ಕಾಮನ್ವೆಲ್ತ್ ಗೇಮ್ಸ್ 2018: ಅರ್ಧ ಶತಕ ದಾಟಿದ ಭಾರತದ ಪದಕ ಬೇಟೆ

ಆಸ್ಪ್ರೇಲಿಯಾದ ಗೋಲ್ಡ್ ಕೋಸ್ಟ್ ನಲ್ಲಿ ನಡೆಯುತ್ತಿರುವ ಕಾಮನ್ವೆಲ್ತ್ ಕ್ರೀಡಾಕೂಟ 2018ರಲ್ಲಿ ಭಾರತದ ಪದಕ ಬೇಟೆ ಅರ್ಧ ಶತಕ ದಾಟಿದೆ...
ಭಾರತೀಯ ಅಥ್ಲೀಟ್ಸ್
ಭಾರತೀಯ ಅಥ್ಲೀಟ್ಸ್
ಗೋಲ್ಡ್ ಕೋಸ್ಟ್: ಆಸ್ಪ್ರೇಲಿಯಾದ ಗೋಲ್ಡ್ ಕೋಸ್ಟ್ ನಲ್ಲಿ ನಡೆಯುತ್ತಿರುವ ಕಾಮನ್ವೆಲ್ತ್ ಕ್ರೀಡಾಕೂಟ 2018ರಲ್ಲಿ ಭಾರತದ ಪದಕ ಬೇಟೆ ಅರ್ಧ ಶತಕ ದಾಟಿದೆ. 
ಒಟ್ಟಾರೆ ಕಾಮನ್ವೆಲ್ತ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತದ ಕ್ರೀಡಾಪಟುಗಳು ಉತ್ತಮ ಪ್ರದರ್ಶನ ನೀಡುತ್ತಿದ್ದು ಪದಕ ಬೇಟೆಯಲ್ಲಿ ಭರ್ಜರಿ ಸಾಧನೆ ಮಾಡಿದ್ದಾರೆ. ಪ್ರಸ್ತುತ ಮಹಿಳೆಯರ 50 ಕೆಜಿ ಫ್ರೀಸ್ಟೈಲ್ ಕುಸ್ತಿ ವಿಭಾಗದಲ್ಲಿ ವಿನೇಶ್ ಪೊಗಾಟ್ ಚಿನ್ನ ಗೆದ್ದಿದ್ದಾರೆ. ಇನ್ನು ಪುರುಷರ 125 ಕೆಜಿ ಫ್ರೀಸ್ಟೈಲ್ ಕುಸ್ತಿಯಲ್ಲಿ ಸುಮಿತ್ ಚಿನ್ನದ ಪದಕ ಗೆದ್ದಿದ್ದಾರೆ. 
ಕ್ರೀಡಾಕೂಟದ 10ನೇ ದಿನ ಭಾರತೀಯ ಕ್ರೀಡಾಪಟುಗಳ ಹೆಚ್ಚಿನ ಪದಕ ಬೇಟೆಯಲ್ಲಿ ತೊಡಗಿದ್ದಾರೆ. ಹಲವು ವಿಭಾಗಗಳಲ್ಲಿ ಕ್ರೀಡಾಪಟುಗಳು ತಮ್ಮದೇ ಆದ ಸಾಧನೆಯನ್ನು ಮಾಡಿದ್ದಾರೆ. ಮೊದಲ ಬಾರಿಗೆ ಕಾಮನ್ವೆಲ್ತ್ ಗೇಮ್ಸ್ ನಲ್ಲಿ ಆಡಿದ್ದ ಮೇರಿ ಕೂಮ್, ಬ್ಯಾಡ್ಮಿಂಟನ್ ಆಟಗಾರರು, ಜಾವಲಿನ್ ಥ್ರೋ, ಕುಸ್ತಿ, ಬಾಕ್ಸಿಂಗ್ ನಲ್ಲಿ ಪದಕ ಸಾಧನೆ ಮಾಡಿದ್ದಾರೆ. 
ಒಟ್ಟಾರೆ ಭಾರತ 23 ಚಿನ್ನ, 13 ಬೆಳ್ಳಿ, 15 ಕಂಚ ಸೇರಿದಂತೆ ಒಟ್ಟಾರೆ 51 ಪದಕಗಳನ್ನು ಗೆದ್ದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com