ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್ ಷಿಪ್: ಭಾರತದ ಸುಂದರ್ ಸಿಂಗ್ ಗುರ್ಜಾರ್ ಗೆ ಚಿನ್ನ!

ಲಂಡನ್ ನಲ್ಲಿ ನಡೆಯುತ್ತಿರುವ ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ನ ಮೊದಲ ದಿನವೇ ಭಾರತ ತನ್ನ ಪದಕಗಳ ಖಾತೆ ತೆರೆದಿದ್ದು, ಜಾವೆಲಿನ್ ತ್ರೋ ಸ್ಪರ್ಧೆಯ ಎಫ್46 ವಿಭಾಗದಲ್ಲಿ ಭಾರತದ ಸುಂದರ್ ಸಿಂಗ್ ಗುರ್ಜಾರ್ ಚಿನ್ನದ ಪದಕ ಗಳಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಲಂಡನ್: ಲಂಡನ್ ನಲ್ಲಿ ನಡೆಯುತ್ತಿರುವ ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ ನ ಮೊದಲ ದಿನವೇ ಭಾರತ ತನ್ನ ಪದಕಗಳ ಖಾತೆ ತೆರೆದಿದ್ದು, ಜಾವೆಲಿನ್ ತ್ರೋ ಸ್ಪರ್ಧೆಯ ಎಫ್46 ವಿಭಾಗದಲ್ಲಿ ಭಾರತದ ಸುಂದರ್ ಸಿಂಗ್  ಗುರ್ಜಾರ್ ಚಿನ್ನದ ಪದಕ ಗಳಿಸಿದ್ದಾರೆ.

ಸುಂದರ್ ಅವರು 60.36 ಮೀ. ಜಾವೆಲಿನ್ ಎಸೆದಿದ್ದು, ಅವರ ಬಳಿಕ ಸ್ಥಾನದಲ್ಲಿ ಶ್ರೀಲಂಕಾದ ಅಥ್ಲೀಟ್ ದಿನೇಶ್ ಪ್ರಿಯಾಂತಾ ಹೆರಾತ್  2ನೇ ಸ್ಥಾನಗಳಿಸಿದ್ದಾರೆ. ದಿನೇಶ್ ಪ್ರಿಯಾಂತಾ ಹೆರಾತ್ ಅವರು 57.93 ಮೀಟರ್ ದೂರಕ್ಕೆ  ಜಾವೆಲಿನ್ ಎಸೆಯುವ ಮೂಲಕ 2ನೇ ಸ್ಥಾನಗಳಿಸಿ ಬೆಳ್ಳಿ ಪದಕ ಪಡೆದಿದ್ದಾರೆ.

ಈ ಬಗ್ಗೆ ಮಾಧ್ಯಮಗಳೊಂದಿಗೆ ಖುಷಿ ಹಂಚಿಕೊಂಡಿರುವ  ಸುಂದರ್ ಸಿಂಗ್ ಗುರ್ಜಾರ್ ಅವರು, ಪ್ರಸಕ್ತ ಸಾಲಿನ ಪ್ರದರ್ಶನ ತಮಗೆ ಅತೀವ ಸಂತಸ ತಂದಿದೆ. ಮುಂದಿನ ದಿನಗಳಲ್ಲಿ ಪ್ರದರ್ಶನವನ್ನು ಇನ್ನೂ  ಉತ್ತಮಗೊಳಿಸುತ್ತೇನೆ. ಕ್ರೀಡಾಕೂಟದ ಸಿದ್ಧತೆಯ ಹಿನ್ನೆಲೆಯಲ್ಲಿ 3 ವರ್ಷಗಳಿಂದ ಕುಟುಂಬಸ್ಥರನ್ನು ಭೇಟಿಯಾಗಿರಲಿಲ್ಲ. ಇದೀಗ ಚಿನ್ನದ ಪದಕದೊಂದಿಗೇ ಕುಟುಂಬಸ್ಥರನ್ನು ಭೇಟಿಯಾಗುವುದೇ ನಾನು ಮಾಡುವ ಮೊದಲ  ಕೆಲಸವಾಗಿದೆ ಎಂದು ಹರ್ಷ ಹಂಚಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com