತಂಡದ ಕೋಚ್‌ ಆಗಿ ನೇಮಕವಾಗಿದ್ದಾರೆ.
ಜೂಡ್‌ ಫೆಲಿಕ್ಸ್‌
ಜೂಡ್‌ ಫೆಲಿಕ್ಸ್‌
ನವದೆಹಲಿ:: ಕರ್ನಾಟಕದ ಹಿರಿಯ ಹಾಕಿ ಪಟು ಜೂಡ್‌ ಫೆಲಿಕ್ಸ್‌ ಸೆಬಾಸ್ಟಿಯನ್‌ ಭಾರತ ಜೂನಿಯರ್‌ ಪುರುಷರ ಹಾಕಿ ತಂಡದ ಕೋಚ್‌ ಆಗಿ ನೇಮಕವಾಗಿದ್ದಾರೆ.
ಫೆಲಿಕ್ಸ್‌ ಕೋಚ್ ಆಗಿರುವ ವಿಚಾರವನ್ನು ಹಾಕಿ ಇಂಡಿಯಾ (ಎಚ್‌ಐ) ಮಂಗಳವಾರ ಪ್ರಕಟಿಸಿದ್ದು ವಿಶ್ವ ಚಾಂಪಿಯನ್‌ಷಿಪ್‌ ಪ್ರಶಸ್ತಿಯ ಮೇಲೆ ಕಣ್ಣಿಟ್ಟಿರುವ ಹಾಕಿ ಇಂಡಿಯಾ, 33 ಸದಸ್ಯರ ಸಂಭಾವ್ಯ ತಂಡದ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ತಂಡಕ್ಕೆ ಜೂಡ್ ಅವರು ತರಬೇತಿ ನೀಡಲಿದ್ದಾರೆ ಎನ್ನಲಾಗಿದೆ.
‘ಫೆಲಿಕ್ಸ್‌ ಹಿರಿಯ ಅನುಭವಿ ಆಟಗಾರ. ಈ ಹಿಂದೆ ಭಾರತ ತಂಡಕ್ಕೆ ನಾಯಕರಾಗಿದ್ದವರು. ಕೋಚ್‌ ಆಗಿ ಕೆಲಸ ಮಾಡಿದ ಅನುಭವವೂ ಅವರಿಗಿದೆ. ಅವರ ಮಾರ್ಗರ್ಶನದಲ್ಲಿ ತಂಡ ಉತ್ತಮ ಸಾಧನೆ ಮಾಡುವ ನಂಬಿಕೆ ಇದೆ’ ಎಂದು ಭಾರತದ ಹೈ ಪರ್ಫಾರ್ಮೆನ್ಸ್‌ ಡೈರೆಕ್ಟರ್‌ ಡೇವಿಡ್‌ ಜಾನ್‌ ತಿಳಿಸಿದ್ದಾರೆ.
‘2020 ಮತ್ತು 2024ರ ಒಲಿಂಪಿಕ್ಸ್‌ ಕ್ರೀಡಾಕೂಟಗಳಲ್ಲಿ ಪದಕ ಗೆಲ್ಲುವುದು ನಮ್ಮ ಗುರಿ. ಇದಕ್ಕಾಗಿ ಈಗಿನಿಂದಲೇ ಸಿದ್ಧತೆ ಮಾಡಿಕೊಳ್ಳಬೇಕಿದೆ ಎಂದಿರುವ ಜಾನ್‌ ಫೆಲಿಕ್ಸ್‌ ಮೇಲೆ ನಮಗೆ ಭರವಸೆ ಇದೆ ಂದು ನುಡಿದರು.
ಜೂಡ್‌ ಫೆಲಿಕ್ಸ್‌ 250 ಕ್ಕೂ ಹೆಚ್ಚು ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ತಲಾ ಎರಡು ಒಲಿಂಪಿಕ್ಸ್‌ ಮತ್ತು ವಿಶ್ವ ಕಪ್‌ಗಳಲ್ಲೂ ಅವರು ಆಡಿದ್ದಾರೆ. ಮೂರು ಚಾಂಪಿಯನ್ಸ್‌ ಟ್ರೋಫಿ ಮತ್ತು 1990 ಮತ್ತು 1994ರ ಏಷ್ಯನ್‌ ಕ್ರೀಡಾಕೂಟಗಳಲ್ಲೂ  ಭಾಗವಹಿಸಿದ್ದರು. 1995ರಲ್ಲಿ ಅರ್ಜುನ ಪ್ರಶಸ್ತಿಗೆ ಭಾಜನರಾಗಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com