ಢಾಕಾ: ಏಷ್ಯಾಕಪ್ ಹಾಕಿ ಟೂರ್ನಿಯ 2ನೇ ಪಂದ್ಯದಲ್ಲಿ ಆತಿಥೇಯ ಬಾಂಗ್ಲಾದೇಶ ತಂಡದ ವಿರುದ್ಧ ಭಾರತ ಭರ್ಜರಿ ಜಯ ಗಳಿಸಿದೆ.
ನ್ಯಾಷನಲ್ ಹಾಕಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಬಲಾಢ್ಯ ತಂಡವಾಗಿರುವ ಭಾರತ ಬಾಂಗ್ಲಾದೇಶದ ವಿರುದ್ಧ 7-0 ಗೋಲುಗಳಿಂದ ಗೆಲುವು ಸಾಧಿಸಿ ಏಷ್ಯಾಕಪ್ ಹಾಕಿಯಲ್ಲಿ 2ನೇ ಸುತ್ತಿಗೆ ಲಗ್ಗೆ ಇಟ್ಟಿದೆ.
ಮೊದಲ ಪಂದ್ಯದಲ್ಲಿ ಭಾರತ ಜಪಾನ್ ವಿರುದ್ಧ 5-1 ಗೋಲುಗಳಿಂದ ಮಣಿಸಿತ್ತು. ಇನ್ನು ಸತತ ಎರಡು ಪಂದ್ಯಗಳ ಗೆಲವಿನೊಂದಿಗೆ 6 ಅಂಕಗಳನ್ನು ಸಂಪಾದಿಸಿದ್ದು ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಸಂಪಾದಿಸಿದೆ.
ಲೀಗ್ ನಲ್ಲಿ 2 ಗೆಲುವು ಸಾಧಿಸಿರುವ ಭಾರತ ತಂಡ ಅಂತಿಮ ಪಂದ್ಯದಲ್ಲಿ ಭಾನುವಾರ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು ಎದುರಿಸಲಿದೆ.