ಏಷ್ಯಾ ಕಪ್ ಹಾಕಿ: ಸೆಮಿ ಫೈನಲ್ ತಲುಪಿದ ಭಾರತ
ಕ್ರೀಡೆ
ಏಷ್ಯಾ ಕಪ್ ಹಾಕಿ: ಸೆಮಿ ಫೈನಲ್ ತಲುಪಿದ ಭಾರತ
ಪಾನ್ ನ ಕಕಮಿಗಹರನಲ್ಲಿ ನಡೆಯುತ್ತಿರುವ ಮಹಿಳೆಯರ ಏಷ್ಯಾ ಕಪ್ ಹಾಕಿ ಚಾಂಪಿಯನ್‌ಷಿಪ್‌ನಲ್ಲಿ ಭಾರತೀಯ ಮಹಿಳಾ ಹಾಕಿ ಪಡೆ ಸೆಮಿಫೈನಲ್ ಪ್ರವೇಶಿಸಿದೆ.
ಕಕಮಿಗಹರ: ಜಪಾನ್ ನ ಕಕಮಿಗಹರನಲ್ಲಿ ನಡೆಯುತ್ತಿರುವ ಮಹಿಳೆಯರ ಏಷ್ಯಾ ಕಪ್ ಹಾಕಿ ಚಾಂಪಿಯನ್‌ಷಿಪ್‌ನಲ್ಲಿ ಭಾರತೀಯ ಮಹಿಳಾ ಹಾಕಿ ಪಡೆ ಸೆಮಿಫೈನಲ್ ಪ್ರವೇಶಿಸಿದೆ. ನಿನ್ನೆ ನಡೆದ ಕ್ವಾರ್ಟರ್ ಫೈನಲ್‌ನಲ್ಲಿ ಭಾರತದ ಮಹಿಳೆಯರು ಕಜಕಸ್ತಾನವನ್ನು 7–1 ಗೋಲುಗಳ ಅಂತರದಿಂದ ಸೋಲಿಸಿ ಮುಂದಿನ ಹಂತಕ್ಕೆ ಪ್ರವೇಶ ಪಡೆದಿದ್ದಾರೆ.
ಗುರ್ಜಿತ್ ಕೌರ್ ಅವರು ಮೂರು (4 ', 42' ಮತ್ತು 56 '), ನವನೀತ್ ಕೌರ್ ಎರಡು (22 'ಮತ್ತು 27'), ಡೀಪ್ ಗ್ರೇಸ್ ಎರಡು ಪೆನಾಲ್ಟಿ ಗೋಲು (16 'ಮತ್ತು 41') ದಾಖಲಿಸುವುದರೊಡನೆ ಭಾರತ ಪಂದ್ಯಾವಳಿಯಲ್ಲಿ ಅಜೇಯನಾಗಿ ಉಳಿಯಿತು ಮತ್ತು ಸೆಮಿ ಫೈನಲ್ ಪ್ರವೇಶಿಸಿತು.
ಇದಕ್ಕೂ ಮುನ್ನ ಪಂದ್ಯ ಪ್ರಾರಂಭವಾದ ಎರಡನೇ ನಿಮಿಷದಲ್ಲೇ ಕಜಕಸ್ತಾನ ತನ್ನ ಮೊದಲ ಗೋಲು ದಾಖಲಿಸಿತ್ತು. ಆದರೆ ಆಟದ ಮುಂದಿನ ಹಂತಗಳಲ್ಲಿ ಭಾರತೀಯ ಮಹಿಳಾ ತಂಡದ ದಾಳಿಗೆ ಕಂಗೆಟ್ಟು ಗೋಲು ಗಳಿಸುವುದಕ್ಕೆ ವಿಪಲವಾಯಿತು..
ಮುಂದೆ ನಡೆವ ಸೆಮಿ ಫೈನಲ್ ಸುತ್ತಿನಲ್ಲಿ ಭಾರತೀಯ ವನಿತೆಯರು ಜಪಾನ್ ತಂಡವನ್ನು ಎದುರಿಸಲಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ