ವಿಶ್ವ ಹಾಕಿ ರ್ಯಾಂಕಿಂಗ್: ವರ್ಷಾಂತ್ಯದಲ್ಲಿ 6ನೇ ಸ್ಥಾನದಲ್ಲಿ ಪುರುಷರು, 10ನೇ ಸ್ಥಾನದಲ್ಲಿ ಮಹಿಳಾ ತಂಡ

ಅಂತಾರಾಷ್ಟ್ರೀಯ ಹಾಕಿ ಫೆಡರೇಷನ್(ಎಫ್ಐಎಚ್) ರ್ಯಾಂಕಿಂಗ್ ಪಟ್ಟಿಯಲ್ಲಿ ಭಾರತ ಪುರುಷರ ತಂಡ 6ನೇ ಹಾಗೂ ಮಹಿಳೆಯರ ತಂಡ 10ನೇ ಸ್ಥಾನಕ್ಕೆ...
ಭಾರತದ ಪುರುಷರ ಹಾಕಿ ತಂಡ
ಭಾರತದ ಪುರುಷರ ಹಾಕಿ ತಂಡ
ನವದೆಹಲಿ: ಅಂತಾರಾಷ್ಟ್ರೀಯ ಹಾಕಿ ಫೆಡರೇಷನ್(ಎಫ್ಐಎಚ್) ರ್ಯಾಂಕಿಂಗ್ ಪಟ್ಟಿಯಲ್ಲಿ ಭಾರತ ಪುರುಷರ ತಂಡ 6ನೇ ಹಾಗೂ ಮಹಿಳೆಯರ ತಂಡ 10ನೇ ಸ್ಥಾನಕ್ಕೆ ತೃಪ್ತಿಪಟ್ಟಿದ್ದಾರೆ. 
2017ರ ಆರಂಭದಿಂದಲು ಪುರುಷರ ತಂಡ ಆರನೇ ಸ್ಥಾನವನ್ನೇ ಕಾಪಾಡಿಕೊಂಡು ಬಂದಿತ್ತು. ಭಾರತ ಪುರುಷರ ತಂಡ 1566 ಅಂಕಗಳನ್ನು ಪಡೆದಿದ್ದು ಜರ್ಮನಿ ತಂಡ 1680 ಅಂಕಗಳನ್ನು ಪಡೆದು ಐದನೇ ಸ್ಥಾನದಲ್ಲಿದೆ. 
ಎಚ್ಡಬ್ಲ್ಯೂಎಲ್ ಫೈನಲ್ ಪಂದ್ಯದಲ್ಲಿ ಅರ್ಜೆಂಟೀನಾ ತಂಡವನ್ನು 2-1 ಗೋಲುಗಳಿಂದ ಸೋಲಿಸುವ ಮೂಲಕ ಆಸ್ಟ್ರೇಲಿಯಾ ಅಗ್ರಸ್ಥಾನಕ್ಕೇರಿದೆ. ಎರಡನೇ ಸ್ಥಾನದಲ್ಲಿ ಅರ್ಜೆಂಟೀನಾ ಇದ್ದು ಮೂರನೇ ಹಾಗೂ ನಾಲ್ಕನೇ ಸ್ಥಾನದಲ್ಲಿ ಬೆಲ್ಜಿಯಂ ಹಾಗೂ ನೆದರ್ ಲ್ಯಾಂಡ್ ಗಳಿವೆ. 
ಇನ್ನು 2017ರ ಆರಂಭದಲ್ಲಿ 12ನೇ ಸ್ಥಾನದಲ್ಲಿದ್ದ ಭಾರತ ಮಹಿಳೆಯರ ತಂಡ 10ನೇ ಸ್ಥಾನಕ್ಕೇರಿದೆ. ಕಳೆದ ತಿಂಗಳು ಏಷ್ಯಾ ಕಪ್ ಜಯಿಸಿದ್ದರಿಂದ ಮಹಿಳಾ ತಂಡ 2 ಸ್ಥಾನ ಮೇಲೆರಲು ಸಾಧ್ಯವಾಯಿತು. ಇನ್ನು ನೆದರ್ ಲ್ಯಾಂಡ್ ತಂಡ ಅಗ್ರಸ್ಥಾನದಲ್ಲಿದ್ದು, ಇಂಗ್ಲೆಂಡ್ ಮತ್ತು ಅರ್ಜೆಂಟೀನಾ ತಂಡಗಳು ಎರಡನೇ ಹಾಗೂ ಮೂರನೇ ಸ್ಥಾನದಲ್ಲಿವೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com