ಢಾಕಾ: ಢಾಕಾದಲ್ಲಿ ನಡೆಯುತ್ತಿರುವ ಏಷ್ಯಾ ಕಪ್ ಹಾಕಿಯ ಪಂದ್ಯದಲ್ಲಿ ಭಾರತ ಮಲೇಷ್ಯಾ ವಿರುದ್ಧ ಸೂಪರ್ 4s ಪಂದ್ಯದಲ್ಲಿ 6-2 ಅಂತರದಿಂದ ಗೆದ್ದಿದೆ.
ಆಕಾಶ್ ದೀಪ್ ಸಿಂಗ್, ಹರ್ಮನ್ ಪ್ರೀತ್ ಸಿಂಗ್, ಎಸ್ ಕೆ ಉತ್ತಪ್ಪ, ಗುರ್ಜಾಂತ್ ಸಿಂಗ್, ಎಸ್ ವಿ ಸುನಿಲ್ ಹಾಗೂ ಸರ್ದಾರ್ ಸಿಂಗ್ ಭಾರತದ ಪರವಾಗಿ ಗೋಲು ದಾಖಲಿಸಿದ್ದಾರೆ. ಮಲೇಷ್ಯಾ ಪರ ರಾಝೀ ರಹೀಮ್, ರಮದಾನ್ ರೋಸ್ಲಿ ಗೋಲು ದಾಖಲಿಸಿದ್ದಾರೆ.