ವಿಜೇಂದರ್ ಸಿಂಗ್ ವಿರುದ್ಧ ಆಡಲು ಚೀನಾ ಬಾಕ್ಸರ್ ಜುಲ್ಫಿಕರ್ ಹಿಂದೇಟು!

ತೀವ್ರ ಕುತೂಹಲ ಕೆರಳಿಸಿದ್ದ ಭಾರತದ ವಿಜೇಂದರ್ ಸಿಂಗ್ ಹಾಗೂ ಚೀನಾದ ಸೂಪರ್ ಮಿಡ್ಲ್​ವೇಟ್ ಬಾಕ್ಸರ್ ಜುಲ್ಪಿಕರ್ ಮೈಮಯ್ತ್ ಲೀ ನಡುವಿನ ಬಾಕ್ಸಿಂಗ್ ಪಂದ್ಯ ರದ್ದಾಗಿದೆ.
ವಿಜೇಂದರ್ ಸಿಂಗ್ ಹಾಗೂ ಜುಲ್ಫಿಕರ್ (ಸಂಗ್ರಹ ಚಿತ್ರ)
ವಿಜೇಂದರ್ ಸಿಂಗ್ ಹಾಗೂ ಜುಲ್ಫಿಕರ್ (ಸಂಗ್ರಹ ಚಿತ್ರ)

ನವದೆಹಲಿ: ತೀವ್ರ ಕುತೂಹಲ ಕೆರಳಿಸಿದ್ದ ಭಾರತದ ವಿಜೇಂದರ್ ಸಿಂಗ್ ಹಾಗೂ ಚೀನಾದ ಸೂಪರ್ ಮಿಡ್ಲ್​ವೇಟ್ ಬಾಕ್ಸರ್ ಜುಲ್ಪಿಕರ್ ಮೈಮಯ್ತ್ ಲೀ ನಡುವಿನ ಬಾಕ್ಸಿಂಗ್ ಪಂದ್ಯ ರದ್ದಾಗಿದೆ.

ಚೀನಾದ ಬಾಕ್ಸರ್ ಜುಲ್ಪಿಕರ್ ಮೈಮಯ್ತ್ ಲೀ ಪಂದ್ಯದಿಂದ ಹಿಂದೆ ಸರಿದ ಪರಿಣಾಮ ಇವರಿಬ್ಬರ ನಡುವಿನ ಪಂದ್ಯ ರದ್ದಾಗಿದೆ. ಆದರೆ ನಿಗದಿತ ದಿನದಂದು ಪಂದ್ಯ ನಡೆಯಲಿದ್ದು, ಜುಲ್ಫಿಕರ್ ಬದಲಿಗೆ ಬೇರೊಬ್ಬ ಸ್ಪರ್ಧಿ ವಿಜೇಂದರ್  ಸಿಂಗ್ ರನ್ನು ಎದುರಿಸಲಿದ್ದಾರೆ. ಜುಲ್ಫಿಕರ್ ಪಂದ್ಯದಿಂದ ಹಿಂದೆ ಸರಿಯಲು ಕಾರಣಗಳು ತಿಳಿದುಬಂದಿಲ್ಲವಾದರೂ,  ಚೀನಾ ಬಾಕ್ಸರ್ ಗರಿಷ್ಠ ಪ್ರಮಾಣದ ಪೂರ್ವ ಸಿದ್ಧತೆಯ ದೃಷ್ಟಿಯಿಂದ ಹಿಂದೆ ಸರಿದಿದ್ದಾರೆ ಎಂದು  ಹೇಳಲಾಗುತ್ತಿದೆ. ಆದರೆ 2017 ಅಂತ್ಯದಲ್ಲಿ ಅಥವಾ 2018ರ ಆರಂಭದಲ್ಲಿ ವಿಜಿ ವಿರುದ್ಧ ಆಡಲು ಸಿದ್ಧನಿರುವುದಾಗಿ ಜುಲ್ಪಿಕರ್ ತಿಳಿಸಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಭಾರತದ ಸ್ಟಾರ್ ಬಾಕ್ಸರ್ ವಿಜೇಂದರ್ ಸಿಂಗ್ ವಿರುದ್ಧ ಏಪ್ರಿಲ್ 1ರಂದು ಮುಂಬೈನಲ್ಲಿ ವೃತ್ತಿಪರ ಬಾಕ್ಸಿಂಗ್ ನಡೆಯಬೇಕಿತ್ತು, ಆದರೆ ಜುಲ್ಫಿಕರ್ ಈ ಪಂದ್ಯದಿಂದ ಹಿಂದೆ ಸರಿದಿದ್ದಾರೆ. ಆದರೆ ಇದೇ ಪಂದ್ಯದಲ್ಲಿ ಮತ್ತೋರ್ವ ಸ್ಪರ್ಧಿ  ವಿಜೇಂದರ್ ಸಿಂಗ್ ರನ್ನು ಎದುರಿಸಲಿದ್ದು, ಆ ಸ್ಪರ್ಧಿ ಯಾರು ಎಂದು ಈ ವರೆಗೂ ತಿಳಿದಿಲ್ಲ.

ಈ ಹಿಂದೆ ಡಬ್ಲ್ಯುಬಿಒ ಏಷ್ಯಾ-ಪೆಸಿಫಿಕ್ ಚಾಂಪಿಯನ್ ಆಗಿರುವ ವಿಜೇಂದರ್ ಮತ್ತು ಓರಿಯೆಂಟಲ್ ಚಾಂಪಿಯನ್ ಆಗಿರುವ ಜುಲ್ಪಿಕರ್ ಮೈಮಯ್ತ್  ಪರಸ್ಪರರ ಬೆಲ್ಟ್ ಪಣಕ್ಕಿಟ್ಟು ಫೈಟ್ ನಡೆಸುವುದಾಗಿ ನಿರ್ಧಾರವಾಗಿತ್ತು. ಆದರೆ  ಈಗ ಪಂದ್ಯಕ್ಕೆ ಸುಮಾರು 1 ತಿಂಗಳು ಬಾಕಿ ಇರುವ ನಡುವೆಯೇ ಜುಲ್ಫಿಕರ್ ಪಂದ್ಯದಿಂದ ಹಿಂದಕ್ಕೆ ಸರಿದಿದ್ದಾರೆ.

ಜುಲ್ಫಿಕರ್ ಹಿಂದೆ ಸರಿದಿದ್ದಕ್ಕೆ ಕಾರಣ ತಿಳಿದಿಲ್ಲ, ಬೇರೆ ಯಾರೇ ನನ್ನ ವಿರುದ್ಧ ಸ್ಪರ್ಧಿಸಿದರೂ ನಾನು ಕಣಕ್ಕೆ ಸಿದ್ಧನಾಗಿರುತ್ತೇನೆ: ವಿಜೇಂದರ್
ಇನ್ನು ಜುಲ್ಫಿಕರ್ ಕಣದಿಂದ ಹಿಂದೆ ಸರಿದ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ವಿಜೇಂದರ್ ಸಿಂಗ್, "‘ಜುಲ್ಪಿಕರ್ ಪಂದ್ಯದಿಂದ ಹಿಂದಕ್ಕೆ ಸರಿಯಲು ಖಂಡಿತವಾಗಿಯೂ ಅವರದೇ ಆದ ಕಾರಣಗಳಿರುತ್ತವೆ. ಮುಂದಿನ  ಎದುರಾಳಿ ಯಾರೇ ಆಗಿದ್ದರೂ ಅವರ ಎದುರು ಫೈಟ್ ಮಾಡಲು ನಾನು ಸಿದ್ಧವಿದ್ದೇನೆ. ನನ್ನ ಪ್ರಮೋಟರ್ಸ್ ಹೊಸ ಎದುರಾಳಿಯನ್ನು ಕರೆ ತರುವ ವಿಶ್ವಾಸವಿದೆ. ಇದಕ್ಕೆ ತಕ್ಕ ರೀತಿಯ ಪೂರ್ವ ತಯಾರಿ ನಡೆಸಲಿದ್ದೇನೆ ಎಂದು  ವಿಶ್ವಾಸದಿಂದ ಹೇಳಿದ್ದಾರೆ.

2015ರಲ್ಲಿ ವೃತ್ತಿಪರ ಬಾಕ್ಸಿಂಗ್ ಪ್ರವೇಶಿಸಿದ ವಿಜೇಂದರ್ ಈವರೆಗೂ ಆಡಿರುವ ಎಂಟೂ ಪಂದ್ಯಗಳನ್ನು ಗೆದ್ದು ಅಜೇಯರಾಗಿದ್ದಾರೆ. ಅತ್ತ ಜುಲ್ಪಿಕರ್ ಕೂಡ ವೃತ್ತಿಪರ ಬಾಕ್ಸಿಂಗ್​ನಲ್ಲಿ ವಿಜೇಂದರ್ ಸಿಂಗ್ ​ರಷ್ಟೇ ಅನುಭವಿಯಾಗಿದ್ದು,  ಆಡಿದ 8 ಪಂದ್ಯಗಳ ಪೈಕಿ 7ರಲ್ಲಿ ಗೆದ್ದು, 1 ಡ್ರಾದೊಂದಿಗೆ ಅಜೇಯ ದಾಖಲೆಯನ್ನೇ ಹೊಂದಿದ್ದಾರೆ. ಹೀಗಾಗಿ ಇವರಿಬ್ಬರ ಮುಖಾಮುಖಿ ಈಗಾಗಲೆ ಸಾಕಷ್ಟು ಕುತೂಹಲ ಕೆರಳಿಸಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com