ಸಾಕ್ಷಿ ಮಲಿಕ್
ಸಾಕ್ಷಿ ಮಲಿಕ್

ಏಷ್ಯಾ ಕುಸ್ತಿ ಚಾಂಪಿಯನ್ ಷಿಪ್: ಭಾರತ ತಂಡವನ್ನು ಮುನ್ನಡೆಸಲಿರುವ ಸಾಕ್ಷಿ ಮಲಿಕ್

ಏಷ್ಯಾ ಕುಸ್ತಿ ಚಾಂಪಿಯನ್ಶಿಪ್ ನಾಳೆ ದೆಹಲಿಯಲ್ಲಿ ಆರಂಭವಾಗಲಿದ್ದು ರಿಯೊ ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಏಷ್ಯಾ ಕುಸ್ತಿ ಚಾಂಪಿಯನ್ಶಿಪ್ ನಾಳೆ ದೆಹಲಿಯಲ್ಲಿ ಆರಂಭವಾಗಲಿದ್ದು ರಿಯೊ ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ...
ನವದೆಹಲಿ: ಏಷ್ಯಾ ಕುಸ್ತಿ ಚಾಂಪಿಯನ್ಶಿಪ್ ನಾಳೆ ದೆಹಲಿಯಲ್ಲಿ ಆರಂಭವಾಗಲಿದ್ದು ರಿಯೊ ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಸಾಕ್ಷಿ ಮಲಿಕ್ ಮುಖ್ಯ ಆಕರ್ಷಣೆಯಾಗಿದ್ದು, ಭಾರತ ತಂಡವನ್ನು ಮುನ್ನಡೆಸಲಿದ್ದಾರೆ.
ಭಾರತದ ಪ್ರಮುಖ ಕುಸ್ತಿಪಟುಗಳಾದ ಯೋಗೇಶ್ವರ ದತ್, ಸುಶಿಲ್ ಕುಮಾರ್ ಮತ್ತು ಖ್ಯಾತ ಪೋಗಟ್ ಸಹೋದರಿಯರಾದ ಗೀತಾ ಮತ್ತು ಬಬಿತಾ ಮೊದಲಾದವರ ಗೈರು ಹಾಜರಿಯಲ್ಲಿ ಸಾಕ್ಷಿ ಮಲಿಕ್, ಒಲಂಪಿಯನ್ ಸಂದೀಪ್ ತೊಮರ್ ಮತ್ತು ಬಜ್ರಂಗ್ ಪುನಿಯಾ ಅವರು ಭಾರತದ ಭರವಸೆಗಳಾಗಿದ್ದಾರೆ.
ಕಳೆದ ವರ್ಷ ಥೈಲ್ಯಾಂಡ್ ನ ಬ್ಯಾಂಕಾಂಕ್ ನಲ್ಲಿ ನಡೆದ ಪಂದ್ಯಾವಳಿಯಲ್ಲಿ ಭಾರತ ಒಂದು ಚಿನ್ನ, 3 ಬೆಳ್ಳಿ ಮತ್ತು 5 ಕಂಚಿನ ಪದಕವನ್ನು ಗೆದ್ದುಕೊಂಡಿತ್ತು. ಸಂದೀಪ್(ಪುರುಷರ 57 ಕೆಜಿ ಫ್ರೀಸ್ಟೈಲ್ ವಿಭಾಗ) ಮಾತ್ರ ಚಿನ್ನದ ಪದಕ ಗಳಿಸಿದ್ದರು.
ಈ ವರ್ಷ ಭಾರತೀಯ ಕುಸ್ತಿಪಟುಗಳಿಗೆ ಇದು ಪ್ರಮುಖ ಸ್ಪರ್ಧೆಯಾಗಿದ್ದು ಚ್ಯಾಂಪಿಯನ್ ಷಿಪ್ ನಲ್ಲಿ 24 ಮಂದಿ ಆಟಗಾರರು ಭಾಗವಹಿಸಲಿದ್ದಾರೆ. ಫ್ರೀ ಸ್ಟೈಲ್, ಮಹಿಳೆಯರು ಮತ್ತು ಗ್ರಿಕೊ-ರೋಮನ್ ವಿಭಾಗಗಳಲ್ಲಿ ತಲಾ 8 ಮಂದಿ ಆಟಗಾರರು ಭಾಗವಹಿಸಲಿದ್ದಾರೆ.ಈ ಬಾರಿ ಎಲ್ಲರ ಗಮನ ಸಾಕ್ಷಿ ಮಲಿಕ್ ಮೇಲೆ ಇದೆ.
ಭಾರತ ತಂಡ: 
ಪುರುಷರ ಫ್ರೀ ಸ್ಟೈಲ್: ಸಂದೀಪ್ ತೊಮರ್, ರವೀಂದರ್, ದೀಪಕ್, ಗುರ್ಪೀತ್, ಹರ್ಪೀತ್, ಅನಿಲ್ ಕುಮಾರ್, ಹರ್ದೀಪ್, ನವೀನ್.
ಗ್ರಿಕೊ ರೊಮ್ ಸ್ಟೈಲ್: ಜ್ಞಾನೇಂದರ್, ರವೀಂದರ್, ದೀಪಕ್, ಗುರ್ಪೀತ್, ಹರ್ಪೀತ್, ಅನಿಲ್ ಕುಮಾರ್, ಹರ್ದೀಪ್, ನವೀನ್.
ಮಹಿಳೆಯರ ಫ್ರೀ ಸ್ಟೈಲ್: ರಿತು, ಪಿಂಕಿ, ವಿನ್ಸ್, ಸಾಕ್ಷಿ ಮಲಿಕ್, ಸರಿತಾ, ರಿಟು, ದಿವ್ಯಾ ಕಕ್ರನ್ ಮತ್ತು ಜ್ಯೋತಿ.

Related Stories

No stories found.

Advertisement

X
Kannada Prabha
www.kannadaprabha.com