2021ಕ್ಕೆ ಪ್ರಥಮ ಬಾರಿಗೆ ವಿಶ್ವ ಪುರುಷರ ಬಾಕ್ಸಿಂಗ್ ಚಾಂಪಿಯನ್ಶಿಪ್ ಆಯೋಜಿಸಲಿರುವ ಭಾರತ

2021ಕ್ಕೆ ಭಾರತ ಪ್ರಥಮ ಬಾರಿಗೆ ವಿಶ್ವ ಬಾಕ್ಸಿಂಗ್ ಚಾಂಪಿಯನ್ಶಿಪ್ ಟೂರ್ನಿಯನ್ನು ಆಯೋಜಿಸಲಿದೆ ಎಂದು ಅಂತಾರಾಷ್ಟ್ರೀಯ ಬಾಕ್ಸಿಂಗ್...
ಪುರುಷರ ಬಾಕ್ಸಿಂಗ್
ಪುರುಷರ ಬಾಕ್ಸಿಂಗ್
ಮಾಸ್ಕೋ: 2021ಕ್ಕೆ ಭಾರತ ಪ್ರಥಮ ಬಾರಿಗೆ ವಿಶ್ವ ಬಾಕ್ಸಿಂಗ್ ಚಾಂಪಿಯನ್ಶಿಪ್ ಟೂರ್ನಿಯನ್ನು ಆಯೋಜಿಸಲಿದೆ ಎಂದು ಅಂತಾರಾಷ್ಟ್ರೀಯ ಬಾಕ್ಸಿಂಗ್ ಅಸೋಸಿಯೇಷನ್(ಎಐಬಿಎ) ಘೋಷಿಸಿದೆ. 
ಎರಡು ದಿನಗಳ ಕಾಲ ಮಾಸ್ಕೋದಲ್ಲಿ ನಡೆದ ಕಾರ್ಯನಿರ್ವಾಹಕ ಸಮಿತಿ ಸಭೆಯಲ್ಲಿ ಅಂತಿಮವಾಗಿ ಈ ನಿರ್ಣಯಕ್ಕೆ ಬರಲಾಗಿದೆ. 2019ರ ವಿಶ್ವ ಪುರುಷರ ಬಾಕ್ಸಿಂಗ್ ಚಾಂಪಿಯನ್ಶಿಪ್ ಕೂಟ ರಷ್ಯಾದ ಸೊಚಿ ನಗರದಲ್ಲಿ ನಡೆಯಲಿದೆ. ಇನ್ನು ವಿಶ್ವ ಮಹಿಳಾ ಬಾಕ್ಸಿಂಗ್ ಚಾಂಪಿಯನ್ಶಿಪ್ ಆಯೋಜಿಸಿದ್ದ ಭಾರತ ಮುಂದಿನ ವರ್ಷ ಮತ್ತೊಮ್ಮೆ ಟೂರ್ನಿಯನ್ನು ಆಯೋಜಿಸಲಿದೆ ಎಂದು ಎಐಬಿಎ ಅಧ್ಯಕ್ಷ ಚಿಂಗ್ ಕುವೊ ವೂ ಹೇಳಿದ್ದಾರೆ. 
ಮುಂಬರುವ ವಿಶ್ವ ಮಹಿಳಾ ಬಾಕ್ಸಿಂಗ್ ಚಾಂಪಿಯನ್ಶಿಪ್ ಅನ್ನು ಆಯೋಜಿಸುವುದಾಗಿ ಟರ್ಕಿಶ್ ಬಾಕ್ಸಿಂಗ್ ಫೆಡರೇಷನ್ ಬೇಡಿಕೆ ಇಟ್ಟಿತ್ತು. ಆದರೆ ಎಐಬಿಎ 2019 ವಿಶ್ವ ಮಹಿಳಾ ಬಾಕ್ಸಿಂಗ್ ಚಾಂಪಿಯನ್ಶಿಪ್ ಟೂರ್ನಿ ಆಯೋಜಿಸಲು ಅನುಮತಿ ನೀಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com