ಕಾಮನ್ ವೆಲ್ತ್ ಶೂಟಿಂಗ್: ಭಾರತ ಪುರುಷರ ತಂಡದಿಂದ ಚಿನ್ನ, ಬೆಳ್ಳಿ, ಕಂಚಿನ ಪದಕ ಕ್ಲೀನ್ ಸ್ವೀಪ್

ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಕಾಮನ್ ವೆಲ್ತ್ ಶೂಟಿಂಗ್ ಚಾಂಪಿಯನ್ ಷಿಪ್ ನಲ್ಲಿ ಭಾರತದ ಪುರುಷರ ತಂಡ ಇತಿಹಾಸ ಬರೆದಿದ್ದು, 10 ಮೀ ರೈಫಲ್ ವಿಭಾಗದಲ್ಲಿ ಮೊದಲ ಮೂರು ಸ್ಥಾನ ಪಡೆಯುವ ಮೂಲಕ ಚಿನ್ನ, ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ಸಾಧಿಸಿದ್ದಾರೆ.
ಕ್ಲೀನ್ ಸ್ವೀಪ್ ಮಾಡಿದ ಪುರುಷರ ತಂಡ, ಹಾಗೂ ಚಿನ್ನ ಗೆದ್ದ ಪೂಜಾ ಘಟ್ಕರ್
ಕ್ಲೀನ್ ಸ್ವೀಪ್ ಮಾಡಿದ ಪುರುಷರ ತಂಡ, ಹಾಗೂ ಚಿನ್ನ ಗೆದ್ದ ಪೂಜಾ ಘಟ್ಕರ್
ಬ್ರಿಸ್ಬೇನ್: ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಕಾಮನ್ ವೆಲ್ತ್ ಶೂಟಿಂಗ್ ಚಾಂಪಿಯನ್ ಷಿಪ್ ನಲ್ಲಿ ಭಾರತದ ಪುರುಷರ ತಂಡ ಇತಿಹಾಸ ಬರೆದಿದ್ದು, 10 ಮೀ ರೈಫಲ್ ವಿಭಾಗದಲ್ಲಿ ಮೊದಲ ಮೂರು ಸ್ಥಾನ ಪಡೆಯುವ ಮೂಲಕ  ಚಿನ್ನ, ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ಸಾಧಿಸಿದ್ದಾರೆ.
10 ಮೀ. ಏರ್ ಪಿಸ್ತೂಲ್ ವಿಭಾಗದಲ್ಲಿ ಭಾರತದ ಶೂಟರ್ ಶಾಹ್ಜಾರ್ ರಿಜ್ವಿ ಚಿನ್ನದ ಪದಕ ಗೆದ್ದರೆ, ಶೂಟರ್ ಓಂಕಾರ್ ಸಿಂಗ್ ಎರಡನೇ ಸ್ಥಾನ ಸಂಪಾದಿಸಿ ಬೆಳ್ಳಿ ಪದಕ ಗೆದ್ದರು. ಅಂತೆಯೇ ಮೂರನೇ ಸ್ಥಾನ ಪಡೆದ ಜೀತುರಾಯ್  ಕಂಚಿನ ಪದಕ ಸಾಧನೆ ಮಾಡುವ ಮೂಲಕ ಕ್ಲೀನ್ ಸ್ವೀಪ್ ಮಾಡಿದರು. 
ಮಹಿಳಾ ತಂಡದಿಂದಲೂ ಶ್ರೇಷ್ಠ ಸಾಧನೆ
ಇನ್ನು ಪುರುಷರಂತೆಯೇ ಭಾರತದ ಮಹಿಳಾ ತಂಡ ಕೂಡ ಶ್ರೇಷ್ಠ ಸಾಧನೆ ತೋರಿದ್ದು, 10 ಮೀಟರ್ ಏರ್ ರೈಫಲ್ ವಿಭಾಗದಲ್ಲಿ ಭಾರತದ ಪೂಜಾ ಘಟ್ಕರ್ ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದಾರೆ. ಫೈನಲ್ ನಲ್ಲಿ ಒಟ್ಟು 249.8  ಅಂಕಗಳಿಸಿದ ಪೂಜಾ ಅಂಕಗಳಿಕೆಯಲ್ಲಿ ಅಗ್ರ ಸ್ಥಾನಕ್ಕೇರುವ ಮೂಲಕ ಚಿನ್ನದ ಪದಕಕ್ಕೆ ಕೊರಳೊಡ್ಡಿದ್ದಾರೆ. ಅಂತೆಯೇ ಭಾರತದ ಮತ್ತೋರ್ವ ಮಹಿಳಾ ಶೂಟರ್ ಅಂಜುಮ್ ಮೌಡ್ಗಿಲ್ ಅವರು ಕೂಡ ಕಾಮನ್ ವೆಲ್ತ್ ಶೂಟಿಂಗ್  ಚಾಂಪಿಯನ್ ಷಿಪ್ ಬೆಳ್ಳಿ ಪದಕ ಜಯಿಸಿದ್ದು, ಒಟ್ಟು 248.7 ಅಂಕಗಳಿಸುವ ಮೂಲಕ 2ನೇ ಸ್ಥಾನಕ್ಕೇರಿ ಈ ಸಾಧನೆ ಮಾಡಿದ್ದಾರೆ.
ನಿನ್ನೆಯಷ್ಟೇ ಭಾರತದ ಮಹಿಳಾ ಶೂಟರ್ ಹೀನಾ ಸಿಂಧು 10 ಮೀಟರ್ ಏರ್ ಪಿಸ್ತೂಲ್ ವಿಭಾಗದಲ್ಲಿ ಚಿನ್ನೆ ಗೆದ್ದ ಸಾಧನೆ ಮಾಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com