ಸಿಂಹವನ್ನು ಮುಟ್ಟಲು ಹೋಗಿದ್ದ ರಗ್ಬಿ ಆಟಗಾರ ಜಸ್ಟ್ ಮಿಸ್!

ದಕ್ಷಿಣ ಆಫ್ರಿಕಾದ ಬ್ಲೋಮ್ ಫಾಂಟಿನ್ ಮೃಗಾಲಯಕ್ಕೆ ತೆರಳಿದ್ದ ವೇಲ್ಸ್ ರಗ್ಬಿ ತಂಡದ ಖ್ಯಾತ ಆಟಗಾರ ಸ್ಕಾಟ್ ಬಾಲ್ಡ್ ವಿನ್ ಅವರು ಸಿಂಹವನ್ನು ಮುದ್ದಾಡಲು ಹೋಗಿ...
ಸ್ಕಾಟ್ ಬಾಲ್ಡ್ ವಿನ್
ಸ್ಕಾಟ್ ಬಾಲ್ಡ್ ವಿನ್
Updated on: 
ವೇಲ್ಸ್: ದಕ್ಷಿಣ ಆಫ್ರಿಕಾದ ಬ್ಲೋಮ್ ಫಾಂಟಿನ್ ಮೃಗಾಲಯಕ್ಕೆ ತೆರಳಿದ್ದ ವೇಲ್ಸ್ ರಗ್ಬಿ ತಂಡದ ಖ್ಯಾತ ಆಟಗಾರ ಸ್ಕಾಟ್ ಬಾಲ್ಡ್ ವಿನ್ ಅವರು ಸಿಂಹವನ್ನು ಮುದ್ದಾಡಲು ಹೋಗಿ ಭಾರಿ ಪ್ರಮಾದದಿಂದ ಕೆಲವೇ ಕ್ಷಣಗಳಲ್ಲಿ ತಪ್ಪಿಸಿಕೊಂಡಿದ್ದಾರೆ. 
ಸ್ಕಾಟ್ ನಿನ್ನೆ ಮೃಗಾಲಯಕ್ಕೆ ತೆರಳಿದ್ದು ಅಲ್ಲಿ ಬೋನಿನೊಳಗಿದ್ದ ಸಿಂಹವನ್ನು ಮುಟ್ಟಿ ಪ್ರೀತಿಯಿಂದ ರಮಿಸಲು ಮುಂದಾಗಿದ್ದಾರೆ. ಈ ವೇಳೆ ಸಿಂಹ ತಿರುಗಿಬಿದ್ದು ಸ್ಕಾಟ್ ಅವರ ಕೈಯನ್ನು ಕಚ್ಚಿ ಹಿಡಿದಿದೆ. ತಕ್ಷಣ ಎಚ್ಚೆತ್ತುಕೊಂಡ ಸ್ಕಾಟ್ ಕೈಯನ್ನು ಹಿಂದಕ್ಕೆ ಎಳೆದುಕೊಂಡಿದ್ದಾರೆ. ಹೀಗಾಗಿ ದೊಡ್ಡ ಅನಾಹುತವೊಂದು ತಪ್ಪಿದೆ. 
ಸಿಂಹ ಕಚ್ಚಿದ್ದರಿಂದ ಸ್ಕಾಟ್ ಅವರನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಅವರ ಕೈಗೆ ಎರಡು ಹೊಲಿಗೆಗಳನ್ನು ಹಾಕಲಾಗಿದೆ. ಇನ್ನು ಆಟಗಾರರಿಗೆ ಮೃಗಾಲಯದ ಸಿಬ್ಬಂದಿಗಳು ಮೊದಲೇ ಪ್ರಾಣಿಗಳ ಹತ್ತಿರ ಹೋಗಬೇಡಿ ಎಂದು ಮುನ್ನಚ್ಚರಿಕೆ ನೀಡಿದ್ದರು ಸ್ಕಾಟ್ ಅವರು ಹೀಗೆ ಮಾಡಿದ್ದಾರೆ.
ವಿಡಿಯೋ ಕೃಪೆ: ಯೂಟ್ಯೂಬ್

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com