ಕೋಚ್ ಮೇಲೆ ಎಷ್ಟೇ ದ್ವೇಷವಿದ್ದರೂ, ಅವರೊಂದಿಗಿರಿ: ಕೊಹ್ಲಿಗೆ ಬಿಂದ್ರಾ ಸಲಹೆ

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಜೊತೆಗಿನ ಭಿನ್ನಾಭಿಪ್ರಾಯದಿಂದಾಗಿ ತಂಡದ ಕೋಚ್ ಅನಿಲ್ ಕುಂಬ್ಳೆ ತಮ್ಮ ಹುದ್ದೆಗೆ ರಾಜಿನಾಮೆ ನೀಡಿದ್ದರು. ಈ ಪ್ರಕರಣ ಕುರಿತಂತೆ...
ಅನಿಲ್ ಕುಂಬ್ಳೆ-ವಿರಾಟ್ ಕೊಹ್ಲಿ-ಅಭಿವನ್ ಬಿಂದ್ರಾ
ಅನಿಲ್ ಕುಂಬ್ಳೆ-ವಿರಾಟ್ ಕೊಹ್ಲಿ-ಅಭಿವನ್ ಬಿಂದ್ರಾ
ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಜೊತೆಗಿನ ಭಿನ್ನಾಭಿಪ್ರಾಯದಿಂದಾಗಿ ತಂಡದ ಕೋಚ್ ಅನಿಲ್ ಕುಂಬ್ಳೆ ತಮ್ಮ ಹುದ್ದೆಗೆ ರಾಜಿನಾಮೆ ನೀಡಿದ್ದರು. ಈ ಪ್ರಕರಣ ಕುರಿತಂತೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿರುವ ಒಲಂಪಿಕ್ಸ್ ಚಿನ್ನದ ಪದಕ ವಿಜೇತ ಅಭಿನವ್ ಬಿಂದ್ರಾ ಅವರು ಕೋಚ್ ಜೊತೆಗೆ ಎಷ್ಟೇ ದ್ವೇಷವಿದ್ದರು ಅವರೊಂದಿಗೆ ಅನುಸರಿಸಿಕೊಂಡು ಹೋಗುವಂತೆ ಪರೋಕ್ಷವಾಗಿ ವಿರಾಟ್ ಕೊಹ್ಲಿಗೆ ಸಲಹೆ ನೀಡಿದ್ದಾರೆ. 
ತಮ್ಮ ಅನುಭವದ ವಿಷಯವನ್ನೇ ಇಟ್ಟುಕೊಂಡು ಟ್ವೀಟ್ ಮಾಡಿರುವ ಅಭಿನವ್ ಬಿಂದ್ರಾ ವಿರಾಟ್ ಕೊಹ್ಲಿ ಅವರಿಗೆ ಸಲಹೆ ನೀಡಿದ್ದಾರೆ. ಕಳೆದ 20 ವರ್ಷಗಳಿಂದ ನನ್ನ  ಕೋಚ್ ಅನ್ನು ಬಹುವಾಗಿ ದ್ವೇಷಿಸುತ್ತಿದ್ದೇನೆ ಆದರೆ ನಾನು ಅವರನ್ನು ಬಿಟ್ಟು ಹೋಗಲಿಲ್ಲ ಹೀಗಾಗಿ ನಾನು ಕೆಲವೊಂದು ಟೂರ್ನಿಗಳಲ್ಲಿ ದಿಗ್ವಿಜಯ ಸಾಧಿಸಲು ಸಾಧ್ಯವಾಯಿತು ಎಂದು ಹೇಳಿದ್ದಾರೆ. 
ಜರ್ಮನ್ ಮೂಲದ ಉವ್ ರಿಸ್ಟೀರೆರ್ ಅವರು ಬಹು ವರ್ಷಗಳಿಂದ ನನ್ನ ಕೋಚಿಂಗ್ ಸಿಬ್ಬಂದಿಯಲ್ಲಿ ಅವರು ಒಬ್ಬರು. ಅವರ ಸಲಹೆ ಸೂಚನೆಗಳಿಂದಲೇ ನಾನು 2008ರ ಬೀಜಿಂಗ್ ಒಲಿಂಪಿಕ್ಸ್ ನಲ್ಲಿ ಶೂಟಿಂಗ್ ನಲ್ಲಿ ಚಿನ್ನದ ಪದಕ ಗೆಲ್ಲಲು ಸಾಧ್ಯವಾಯಿತು. ಎಂದು ಹೇಳಿದ್ದಾರೆ. 
ವಿರಾಟ್ ಕೊಹ್ಲಿ ಅವರು ತಮ್ಮದೇ ಆದ ಕಟ್ಟುಪಾಡುಗಳನ್ನು ಹೊಂದಿದ್ದಾರೆ. ಕೊಹ್ಲಿ ನನ್ನ ಕೋಚಿಂಗ್ ಶೈಲಿಯ ಬಗ್ಗೆ ಭಿನ್ನಾಭಿಪ್ರಾಯ ಹೊಂದಿದ್ದರು. ತಮ್ಮ ನಡುವಿನ ಭಿನ್ನಾಭಿಪ್ರಾಯಗಳನ್ನು ಬಗೆಹರಿಸುವುದಾಗಿ ಬಿಸಿಸಿಐ ಭರವಸೆ ನೀಡಿತಾದರೂ ರಾಜೀನಾಮೆ ನೀಡುವುದು ಸೂಕ್ತ ಎನಿಸಿತು ಎಂದು ಕುಂಬ್ಳೆ ಟ್ವೀಟ್ ಮಾಡಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com