ನವದೆಹಲಿ: ಅಂತಾರಾಷ್ಟ್ರೀಯ ಫುಟ್ಬಾಲ್ ಫೆಡರೇಷನ್ (ಫಿಫಾ) ಗುರುವಾರ ಪ್ರಕಟಿಸಿರುವ ನೂತನ ರಾಕಿಂಗ್ ಪಟ್ಟಿಯಲ್ಲಿ ಭಾರತ ಕಳೆದ 21 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ 100ನೇ ಸ್ಥಾನ ತಲುಪಿದೆ.
ಎರಡು ದಶಕಗಳ ನಂತರ ಭಾರತ ಇದೇ ಮೊದಲ ಬಾರಿ ಉತ್ತಮ ಸ್ಥಾನ ತಲುಪಿದ್ದು, 21 ವರ್ಷಗಳಲ್ಲಿ ಮೊದಲ ಬಾರಿ ಹಾಗೂ ಸ್ವಾಂತಂತ್ರ್ಯ ನಂತರ ಆರನೇ ಬಾರಿ ಫಿಫಾ ರ್ಯಾಂಕಿಂಗ್ ನ ಟಾಪ್ 100ರಲ್ಲಿ ಸ್ಥಾನ ಪಡೆದಿದೆ.
1996ರಲ್ಲಿ ಭಾರತ 94ನೇ ಸ್ಥಾನ ತಲುಪಿತ್ತು. ಆ ನಂತರ 1993ರಲ್ಲಿ 99ನೇ ಸ್ಥಾನ ಹಾಗೂ 1996ರಲ್ಲಿ 100ನೇ ಸ್ಥಾನ ತಲುಪಿತ್ತು.
ಭಾರತ ಫಿಫಾ ರ್ಯಾಂಕಿಂಗ್ ನಲ್ಲಿ 100ನೇ ಸ್ಥಾನ ಪಡೆದಿರುವು ಖುಷಿ ತಂದಿದೆ. ಇದು ನಾವು ಸರಿಯಾದ ಮಾರ್ಗದಲ್ಲಿ ಸಾಗುತ್ತಿದ್ದೇವೆ ಎಂಬುದನ್ನು ಸೂಚಿಸುತ್ತದೆ ಎಂದು ರಾಷ್ಟ್ರೀಯ ಕೋಚ್ ಸ್ಟೀಫನ್ ಕಾನ್ ಸ್ಟೆಂಟೈನ್ ಅವರು ಹೇಳಿದ್ದಾರೆ.